Kannada Beatz
News

ಡೆವಿಲ್ ಮೊದಲ ದಿನ ಭರ್ಜರಿ ಕಲೆಕ್ಷನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ದಿ ಡೆವಿಲ್ ಚಿತ್ರ ಮೊದಲ ದಿನ ಭರ್ಜರಿಯಾಗಿ 13.8 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಅವರ ಅನುಪಸ್ಥಿತಿಯಲ್ಲಿ ಡೆವಿಲ್ ಚಿತ್ರ ಬಿಡುಗಡೆಯಾಗಿದೆ. ಡಿ ಬಾಸ್ ಅಭಿಮಾನಿಗಳು ದರ್ಶನ್ ಜೈಲಿನಲ್ಲಿ ಇದ್ದರೂ ಚಿತ್ರವನ್ನು ಗೆಲ್ಲಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ದರ್ಶನ್ ಅನುಪಸ್ಥಿತಿಯಲ್ಲಿ ಪತ್ನಿ ವಿಜಯಲಕ್ಷ್ಮಿ ಅಭಿಮಾನಿಗಳ ಜೊತೆಗೂಡಿ ಪ್ರಚಾರ ಮಾಡಿದ್ದರು. ಮೊದಲ ದಿನ ಅವರು ಅಭಿಮಾನಿಗಳ ಜೊತೆಗೆ ಚಿತ್ರ ವೀಕ್ಷಣೆ ಮಾಡಿದ್ದರು. ಎರಡನೇ ದಿನ ಕೂಡಾ ಅವರು ಅಭಿಮಾನಿಗಳ ಜೊತೆಗೆ ಚಿತ್ರ ವೀಕ್ಷಣೆ ಮಾಡಿದ್ದಾರೆ. ನಿರ್ಮಾಣ ಸಂಸ್ಥೆ ಈಗ ಮೊದಲನೇ ದಿನದ ಚಿತ್ರದ ಗಳಿಕೆ ವಿವರವನ್ನು ಬಿಡುಗಡೆ ಮಾಡಿದೆ.

ಚಿತ್ರದಲ್ಲಿ ಎರಡು ಪಾತ್ರಗಳಲ್ಲಿ ದರ್ಶನ್ ನಟಿಸಿದ್ದು ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ರಾಜಕೀಯ ಕಥಾ ವಸ್ತು ಇರುವ ಚಿತ್ರದಲ್ಲಿ ದರ್ಶನ್ ನಟಿಸಿದ್ದಾರೆ. ನಾಯಕ ನಟಿ ಆಗಿ ಕಾಣಿಸಿಕೊಂಡಿರುವ ರಚನಾ ರೈ ಅವರ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ.

ಡೆವಿಲ್ ಚಿತ್ರವನ್ನು ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿದ್ದಾರೆ. ಜೈ ಮಾತಾ ಕಂಬೈನ್ಸ್ ಚಿತ್ರವನ್ನು ನಿರ್ಮಾಣ ಮಾಡಿದೆ.

ವಾರಂತ್ಯದಲ್ಲಿ ಚಿತ್ರ ಇನ್ನಷ್ಟು ಗಳಿಕೆ ಮಾಡುವ ನಿರೀಕ್ಷೆ ಇದೆ.

Related posts

ಟ್ರೇಲರ್ ಮೂಲಕ ಗಮನಸೆಳೆದ ಹೊಸಬರ ಆರ..ಜುಲೈ 28ರಂದು ಸಿನಿಮಾ ರಿಲೀಸ್

Kannada Beatz

ದುನಿಯಾ ವಿಜಯ್ ಅವರಿಂದ ಬಿಡುಗಡೆಯಾಯಿತು ವಿಜಯ್ ಪ್ರಕಾಶ್ ಹಾಡಿರುವ ಈ ಸುಂದರ ಹಾಡು.

Kannada Beatz

SONY PICTURES in Association with “MARVEL’S” Hosts the Celebrity Premiere show of “MORBIUS” in Namma BENGALURU.

Kannada Beatz

Leave a Comment

Share via
Copy link