Kannada Beatz
News

ಕಚಗುಳಿ ಇಟ್ಟ ‘ಕಂಬಳಿಹುಳ’ ಸಾಂಗ್ ಝಲಕ್..ಹೊಸಬರ ಪ್ರಯತ್ನಕ್ಕೆ ಸಾಥ್ ಕೊಟ್ಟ ರೋರಿಂಗ್ ಸ್ಟಾರ್ ಶ್ರೀಮುರುಳಿ!

ಕಂಬಳಿಹುಳ…ಸ್ಯಾಂಡಲ್ ವುಡ್ ನಲ್ಲಿ ಹೀಗೊಂದು ವಿಭಿನ್ನ ಬಗೆಯ ಶೀರ್ಷಿಕೆಯ ಸಿನಿಮಾ ಸೆಟ್ಟೇರಿದೆ. ಒಂದಷ್ಟು ರಂಗಭೂಮಿ ಕಲಾವಿದರು ಸೇರಿ ನಟಿಸ್ತಿರುವ ಕಂಬಳಿಹುಳ ಸಿನಿಮಾದ ಫಸ್ಟ್ ಝಲಕ್ ನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಈ ಹಿಂದೆ ಗೋಣಿಚೀಲಿ, ಜೋಡಿ ಕುದುರೆ ಎಂಬ ಕಿರುಚಿತ್ರ ಮಾಡಿ ಪ್ರಶಂಸೆ ಗಳಿಸಿರುವ ನವನ್ ಶ್ರೀನಿವಾಸ್ ಕಂಬಳಿಹುಳ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ರಂಗಭೂಮಿ ಕಲಾವಿದರಾಗಿರುವ ಅಂಜನ್ ನಾಗೇಂದ್ರ ನಾಯಕನಾಗಿ ಬಣ್ಣ ಹಚ್ಚಿದ್ರೆ, ಅಶ್ವಿತಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರೋಹಿತ್ ಕುಮಾರ್, ದೀಪಕ್ ರೈ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ನಟಿಸಿದ್ದಾರೆ.

ನೈಜ ಘಟನೆಯಾಧಾರಿತ ಕಂಬಳಿಹುಳ ಸಿನಿಮಾಕ್ಕೆ ಸಿವಿಲ್ ಇಂಜಿಯರ್ ಆಗಿರುವ ವಿಜಯ್, ನವೀನ್, ಪುನೀತ್ ಮತ್ತು ಗುರು ಬಂಡವಾಳ ಹೂಡಿದ್ದು, ಬಹುತೇಕ ಮಲೆನಾಡು, ಹಾಸನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಸತೀಶ್ ರಾಜೇಂದ್ರನ್ ತಮ್ಮ ಕ್ಯಾಮೆರಾ ಕಣ್ಣಲ್ಲಿ ಅದ್ಭುತ ದೃಶ್ಯಗಳನ್ನು ಸೆರೆಹಿಡಿದರೆ, ಜಿತೇಂದ್ರ ನಾಯಕ್ ಹಾಗೂ ರಾಘವೇಂದ್ರ ಸಂಕಲನ, ಹೊಸ ಪ್ರತಿಭೆ ಶಿವಪ್ರಸಾದ್ ಮ್ಯೂಸಿಕ್ ಸಿನಿಮಾಕ್ಕಿದೆ.

Related posts

ಪ್ರಭುದೇವ ಅಭಿನಯದ “wolf” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಶಿವರಾಜಕುಮಾರ್

Kannada Beatz

ಜಾಂಟಿ ಸನ್ ಆಫ್ ಜಯರಾಜ್ ಟೀಸರ್ ಬಿಡುಗಡೆ ’ಜಾಂಟಿ ಸನ್ ಆಫ್ ಜಯರಾಜ್’ ಚಿತ್ರದ ಪಾತ್ರಗಳ ಪರಿಚಯದ ಟೀಸರ್ ಹಾಗೂ ಟ್ರೈಲರ್ ಬಿಡುಗಡೆ

Kannada Beatz

ದ್ವಿಭಾಷೆಯಲ್ಲಿ ನಿರ್ಮಾಣದ “ಶೇಷ 2016” ಚಿತ್ರದ ಟೀಸರ್ ಬಿಡುಗಡೆ.

Kannada Beatz

Leave a Comment

Share via
Copy link
Powered by Social Snap