Kannada Beatz
News

ಗಮನ ಸೆಳೆಯುತ್ತಿದೆ ಎ ಅಲ್ಲ ಬಿ ಅಲ್ಲ ‘ಸಿ’: ಸಾಂಗ್ ರಿಲೀಸದ ಮಾಡಿದ ಲೂಸ್ ಮಾದ ಯೋಗಿ

ಸಿ..ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಗೆ ರೆಡಿಯಾಗಿರುವ ಸಿನಿಮಾ. ಚಂದನವನದಲ್ಲಿ ಒಂದೇ ಅಕ್ಷರದ ಸಿನಿಮಾಗಳು ತೀರಾ ಅಪರೂಪ. ಇದೀಗ ಹೊಸಬರ ತಂಡವೊಂದು ‘ಸಿ’ ಎನ್ನುವ ಒಂದೇ ಅಕ್ಷರದ ಟೈಟಲ್ ಇಟ್ಟುಕೊಂಡು ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಒಂದೇ ಅಕ್ಷರದ ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ ಈ ಸಿನಿಮಾ ಈಗಾಗಲೇ ಟೀಸರ್ ಮತ್ತು ಕಂದಾ ಕಂದಾ ಎನ್ನುವ ಹಾಡಿನ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಇದೆ ಜೊತೆಗೆ ಸಿ ಸಿನಿಮಾಗೆ ನಟ ಯೋಗಿ ಮತ್ತು ಖ್ಯಾತ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರ ಬೆಂಬಲ ಕೂಡ ಸಿಕ್ಕಿದೆ‌

ಅಂದಾಹಗೆ ‘ಸಿ’ ಕಿರಣ್ ಸುಬ್ರಮಣಿ ಚೊಚ್ಚಲ ನಿರ್ದೇಶನದ ಸಿನಿಮಾ. ಕಿರಣ್ ನಿರ್ದೇಶನದ ಜೊತೆಗೆ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಸದ್ಯ ಸಿನಿಮಾದಿಂದ ‘ಇದು ಎ ಅಲ್ಲ ಬಿ ಅಲ್ಲ ಸಿ…’ ಎನ್ನುವ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಎಬಿ ಮುರಳಿಧರನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಶಶಾಂಕ್ ಶೇಷಗಿರಿ, ಸುರಭಿ ಭಾರದ್ವಜ್ ಹಾಗೂ ಜ್ಞಾನ ಹಾಡಿದ್ದಾರೆ. ಈ ಹಾಡಿಗೆ ಖ್ಯಾತ ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ.

ವಿಶೇಷ ಎಂದರೆ ಈ ಹಾಡನ್ನು ಲೂಸ್ ಮಾದ ಖ್ಯಾತಿಯ ನಟ ಯೋಗಿ ರಿಲೀಸ್ ಮಾಡಿದ್ದಾರೆ. ಹಾಡಿನ್ನು ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. ಯೋಗಿ ಹೊಸ ಸಿನಿಮಾ ತಂಡದ ಬೆನ್ನಿಗೆ ನಿಂತಿರುವುದು ಸಿ ಚಿತ್ರತಂಡಕ್ಕೆ ಖುಷಿ ತಂದಿದೆ. ಇನ್ನು ಖ್ಯಾತ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಕೂಡ ಸಿ ಸಿನಿಮಾದ ಹಾಡಿನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇಡೀ ಸಿನಿಮಾಗೆ ಒಳ್ಳೆದಾಗಲಿ ಕನ್ನಡ ಚಿತ್ರರಂಗ ಬೆಳೆಯಲಿ ಎಂದು ಹಾರೈಸಿದ್ದಾರೆ.

‘ಸಿ’ ಕಣ್ಣು ಕಾಣದ ಮಗಳು ಹಾಗೂ ಅಪ್ಪನ ನಡುವಿನ ಬಾಂಧವ್ಯದ ಬಗ್ಗೆ ಇದೆ. ಕಣ್ಣು ಕಾಣದ ಮಗಳ ಆಸೆಯನ್ನು ನೆರವೇರಿಸಲು ಅಪ್ಪ ಎಷ್ಟೆಲ್ಲ ಕಷ್ಟ ಪಡುತ್ತಾರೆ, ಮಗಳಿಗಾಗಿ ಅಪ್ಪನ ಹೋರಾಟದ ಕಥೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಿರಣ್ ಸುಬ್ರಮಣಿ.

ನಿರ್ದೇಶಕ, ನಾಯಕ ಕಿರಣ್ ಅವರಿಗೆ ಇದು ಮೊದಲ ಸಿನಿಮಾ. ಹಾಗಂತ ಸಿನಿಮಾರಂಗ ಏನು ಹೊಸದೇನಲ್ಲ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದೀಗ ಸಿ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವಾತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.

ಸಿ ಸಿನಿಮಾ ತಂದೆ- ಮಗಳ ಬಾಂಧವ್ಯದ ಜೊತೆಗೆ ಮೆಡಿಕಲ್ ಮಾಫಿಯಾದ ಬಗ್ಗೆ ಇದೆ. ಎಜಿಎಸ್ ಪ್ರೊಡಕ್ಷನ್ ನಡಿ ನಿರ್ದೇಶಕ, ನಾಯಕ ಕಿರಣ್ ಅವರ ತಂದೆ ಸುಬ್ರಮಣಿ ಅವರು ನಿರ್ಮಾಣ ಮಾಡಿದ್ದಾರೆ. ಸದ್ಯ ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಸಿ ಸಿನಿಮಾ ಆಗಸ್ಟ್‌ 23ಕ್ಕೆ ತೆರೆಗೆ ಬರುತ್ತಿದೆ.

Related posts

Kannada Beatz

‘ನಮ್ ಕನಸ ಕನ್ನಡ …’ – ‘ಆಕಾಶವಾಣಿ ಮೈಸೂರು ಕೇಂದ್ರ’ದಿಂದ ಇನ್ನೊಂದು ಹಾಡು

Kannada Beatz

“ಆ ಒಂದು ಕನಸು” ಡಬ್ಬಿಂಗ್ ಕೆಲಸವನ್ನು ಮುಂದುವರೆಸಿದ ಚಿತ್ರತಂಡ.

administrator

Leave a Comment

Share via
Copy link
Powered by Social Snap