Kannada Beatz
News

ಸೆನ್ಸಾರ್ ಪಾಸಾದ “ಮಂಡ್ಯಹೈದ”

ಮಂಡ್ಯ ಹೈದನೊಬ್ಬ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಏನೇನೆಲ್ಲ ಸಾಹಸ ಮಾಡಿದ ಎಂಬುದನ್ನು ಹೇಳುವ ಚಿತ್ರ ಮಂಡ್ಯ ಹೈದ. ಈ ಚಿತ್ರದಲ್ಲಿ ಯುವನಟ ಅಭಯ್ ಚಂದ್ರಶೇಖರ್ ಮಂಡ್ಯದ ಹುಡುಗನಾಗಿ ಕಾಣಿಸಿಕೊಂಡಿಸಿದ್ದು,

ಭೂಮಿಕಾ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ ಮನಸಾಗಿದೆ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದ, ಅಭಯ್ ಈಗ ತಮ್ಮ ಎರಡನೇ ಚಿತ್ರದಲ್ಲಿ ಪಕ್ಕಾ ಮಂಡ್ಯಹುಡುಗನಾಗಿ ಹೊರಹೊಮ್ಮಿದ್ದಾರೆ. ವಿ.ಶ್ರೀಕಾಂತ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರವು ಸೆನ್ಸಾರ್ ಪ್ರಕ್ರಿಯೆ ಮುಗಿಸಿಕೊಂಡು ಯಾವುದೇ ಕಟ್ಸ್ ಇಲ್ಲದೆ ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ.

ತೇಜಸ್ ಕ್ರಿಯೇಶನ್ಸ್‌ ಮೂಲಕ ಅಭಯ್ ತಂದೆ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಿಸಿದ್ದು, ಸದ್ಯದಲ್ಲೇ ಈ ಚಿತ್ರದ ಮತ್ತೊಂದು ಡ್ಯುಯೆಟ್ ಹಾಡನ್ನು ರಿಲೀಸ್ ಮಾಡುತ್ತಿದ್ದಾರೆ.
ತಮ್ಮ ಪ್ರೀತಿಯನ್ನು ಪಡೆಯಲು ಕೆಲವರು ಸಾಯ್ತಾರೆ, ಮತ್ತೆ ಕೆಲವರು ಸಾಯಿಸ್ತಾರೆ, ನಾಉಕ ಕೂಡ ಈ ಪ್ರೀತಿಯನ್ನು ಪಡೆಯಲು ಹೋಗಿ ಯಾರನ್ನಾದರೂ ಸಾಯಿಸ್ತಾನಾ ಅಥವಾ ತಾನೇ ಸಾಯ್ತಾನಾ ಎನ್ನುವುದೇ ಈ ಚಿತ್ರದ
ಕಥಾವಸ್ತು. ಚಿತ್ರದಲ್ಲಿ ಐದು ಹಾಡುಗಳಿದ್ದು, ಸುರೇಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಮನುಗೌಡ ಕೆಲಸ ಮಾಡಿದ್ದಾರೆ,
ಬಲ ರಾಜವಾಡಿ, ಸುನಂದ ಅಲ್ಲದೆ ನಿರ್ಮಾಪಕ ಚಂದ್ರಶೇಖರ್ ಕಥೆಗೆ ಟ್ವಿಸ್ಟ್ ಕೊಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Related posts

“ಜಂಬೂ ಸರ್ಕಸ್” ಚಿತ್ರದ ಟ್ರೈಲರ್ ಬಿಡುಗಡೆ

Kannada Beatz

ಇದು ಕಂಟೆಂಟ್ ಗೆ ಸಿಕ್ಕ ಮೊದಲ ಗೆಲುವು…”ಧೈರ್ಯಂ ಸರ್ವತ್ರ ಸಾಧನಂ” ಆಡಿಯೋ ಹಕ್ಕು ಭಾರೀ ಮೊತ್ತಕ್ಕೆ ಮಾರಾಟ

Kannada Beatz

ಕನ್ನಡದ ಮೂರು ಖ್ಯಾತನಾಮರ ಹೆಸರಿನಿಂದ ಪ್ರಾರಂಭವಾದ DSK ಕ್ರಿಕೆಟ್ ಕಪ್

Kannada Beatz

Leave a Comment

Share via
Copy link
Powered by Social Snap