HomeNewsಟಾಲಿವುಡ್‌ನ ಖ್ಯಾತ ನಿರ್ದೇಶಕ ಬೋಯಪಾಟಿ ಶ್ರೀನು ಮತ್ತು ನಟ ರಾಮ್‌ ಪೋತಿನೇನಿ ಕಾಂಬಿನೇಶನ್‌ ನಲ್ಲಿ ಮೂಡಿಬರುತ್ತಿರುವ...

ಟಾಲಿವುಡ್‌ನ ಖ್ಯಾತ ನಿರ್ದೇಶಕ ಬೋಯಪಾಟಿ ಶ್ರೀನು ಮತ್ತು ನಟ ರಾಮ್‌ ಪೋತಿನೇನಿ ಕಾಂಬಿನೇಶನ್‌ ನಲ್ಲಿ ಮೂಡಿಬರುತ್ತಿರುವ ಪ್ಯಾನ್‌ ಇಂಡಿಯಾ ಚಿತ್ರದ ಮುಹೂರ್ತ ಇಂದು ಹೈದ್ರಾಬಾದ್‌ ನಲ್ಲಿ ನೆರವೇರಿತು.


ಭದ್ರ, ತುಳಸಿ, ಸಿಂಹ, ಲೆಜೆಂಡ್‌, ಸರೈನೋಡು, ಜಯಜಾನಕಿ ನಾಯಕ ಮತ್ತು ಇತ್ತೀಚೆಗಷ್ಟೇ ತೆರೆ ಕಂಡು ಬ್ಲಾಕ್‌ ಬಸ್ಟರ್‌ ಹಿಟ್‌ ಆದ ʻಅಖಂಡʼ ಚಿತ್ರಗಳನ್ನು ನಿರ್ದೇಶಿಸಿದ ʻಬೋಯಪಾಟಿ ಶ್ರೀನುʼ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ದೇಶಕರಲ್ಲೊಬ್ಬರು. ಇವರು ಇದೀಗ ಟಾಲಿವುಡ್‌ ನ ಸ್ಟಾರ್‌ ನಟರಲ್ಲೊಬ್ಬರಾದ ರಾಮ್‌ ಪೋತಿನೇನಿ ಜೊತೆಗೂಡಿ ಪ್ಯಾನ್‌ ಇಂಡಿಯಾ ಚಿತ್ರವನ್ನು ಆರಂಭಿಸಿದ್ದಾರೆ. ಈ ಚಿತ್ರ ಬೋಯಪಾಟಿ ಶ್ರೀನು ಅವರಿಗೆ 10 ನೇ ಚಿತ್ರ. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಶ್ರೀನಿವಾಸ ಚಿತ್ತೂರಿ ಅವರ ಶ್ರೀನಿವಾಸ ಸಿಲ್ವರ್‌ ಸ್ಕ್ರೀನ್ಸ್‌ ಬ್ಯಾನರ್‌ ನಡಿ ʻಬೋಯಪಾತಿರಾಪೋʼ (ತಾತ್ಕಾಲಿಕ ಹೆಸರು) ಚಿತ್ರ ನಿರ್ಮಾಣಗೊಳ್ಳುತ್ತಿದೆ. ಈ ಚಿತ್ರ ಶ್ರೀನಿವಾಸ ಸಿಲ್ವರ್‌ ಸ್ಕ್ರೀನ್ಸ್‌ ನ 9 ನೇ ಚಿತ್ರ.


