Kannada Beatz
News

‘ನಮ್ ಕನಸ ಕನ್ನಡ …’ – ‘ಆಕಾಶವಾಣಿ ಮೈಸೂರು ಕೇಂದ್ರ’ದಿಂದ ಇನ್ನೊಂದು ಹಾಡು

ಸತೀಶ್ ಬತ್ತುಲ ನಿರ್ದೇಶನದ ‘ಆಕಾಶವಾಣಿ ಮೈಸೂರು ಕೇಂದ್ರ’ ಚಿತ್ರದಿಂದ ಇನ್ನೊಂದು ಹೊಸ ಹಾಡು ಹೊರಬಿದ್ದಿದೆ. ‘ನಮ್ ಕನಸ ಕನ್ನಡ …’ ಎಂದು ಸಾಗುವ ಈ ಹಾಡಿಗೆ ಎಲ್.ಎನ್.ಸೂರ್ಯ ಸಾಹಿತ್ಯ ರಚಿಸಿದ್ದು, ಜನಾರ್ದನ್ ಮತ್ತು ಸಿ.ಎಚ್.ಶ್ರೀಕೃತಿ ಧ್ವನಿಯಾಗಿದ್ದಾರೆ. ಕಾರ್ತಿಕ್ ಕೊಡಕಂಡ್ಲ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡು ಇದೀಗ ಯೂಟ್ಯೂಬ್ನ ಮಿಥುನ ಮ್ಯೂಸಿಕ್ ಚಾನಲ್ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ಕೇಳುಗರಿಂದ ಮೆಚ್ಚುಗೆ ಪಡೆಯುತ್ತಿದೆ.


‘ಆಕಾಶವಾಣಿ ಮೈಸೂರು ಕೇಂದ್ರ’ ಚಿತ್ರವನ್ನು ‘ಜಬರ್ದಸ್ತ್’ ಖ್ಯಾತಿಯ ಸತೀಶ್ ಬತ್ತುಲ ನಿರ್ದೇಶಿಸಿದ್ದಾರೆ. ಶಿವಕುಮಾರ್, ಅಕ್ಷತಾ ಶ್ರೀಧರ್ ಮತ್ತು ಅರ್ಚನಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಮಿಥುನಾ ಎಂಟರ್‌ಟೈನ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸೈನ್ಸ್ ಸ್ಟುಡಿಯೋಸ್ನಡಿ ಎಂ.ಎಂ. ಅರ್ಜುನ್ ಮತ್ತು ಕಮಲ್ ಮೇಡಗೋಣಿ ನಿರ್ಮಿಸುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರವಾಗಿದ್ದು, ಏಕಕಾಲದಲ್ಲಿ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲನಲ್ಲಿ ಸದ್ಯದಲ್ಲೇ ಬಿಡುಗಡೆಯಾಗುತ್ತಿದೆ.
ಈ ಪ್ಯಾನ್ ಇಂಡಿಯಾ ಚಿತ್ರದ ಬಗ್ಗೆ ಕುರಿತು ಮಾತನಾಡುವ ನಿರ್ಮಾಪಕರಾದ ಎಂ.ಎಂ.ಅರ್ಜುನ್ ಮತ್ತು ಕಮಲ್ ಮೇಡಗೋಣಿ, ‘ನಿರ್ದೇಶಕ ಸತೀಶ್ ಅವರ ನಿರೂಪಣೆ ನಮಗೆ ಇಷ್ಟವಾಯಿತು. ಚಿತ್ರವನ್ನು ಬಹಳ ಚೆನ್ನಾಗಿ ರೂಪಿಸಿದ್ದಾರೆ ಅವರು. ನಿರ್ಮಾಪಕನಾಗಿ ನಾನು ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ ಎಂಬ ನಂಬಿಕೆ ಇದೆ. ಇದೊಂದು ಯೂನಿವರ್ಸಲ್ ಕಥೆಯಾದ್ದರಿಂದ ಪ್ಯಾನ್-ಇಂಡಿಯಾ ಚಿತ್ರವನ್ನಾಗಿ ಬಿಡುಗಡೆ ಮಾಡುತ್ತಿದ್ದೇವೆ. ಇದು ಚಿತ್ರದ ಎರಡನೇ ಹಾಡಾಗಿದ್ದು, ಇದಕ್ಕೂ ಮುನ್ನ ‘ನಿನ್ನ ನೋಡಿದ …’ ಎಂಬ ಹಾಡು ಬಿಡುಗಡೆಯಾಗಿದೆ. ಶೀಘ್ರದಲ್ಲೇ ನಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸುತ್ತೇವೆ’ ಎನ್ನುತ್ತಾರೆ.


