Kannada Beatz
News

ಅಲೆಮಾರಿಗಳ ಜೀವನ “ಬ್ಯಾರೇನೇ ಐತಿ” ಎನ್ನುತ್ತಿದ್ದಾನೆ ಗುರುದೇವ್ ಹೊಯ್ಸಳ

ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚುವರಿ ಚಿತ್ರೀಕರಣ ಮಾಡಿರುವ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೂ ಹಾಗೂ ಉತ್ತರ ಕರ್ನಾಟಕಕ್ಕೂ ಏನೋ ಒಂದು ವಿಶೇಷ ಕನೆಕ್ಷನ್ ಇರುವುದಂತೂ ಹೌದು. ಇದನ್ನು ಚಿತ್ರತಂಡವೇ ಸಾಕಷ್ಟು ಬಾರಿ ಹೇಳಿದ್ದುಂಟು. ಇದಕ್ಕೆ ಸರಿಯಾಗಿ ಇಂದು ‘ಗುರುದೇವ್ ಹೊಯ್ಸಳ’ ಸಿನೆಮಾ ತಂಡ ಮೂರನೇ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದೆ.

“ಬ್ಯಾರೇನೇ ಐತಿ” ಎನ್ನುವ ಈ ಹಾಡು ಉತ್ತರ ಕರ್ನಾಟಕ ಭಾಗದಲ್ಲಿ ವಾಸವಾಗಿರುವ ಅಲೆಮಾರಿಗಳ ಜೀವನ ಹೇಗಿರುತ್ತದೆ ಎಂದು ವರ್ಣನೆ ಮಾಡುತ್ತದೆ. ಅಲೆಮಾರಿಗಳ ಬಗ್ಗೆ ಇರುವ ಈ ಹಾಡಿಗೆ ಯೋಗರಾಜ್ ಭಟ್ ರವರು ಸಾಹಿತ್ಯ ಬರೆದಿದ್ದು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರವರು ಹಾಡಿಗೆ ಹೊಸ ರೂಪ ಕೊಟ್ಟು, ರಚನೆ ಮಾಡಿ ಬಹಳ ಸೊಗಸಾಗಿ ಹಾಡಿದ್ದಾರೆ.
ಈ ಹಿಂದೆ ರತ್ನನ್ ಪ್ರಪಂಚ ಚಿತ್ರದಲ್ಲಿ “ಅಲೆಮಾರಿಯೇ” ಎಂಬ ಸಾಲುಗಳನ್ನ ಹೊಂದಿರುವ ಹಾಡಿನಲ್ಲಿ ಧನಂಜಯ ಕಾಣಿಸಿಕೊಂಡಿದ್ದರು ಎನ್ನುವುದು ಮತ್ತೊಂದು ವಿಶೇಷ. ಆದರೇ ‘ಗುರುದೇವ್ ಹೊಯ್ಸಳ’ ಚಿತ್ರದಲ್ಲಿ ಅಲೆಮಾರಿಗಳಿಗೆ ವಿಶೇಷ ಪ್ರಾಮುಖ್ಯತೆ ಸಿಕ್ಕಂತಿದೆ. ಈ ಚಿತ್ರಕ್ಕೂ ಅಲೆಮಾರಿಗಳಿಗೂ ಏನು ಸಂಬಂಧ, ಯಾಕೆ ಅವರ ಪಂಗಡವನ್ನು ಈ ಸಿನೆಮಾ ಹಾಡಿನಲ್ಲಿ ಬಳಸಿಕೊಂಡಿದ್ದಾರೆ ಎನ್ನುವುದು ಸಿನೆಮಾದಲ್ಲೇ ನೋಡಬೇಕಿದೆ.

ಇನ್ನೇನು ಬಿಡುಗಡೆಯ ಬಿರುಸಿನಲ್ಲಿ ಇರುವ ಡಾಲಿ ಧನಂಜಯ ಅಭಿನಯದ 25ನೇ ಸಿನೆಮಾ ‘ಗುರುದೇವ್ ಹೊಯ್ಸಳ’, ದಿನೇ ದಿನೇ ಸಿನಿಪ್ರಿಯರ ಕುತೂಹಲ ಹೆಚ್ಚಿಸುತ್ತಿದೆ. ಮಾಸ್ ಟ್ರೈಲರ್, ಹಿಟ್ ಹಾಡುಗಳನ್ನ ಬಿಡುಗಡೆ ಮಾಡಿರುವ ಚಿತ್ರತಂಡ ಈಗಾಗಲೇ ಅರ್ಧ ಸಕ್ಸಸ್ ಕಂಡಂತಿದೆ.

ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ನಿರ್ಮಿಸಿರುವ ‘ಗುರುದೇವ್ ಹೊಯ್ಸಳ’ ಸಿನಿಮಾ ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ. ವಿಜಯ್ ಎನ್ ರವರು ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದಲ್ಲಿ ಮಾಸ್ ಮತ್ತು ಖಡಕ್ ಪೊಲೀಸ್ ಪಾತ್ರ ಧರಿಸಿರುವ ಡಾಲಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

Related posts

ಕೊನೆಯ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿರುವ ಆಪರೇಷನ್ ಲಂಡನ್ ಕೆಫೆ!
——————–

Kannada Beatz

ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸೋ “ಚೇಸ್”..!

Kannada Beatz

“ಹಳೇ ಸನ್ಯಾಸಿ” ಹಾಡು ಬಿಡುಗಡೆ ಮಾಡಿ “Congratulations ಬ್ರದರ್” ಎಂದು ಹೇಳಿದ ರಾಗಿಣಿ ದ್ವಿವೇದಿ, ರಾಜವರ್ಧನ್ ಹಾಗೂ ವಿಕ್ಕಿ ವರುಣ್

Kannada Beatz

Leave a Comment

Share via
Copy link
Powered by Social Snap