Kannada Beatz
News

ಧನ್ವೀರ್ ಹುಟ್ಟುಹಬ್ಬಕ್ಕೆ ಹೊಸಚಿತ್ರದ ಘೋಷಣೆ

ಸಮೃದ್ಧಿ ಫಿಲಂಸ್ ನಿರ್ಮಾಣದ ಈ ಚಿತ್ರಕ್ಕೆ ರಘುಕುಮಾರ್ ಓ ಆರ್ ನಿರ್ದೇಶನ

ಕರುನಾಡ ಶೋಕ್ದಾರ್ ಅಂತ
ಹೆಸರುವಾಸಿ ಆಗಿರುವ ಧನ್ವೀರ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಘೋಷಣೆಯಾಗಿದೆ‌‌‌. ಇದು ಧನ್ವೀರ್ ನಾಯಕರಾಗಿ ನಟಿಸುತ್ತಿರುವ ಐದನೇ ಸಿನಿಮಾ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಯುವ ನಿರ್ದೇಶಕ ರಘುಕುಮಾರ್ ಓ ಆರ್ ನಿರ್ದೇಶಿಸುತ್ತಿದ್ದಾರೆ. ಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಇದು ರಘುಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರ.
ಈ ಚಿತ್ರ ‘ಸಮೃದ್ಧಿ ಫಿಲಂಸ್’ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ.

ರಘುಕುಮಾರ್ ಅವರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ.
ಇದರಲ್ಲಿ ರಂಗಾಯಣ ರಘು , ರವಿಶಂಕರ್, ತಬಲನಾಣಿ, ಸಾಧುಕೋಕಿಲ ಇನ್ನಿತರ ಕಲಾವಿದರು ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಶುರು ಮಾಡುತ್ತೇವೆ ಎಂದು ಸಮೃದ್ಧಿ ಫಿಲಂಸ್ ನಿರ್ಮಾಣ ಸಂಸ್ಥೆ ತಿಳಿಸಿದೆ.

ನಿರ್ದೇಶಕ ರಘುಕುಮಾರ್ ಓ ಆರ್ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇವರು “ಕೋಟಿಗೊಬ್ಬ 3” ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮತ್ತು ‘ದಿ ಬೆಲ್’ ಎಂಬ ಕಿರುಚಿತ್ರ ನಿರ್ಮಿಸಿ ನಿರ್ದೇಶಿಸಿದ್ದಾರೆ. ದಿ ಬೆಲ್ ಕಿರುಚಿತ್ರ ಪಿ ಆರ್ ಕೆ ಆಡಿಯೋ ಯೂಟ್ಯೂಬ್ ಅಲ್ಲಿ ಬಿಡುಗಡೆ ಆಗಿದ್ದು ಒಳ್ಳೆಯ ಪ್ರಶಂಸೆ ಗಳಿಸಿಕೊಂಡು ಶಾರ್ಟ್ ಫಿಲ್ಮ್ ಫೆಸ್ಟಿವಲ್ಸ್ ಅಲ್ಲಿ ತುಂಬಾನೇ ಮೆಚ್ಚುಗೆ ಪಡೆದು ಅವಾರ್ಡ್ಸ್ ಅನ್ನು ತನ್ನ ಮುಡಿಗೇರಿಸಿಕೊಂಡಿದೆ.
ಚಿತ್ರದ ತಾಂತ್ರಿಕವರ್ಗ ಅದ್ಭುತವಾಗಿದ್ದು ಛಾಯಾಗ್ರಾಹಕರಾಗಿ ಕಾರ್ತಿಕ್ ಎಸ್
ಹಿನ್ನೆಲೆ ಸಂಗೀತ ಜುಡಾ ಸ್ಯಾಂಡಿ, ಶಬ್ದ ವಿನ್ಯಾಸ ರಾಜನ್ ಹಾಗೂ ಸಂಕಲನ ಉಮೇಶ್ ಆರ್ ಬಿ ಮಾಡುತ್ತಿದ್ದಾರೆ.

Related posts

*ಅನಾವರಣವಾಯಿತು “ಅಪಾಯವಿದೆ ಎಚ್ಚರಿಕೆ” ಚಿತ್ರದ ಪ್ರಯೋಗಾತ್ಮಕ ಟೀಸರ್.

Kannada Beatz

ಮುಹೂರ್ತ ಆಚರಿಸಿಕೊಂಡ ‘Case of ಕೊಂಡಾಣ’…. ದೇವಿಪ್ರಸಾದ್ ಶೆಟ್ಟಿ ಜೊತೆಗೆ ಮತ್ತೆ ಕೈಜೋಡಿಸಿದ ವಿಜಯ್ ರಾಘವೇಂದ್ರ

Kannada Beatz

’ಗಾಡ್ ಪ್ರಾಮಿಸ್’ ಎಂದ ಕಾಂತಾರದ ನಟ…ನಿರ್ದೇನಕ್ಕಿಳಿದ ಕುಂದಾಪುರದ ಸೂಚನ್ ಶೆಟ್ಟಿ..

Kannada Beatz

Leave a Comment

Share via
Copy link
Powered by Social Snap