ಇದೊಂದು ವಿಭಿನ್ನ ಲವ್ ಎಂಟರ್‌ಟೈನರ್ ಎನ್ನುವ ನಿರ್ದೇಶಕ ಸತೀಶ್ ಬತ್ತುಲ, ‘ಇದೊಂದು ವಿಭಿನ್ನ ಕಥೆ ಇರುವ ಚಿತ್ರ. ನಿರ್ಮಾಪಕರ ಬೆಂಬಲವು ನಮ್ಮನ್ನು ಇಲ್ಲಿಯವರೆಗೆ ಕರೆದೊಯ್ದಿದೆ. ಈ ಪ್ಯಾನ್ ಇಂಡಿಯಾ ಚಿತ್ರವನ್ನು ಎಲ್ಲೂ ರಾಜಿ ಮಾಡಿಕೊಳ್ಳದೆ ನಿರ್ಮಿಸಲಾಗಿದೆ. ನಮ್ಮ ಸಿನಿಮಾದಲ್ಲಿ ಅನುಭವಿ ತಂತ್ರಜ್ಞರು ಕೆಲಸ ಮಾಡಿದ್ದು, ಸಂಗೀತ, ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಅದ್ಭುವಾಗಿ ಮೂಡಿಬಂದಿದೆ’ ಎನ್ನುತ್ತಾರೆ.
‘ಆಕಾಶವಾಣಿ ಮೈಸೂರು ಕೇಂದ್ರ’ ಚಿತ್ರದಲ್ಲಿ ಶಿವಕುಮಾರ್, ಹುಮೇ ಚಂದ್, ಅಕ್ಷತಾ ಶ್ರೀಧರ್, ಅರ್ಚನಾ, ಮಾಧವಿ ಲತಾ ಮುಂತಾದವರು ನಟಿಸಿದ್ದು, ಆರೀಫ್ ಲಲಾನಿ ಅವರ ಛಾಯಾಗ್ರಹಣ ಮತ್ತು ಕಾರ್ತಿಕ್ ಕೊಡಕಂಡ್ಲ ಅವರ ಸಂಗೀತ ಈ ಚಿತ್ರಕ್ಕಿದೆ.

Related posts

ಸುಸಜ್ಜಿತ ಎಂ.ಜೆ ಅವ್ಯಾನಾ ರೆಸಾರ್ಟ್ ನಲ್ಲಿ ಆರಂಭವಾಯಿತು ಅನಿಲ್ ಕುಮಾರ್ ಸಾರಥ್ಯದ ಎಂ ಜೆ ಪ್ರೊಡಕ್ಷನ್ .

Kannada Beatz

ಸಖತ್ ಸಸ್ಪೆನ್ಸ್ ಆಗಿದೆ ‘ಅನಾವರಣ’ ಟ್ರೇಲರ್…ಅರ್ಜುನ್ ಯೋಗಿ ಸಿನಿಮಾಗೆ ಕಿಚ್ಚ ಸುದೀಪ್ ಬೆಂಬಲ

Kannada Beatz

Aryan roshan new song MADURA madura from kadala THEERADA BHARGAVA released in arc music

Kannada Beatz

Leave a Comment

Share via
Copy link
Powered by Social Snap