ಚಿತ್ರದ ನಾಯಕ ರಾಮ್‌ ಪೋತಿನೇನಿ ತೆಲುಗು ಚಿತ್ರರಂಗವಷ್ಟೇ ಅಲ್ಲದೆ ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟ. ಅವರ ಸಿನಿಮಾಗಳು ಹಿಂದಿ ಭಾಷೆಗೆ ಡಬ್‌ ಆಗಿ ಯೂಟ್ಯೂಬ್‌ನಲ್ಲಿ ಭಾರಿ ಜನಪ್ರಿಯತೆಗಳಿಸಿವೆ. ಬೋಯಪಾಟಿ ಶ್ರೀನು ನಿರ್ದೇಶನದಲ್ಲಿ ಆರಂಭವಾಗಿರುವ ಈ ಚಿತ್ರ ರಾಮ್‌ ಪೋತಿನೇನಿ ಅವರ 20 ನೇ ಚಿತ್ರ. ರಾಮ್‌ ಇತ್ತೀಚೆಗಷ್ಟೇ ಇದೇ ಬ್ಯಾನರ್‌ (ಶ್ರೀನಿವಾಸ ಸಿಲ್ವರ್‌ ಸ್ಕ್ರೀನ್ಸ್‌) ನಡಿ ತಯಾರಾದ ʻದಿ ವಾರಿಯರ್‌ʼ ಚಿತ್ರೀಕರಣವನ್ನು ಮುಗಿಸಿದ್ದಾರೆ.


ಇದೀಗ ಪ್ಯಾನ್‌ ಇಂಡಿಯಾ ಚಿತ್ರಕ್ಕಾಗಿ ರಾಮ್‌, ಬೋಯಪಾಟಿ ಮತ್ತು ಶ್ರೀನಿವಾಸ ಚಿತ್ತೂರಿ ಒಂದಾಗಿದ್ದು ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇನ್ನೂ ಹೆಸರಿಡದ ಈ ಚಿತ್ರದ ಮುಹೂರ್ತ ಜೂನ್‌ 1ರ ಬುಧವಾರ ಹೈದರಾಬಾದ್‌ ನಲ್ಲಿ ನೆರವೇರಿತು. ಈ ಕ್ರೇಜಿ ಕಾಂಬಿನೇಶನ್‌ ಬಗ್ಗೆ ಮಾತನಾಡಿದ ಶ್ರೀನಿವಾಸ ಚಿತ್ತೂರಿ, ಬೋಯಪಾಟಿ ಶ್ರೀನು ನಿರ್ದೇಶನದ ಚಿತ್ರ ನಿರ್ಮಾಣ ಮಾಡಲು ನಾವು ಸಂತೋಷಪಡುತ್ತೇವೆ. ʻದಿ ವಾರಿಯರ್‌ʼ ಚಿತ್ರದ ಶೂಟಿಂಗ್‌ ಮುಗಿಯುತ್ತಿದ್ದಂತೆ ನಮ್ಮ ನಾಯಕ ರಾಮ್‌ ಪೋತಿನೇನಿ ಜೊತೆ ಮತ್ತೊಂದು ಸಿನಿಮಾ ಶುರುವಾಗಿರುವುದು ಸಂತೋಷದ ವಿಚಾರ. ಇದು ನಮ್ಮ ಬ್ಯಾನರ್‌ನ ಪ್ರತಿಷ್ಠಿತ ಚಿತ್ರವಾಗಿದ್ದು, ಉನ್ನತ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಲಾಗುವುದು. ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
ನಿರ್ದೇಶಕ ಬೋಯಪಾಟಿ ಶ್ರೀನು ಬರೆದಿರುವ ಮಾಸ್‌ ಅಂಶಗಳಿಂದ ಕೂಡಿರುವ ಅದ್ಭುತ ಕತೆ ಕೇಳಿರುವ ನಿರ್ಮಾಪಕ ಮತ್ತು ನಟ ಇಬ್ಬರೂ ಥ್ರಿಲ್‌ ಆಗಿದ್ದಾರೆ. ಚಿತ್ರದ ನಾಯಕಿ ಮತ್ತು ಉಳಿದ ತಾರಾಗಣದ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿಗಳನ್ನು ನೀಡುವುದಾಗಿ ಚಿತ್ರತಂಡ ತಿಳಿಸಿದೆ.

Must Read

spot_img
Share via
Copy link
Powered by Social Snap