HomeNewsದಸರಾ ಮೊದಲ ದಿನವೇ "ಮುಗಿಲ್ ಪೇಟೆ" ವಿಡಿಯೋ ಸಾಂಗ್ ಬಿಡುಗಡೆ.

ದಸರಾ ಮೊದಲ ದಿನವೇ “ಮುಗಿಲ್ ಪೇಟೆ” ವಿಡಿಯೋ ಸಾಂಗ್ ಬಿಡುಗಡೆ.



*ಶ್ರೀಧರ್ ಸಂಭ್ರಮ್* ನೀಡಲಿದ್ದಾರೆ ಹಾಡುಗಳ ರಸದೌತಣ

*ಮನು‌ ರವಿಚಂದ್ರನ್* ನಾಯಕನಾಗಿ ನಟಿಸಿರುವ *”ಮುಗಿಲ್ ಪೇಟೆ”* ಚಿತ್ರದ ವಿಡಿಯೋ ಸಾಂಗ್ ನಾಡಹಬ್ಬ

ದಸರಾದ ಮೊದಲ ದಿನ(ಅಕ್ಟೋಬರ್ 7) ಬಿಡುಗಡೆಯಾಗಲಿದೆ. ನಿರ್ದೇಶಕರೆ ಬರೆದಿರುವ ಈ ಹಾಡಿನಲ್ಲಿ *ಮನು* ಹಾಗೂ *ಕಯಾದು ಲೋಹರ್* ನಟಿಸಿದ್ದಾರೆ. *ಶ್ರೀಧರ್ ಸಂಭ್ರಮ್* ಸಂಗೀತ ನೀಡಿದ್ದಾರೆ. *ನಕುಲ್* ಈ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡು ನಾಡಹಬ್ಬದ ಸಂಭ್ರಮಕ್ಕಾಗಿ ಚಿತ್ರಪ್ರೇಮಿಗಳಿಗೆ ಚಿತ್ರತಂಡದ ಉಡುಗೊರೆ.



ಬೆಳಕಿನ ಹಬ್ಬ ದೀಪಾವಳಿಗೆ ಚಿತ್ರ ತೆರೆಗೆ ಬರಲಿದೆ.

ಈಗಾಗಲೇ ಟ್ರೇಲರ್ ಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ಸಿಕ್ಕಿದ್ದು, ಚಿತ್ರಕ್ಕೂ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ದೊರಕುವ ವಿಶ್ವಾಸವಿದೆ.

*ಮನು* ಅವರಿಗೆ ನಾಯಕಿಯಾಗಿ *ಕಯಾದು ಲೋಹರ್* ನಟಿಸಿದ್ದಾರೆ. *ರಿಷಿ, ಅವಿನಾಶ್, ತಾರಾ ಅನುರಾಧ, ಸಾಧುಕೋಕಿಲ, ರಂಗಾಯಣ ರಘು* ಹೀಗೆ ಹೆಸರಾಂತ ಕಲಾವಿದರು *”ಮುಗಿಲ್ ಪೇಟೆ”* ಯಲ್ಲಿ ಅಭಿನಯಿಸಿದ್ದಾರೆ.

*ಭರತ್ ಎಸ್ ನಾವುಂದ* ರಚನೆ ಹಾಗೂ ನಿರ್ದೇಶನದ ಈ ಚಿತ್ರವನ್ನು *ಮೋತಿ ಮೂವೀ ಮೇಕರ್ಸ್* ಲಾಂಛನದಲ್ಲಿ *ರಕ್ಷಾ ವಿಜಯ್ ಕುಮಾರ್* ನಿರ್ಮಿಸಿದ್ದಾರೆ.



*ರವಿವರ್ಮ (ಗಂಗು)* ಅವರ ಛಾಯಾಗ್ರಹಣ *”ಮುಗಿಲ್ ಪೇಟೆ”* ಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.‌ *ಅರ್ಜುನ್ ಕಿಟ್ಟು* ಸಂಕಲನ,
*ಡಾ||ರವಿವರ್ಮ, ವಿಜಯ್* ಸಾಹಸ ನಿರ್ದೇಶನ, *ಹರ್ಷ, ಮುರಳಿ , ಮೋಹನ್* ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ *ಹನುಮಂತು* ಅವರ ನಿರ್ಮಾಣ ನಿರ್ವಹಣೆಯಿದೆ.

Must Read

spot_img
Share via
Copy link
Powered by Social Snap