HomeNewsಭಾರತೀಯ ಸಿನಿಮಾ ಲೋಕದಲ್ಲಿ ಹೊಸ ದಾಖಲೆ ಬರೆದ ಚಾರ್ಲಿ-777…21 ಸಿಟಿಗಳಲ್ಲಿ ಪ್ರೀಮಿಯರ್‌ ಆಗ್ತಿರುವ ಮೊದಲ ಸಿನಿಮಾ

ಭಾರತೀಯ ಸಿನಿಮಾ ಲೋಕದಲ್ಲಿ ಹೊಸ ದಾಖಲೆ ಬರೆದ ಚಾರ್ಲಿ-777…21 ಸಿಟಿಗಳಲ್ಲಿ ಪ್ರೀಮಿಯರ್‌ ಆಗ್ತಿರುವ ಮೊದಲ ಸಿನಿಮಾ

ಕನ್ನಡ ಸಿನಿಮಾ ಅಂಗಳದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ತೆರೆಮೇಲೆ ಧೂಳ್ ಎಬ್ಬಿಸಲು ಸಜ್ಜಾಗಿದೆ. ನಾಯಿ ಮತ್ತು ಮನುಷ್ಯನ ಬಾಂಧವ್ಯ ಕಥೆಯ ಚಾರ್ಲಿ 777 ಸಿನಿಮಾ ಇದೇ ತಿಂಗಳ‌ 10ರಂದು ವರ್ಲ್ಡ್ ವೈಡ್ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡ್ತಿದೆ. ಈಗಾಗಲೇ ಟ್ರೇಲರ್ ನಲ್ಲಿಯೇ ತನ್ನ ತಾಕತ್ತು ತೋರಿಸಿರುವ ಚಾರ್ಲಿಗೆ ಚಿತ್ರರಸಿಕರು ಫುಲ್ ಫಿದಾ ಆಗಿದ್ದಾರೆ.

ಜೂನ್ 10ರಂದು ಸಿನಿಮಾ ತೆರೆಗೆ ಬರ್ತಿರೋದ್ರಿಂದ ಚಿತ್ರತಂಡ ಭರ್ಜರಿ ಪ್ರಮೋಷನ್ ಮಾಡ್ತಿದೆ. ರಾಜ್ಯ ರಾಜ್ಯ ಸುತ್ತಿ ಪ್ರಚಾರದ ಕಹಳೆ ಮೊಳಗಿಸಿರುವ ಚಾರ್ಲಿ ಅಂಗಳದಿಂದ ಮಸ್ತ್ ಖಬರ್ ವೊಂದು ರಿವೀಲ್ ಆಗ್ತಿದೆ. ಬರೋಬ್ಬರಿ‌ 21 ಸಿಟಿಗಳಲ್ಲಿ ಚಾರ್ಲಿ ಸಿನಿಮಾ ಪ್ರೀಮಿಯರ್ ಆಗ್ತಿದೆ.

ಹೊಸ ದಾಖಲೆ ಬರೆದ ಚಾರ್ಲಿ

ಹೇಳಿಕೇಳಿ ಇದು ಕಾಂಪಿಟೇಷನ್ ಯುಗ. ಅದ್ರಲ್ಲೂ ಚಿತ್ರರಂಗದಲ್ಲಂತೂ ಕೇಳ್ಬೇಕೆ. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳು ಸದ್ದು ಮಾಡ್ತಿವೆ. ಪ್ಯಾನ್ ಇಂಡಿಯಾ ಸಿನಿಮಾಗಳು ಒಂದೊಂದಾಗಿ ತೆರೆಗೆ ಬರ್ತಿವೆ. ಇಷ್ಟೆಲ್ಲಾ ಕಾಂಪಿಟೇಷನ್ ಇದ್ರೂ ಚಾರ್ಲಿ 777 ಸಿನಿಮಾ ರಿಲೀಸ್ ಗೂ ಮುನ್ನ ಹೊಸ ರೆಕಾರ್ಡ್ ಬರೆದಿದೆ. ಹೈದ್ರಾಬಾದ್, ಚೆನ್ನೈ, ದೆಹಲಿ, ಮಧುರೈ ಸೇರಿದಂತೆ ಬರೋಬ್ಬರಿ 21 ಸಿಟಿಗಳಲ್ಲಿ ಪ್ರೀಮಿಯರ್ ಆಗ್ತಿರುವ ಮೊದಲ ಸಿನಿಮಾ ಎಂಬ ಖ್ಯಾತಿ ಚಾರ್ಲಿ ಭತ್ತಳಿಕೆ ಸೇರಿದೆ.

