HomeNewsಫಸ್ಟ್ ಲುಕ್ ರಿಲೀಸ್ ಗೆ ದಿನಗಣನೆ….!

ಫಸ್ಟ್ ಲುಕ್ ರಿಲೀಸ್ ಗೆ ದಿನಗಣನೆ….!

ಕೊರಗಜ್ಜ ಸಿನಿಮಾದ “ಫಸ್ಟ್ ಲುಕ್” ವೀಕ್ಷಿಸಿ, ಹರಸಿದ “ದೈವ ಕೊರಗಜ್ಜ”.

ತ್ರಿವಿಕ್ರಮ ಸಪಲ್ಯ ನಿರ್ಮಾಣದ , ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ನಡಿ, ಸುಧೀರ್ ಅತ್ತಾವರ್ ನಿರ್ದೇಶನದ ಅತೀ ನಿರೀಕ್ಷಿತ
ಕೊರಗಜ್ಜ ಸಿನಿಮಾದ ‘ಮೋಷನ್ ಪೋಸ್ಟರ್‌’ ಜೊತೆ “ಫಸ್ಟ್ ಲುಕ್” ಸಿದ್ಧ ಗೊಂಡಿದ್ದು, ಕೊರಗಜ್ಜ ದೈವದ ಕಳೆ-ಕಾರ್ಣಿಕ ಮತ್ತು ಪಾವಿತ್ರ್ಯತೆಗೆ ಯಾವುದೇ ಧಕ್ಕೆ ಬಾರದಂತೆ ಅದನ್ನು ವಿನ್ಯಾಸ ಗೊಳಿಸಿ ಮೊದಲಿಗೆ ಕೊರಗಜ್ಜ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ನಿರ್ದೇಶಕ ಸುಧೀರ್ ಅತ್ತಾವರ್ ಮತ್ತೆ ವಿಷೇಶ ಕೋಲಸೇವೆ ನೀಡಿ, ಅದೇ ಸಮಯದಲ್ಲಿ ಶ್ರೀ ದೈವಗಳ ಸಮಕ್ಷಮದಲ್ಲಿ ದೈವದ ಒಪ್ಪಿಗೆಗಾಗಿ ಪ್ರದರ್ಶಿಸಿದರು.ಶ್ರೀ ದೈವಗಳಿಂದ ಫಸ್ಟ್ ಲುಕ್ ನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲು ಅನುಮತಿಯನ್ನು ಭಯ-ಭಕ್ತಿಯಿಂದ ಬೇಡಿಕೊಂಡು, ಒಪ್ಪಿಗೆ ಪಡೆಯಲಾಯ್ತು.


ಆದರೆ ಎಲ್ಲೆಂದರಲ್ಲಿ ಈ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರನ್ನು ದೈವಕ್ಕೆ ಅಪಚಾರ ಆಗುವ ರೀತಿಯಲ್ಲಿ ಸಾರ್ವಜನಿಕರು ದುರುಪಯೋಗ ಪಡಿಸಬಾರದು ಎಂದು ದೈವಗಳು ಅಪ್ಪಣೆ ನೀಡಿದವು.ಮೋಷನ್ ಪೋಸ್ಟರನ್ನು
ವಿಶೇಷವಾಗಿ ವಿನ್ಯಸಗೊಳಿಸಿದ್ಧರೂ ದೈವಗಳು ಒಪ್ಪಿಗೆ ನೀಡದಿದ್ದರೆ ಅದನ್ನು ಬಿಡುಗಡೆಗೊಳಿಸುವುದು ಅಸಾದ್ಯವಾಗಬಹುದಿತ್ತು.ಈ ರಿಸ್ಕನ್ನು ನಿರ್ದೇಶಕ ಮತ್ತು ನಿರ್ಮಾಪಕರು ತೆಗೆದುಕೊಂಡಿದ್ದರು.
ಚಿತ್ರತಂಡವು ಪ್ರತೀ ಹಂತದಲ್ಲೂ ಕೊರಗಜ್ಜ ಹಾಗೂ ಶ್ರೀ ದೈವಗಳ ಆಶಿರ್ವಾದ ಪಡೆದೇ ಮುಂದಡಿ ಇಡುತ್ತಿರುವುದು ವಿಶೇಷ.
ಈ ಅಪರೂಪದ ಕಾರ್ಯಕ್ರಮದಲ್ಲಿ ಮಾಜಿ ಸಚೀವೆ ಶ್ರೀಮತಿ ಮೋಟಮ್ಮ, ಖ್ಯಾತ ಕಲಾವಿದೆ ಭವ್ಯ ಮತ್ತು ಸುಪುತ್ರಿ ಅದಿತಿ,ಎಡಿಟರ್- ಈಪಿ ವಿದ್ಯಾಧರ್ ಶೆಟ್ಟಿ, ಖ್ಯಾತ ಗಾಯಕ ರಮೇಶ್ಚಂದ್ರ, ನಾಯಕ ನಟ ಭರತ್ ಸೂರ್ಯ, ಶ್ಲಾಘ್ಯ ಕಮಲಿನಿ ಹಾಗೂ ಚಿತ್ರತಂಡದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದರು.

Must Read

spot_img
Share via
Copy link
Powered by Social Snap