ಎಲ್ಲೆಲ್ಲಿ ಯಾವಾಗಾ ಪ್ರೀಮಿಯರ್ ಆಗ್ತಿದೆ

21 ಸಿಟಿಗಳಲ್ಲಿ ಪ್ರೀಮಿಯರ್ ಆಗ್ತಿರುವ ಚಾರ್ಲಿ-777 ಸಿನಿಮಾ ಹೈದ್ರಾಬಾದ್, ವಾರಾಣಾಸಿ 7ರಂದು, ದೆಹಲಿಯಲ್ಲಿ 2ರಂದು, ಅಮೃತಸರ 2ರಂದು, ಮಧುರೈ, ಪಂಜಿಮ್, ಬರೋಡಾ, ವೈಜಾಕ್ ನಲ್ಲಿ 8ರಂದು, ಕೊಯ್ಯಮತ್ತೂರು, ಸೊಲ್ಲಾಪುರ,ತಿರುವನಂತಪುರ, ಅಹಮದಾಬಾದ್ ನಲ್ಲಿ 7ರಂದು, ಪುಣೆ, ಮುಂಬೈ, ಕಿಚ್ಚಿನ್, ಲಖನೌ, ಚೆನ್ನೈ, ಜೈಪುರ, ಕೋಲ್ಕತ್ 6ರಂದು, ನಾಗಾಪುರ, ಸೂರತ್ ನಲ್ಲಿ 9ರಂದು ಪ್ರೀಮಿಯರ್ ಆಗ್ತಿದ್ದು, ಈಗಾಗ್ಲೇ ಆಲ್ ಮೋಸ್ಟ್ ಆಲ್ ಟಿಕೆಟ್ ಸೋಲ್ಟ್ ಔಟ್ ಆಗಿವೆ.

ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಾರ್ಲಿ 777 ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಧರ್ಮ ಪಾತ್ರದಲ್ಲಿ ಮಿಂಚಿದ್ದು, ರಕ್ಷಿತ್ ಗೆ ಜೋಡಿಯಾಗಿ ಸಂಗೀತ ಶೃಂಗೇರಿ ನಟಿಸಿದ್ದಾರೆ. ನಟನೆ ಜೊತೆಗೆ ರಕ್ಷಿತ್ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ರಕ್ಷಿತ್ ಜತೆಗೆ ರಾಜ್‌ ಬಿ. ಶೆಟ್ಟಿ, ದಾನಿಶ್‌ ಸೇಠ್‌, ತಮಿಳಿನ ಬಾಬಿ ಸಿಂಹ ಸೇರಿ ಇನ್ನೂ ಅನೇಕರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರಣ್‌ ರಾಜ್‌ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ನೋಬಿನ್‌ ಪೌಲ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ, ಪ್ರತೀಕ್‌ ಶೆಟ್ಟಿ ಸಂಕಲನ, ಪ್ರಗತಿ ರಿಷಬ್‌ ಶೆಟ್ಟಿ ಅವರ ವಸ್ತ್ರ ವಿನ್ಯಾಸ, ವಿಕ್ರಮ್‌ ಮೋರ್‌ ಅವರ ಸಾಹಸ ಈ ಚಿತ್ರಕ್ಕಿದೆ.

Must Read

spot_img
Share via
Copy link
Powered by Social Snap