Kannada Beatz
News

ಕೆಕೆ ಬಿಜಿನೆಸ್ ಟಾಕ್ ಶೋ ಶುರು. ಬಿಸಿನೆಸ್ ಮಾಡುವವರಿಗೆ ಇವರು ಕೊಡ್ತಾರೆ ಐಡಿಯಾ

  • ಆಯುಷ್ ಟಿವಿಯಲ್ಲಿ ಶುರುವಾಗ್ತಿದೆ ಬಿಜಿನೆಸ್ ಟಾಕ್ ಶೋ.. ಬಿಸಿನೆಸ್ ಮಾಡುವವರಿಗೆ ಕೆಕೆ ಬಿಜಿನೆಸ್ ಟಾಕ್ ವೇದಿಕೆಯಲ್ಲಿ ಸಿಗಲಿದೆ ಐಡಿಯಾಗಳು*

ಹೊಸದಾಗಿ ಸ್ವಂತ ಬಿಸಿನೆಸ್ ಆರಂಭ ಮಾಡುವ ಆಸೆಯುಳ್ಳವವರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಕೆಕೆ ಬಿಸಿನೆಸ್ ಟಾಕ್ ಎಂಬ ಕಂಪನಿಯು ಸ್ವಂತ ಉದ್ದಿಮೆ ತೆರೆಯುವ ನಿಟ್ಟಿನಲ್ಲಿ ತಮ್ಮದೇ ಐಡಿಯಾಗಳನ್ನ ನೀಡಲಿದೆ. ಕನ್ನಡ ಟಿ‌.ವಿ.ಮಾಧ್ಯಮದಲ್ಲೆ ವಿನೂತನ ಪ್ರಯತ್ನ ವಾಣಿಜ್ಯೋದಮದ ಕ್ರಾಂತಿ‌ ಕೆ.ಕೆ.ಬಿಸಿನೆಸ್ ಟಾಕ್ ಶೋ ನಾಂದಿ ಆಡಲು ಹೊಸ ಹೆಜ್ಜೆ ಇಟ್ಟಿದೆ. ಸಣ್ಣ ಉದ್ದಿಮೆಯಿಂದ ಹಿಡಿದು ದೊಡ್ಡ ಉದ್ದಿಮೆವರೆಗೂ ಎಷ್ಟೆಷ್ಟು ಹಣ ಹೂಡಿಕೆ ಮಾಡಬೇಕು. ಯಾವ ಉದ್ದಿಮೆ ಆರಂಭ ಮಾಡಿದ್ರೆ ಸಕ್ಸಸ್ ಆಗಲು ಸಾಧ್ಯ ಎಂಬುದರ ಕುರಿತು ಒಂದೇ ವೇದಿಕೆಯಲ್ಲಿ ಮಾಹಿತಿ ಸಿಗಲಿದೆ.

ಆಯುಷ್ ಟಿವಿಯಲ್ಲಿ ಈ ಬಿಸಿನೆಸ್ ಟಾಕ್ ಕಾರ್ಯಕ್ರಮ ಮೂಡಿ ಬರಲಿದ್ದು, ಅಕ್ಟೋಬರ್ 6 ರಿಂದ ಪ್ರತೀ ಭಾನುವಾರ ರಾತ್ರಿ 8 ಗಂಟೆಯಿಂದ 9 ಗಂಟೆವರೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಸಂಬಂಧ ಕಂಠೀರವ ಸ್ಟುಡಿಯೋದ ಶಂಕರ್ ನಾಗ್ ಫ್ಲೋರ್ ನಲ್ಲಿ ನಿನ್ನೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕೆಕೆ ಬಿಸಿನೆಸ್ ಟಾಕ್ ನ ಚೇರ್ಮನ್ ಕಲ್ಮೇಶ್ ಕಲ್ಲೂರ್, ಸೇರಿ ಇನ್ನಿತರ ಗಣ್ಯರು ಭಾಗಿಯಾಗಿದ್ದರು. ಜೊತೆಗೆ ಸ್ವಂತ ಉದ್ದಿಮೆ ಆರಂಭ ಮಾಡುವವರು ಮುಂದೆ ಬಂದರೆ ಹಣ ಕೊರತೆ, ಮಾರ್ಕೆಟಿಂಗ್ ವ್ಯವಸ್ಥೆ, ಸೇರಿ ಎಲ್ಲಾ ರೀತಿ ವ್ಯವಸ್ಥೆಯನ್ನ ಕೆಕೆ ಬಿಸಿನೆಸ್ ಟಾಕ್ ಕಡೆಯಿಂದಲೆ ಸಿಗಲಿದೆ ಎಂದು ಮಾಹಿತಿ ನೀಡಲಾಯಿತು.

ಕೆ.ಕೆ ಬಿಸಿನೆಸ್ ಟಾಕ್ ನ ಅಧ್ಯಕ್ಷ ಕಲ್ಮೇಶ್ ಕಲ್ಲೂರ್ ಮಾತನಾಡಿ, ಎಲ್ಲದಕ್ಕೂ ಒಂದು ಒಂದು ಶೋ ಇದೆ. ಬಿಸಿನೆಸ್ ಮೆನ್ ಗಳಿಗೆ ಯಾವುದೇ ರೀತಿ ಶೋ ಇಲ್ಲ. ಹೀಗಾಗಿ ನನಗೆ ಈ ರೀತಿ ಐಡಿಯಾ ಬಂತು. ಅವರ ಪ್ರೊಡಕ್ಟ್, ಅವರ ಸಕ್ಸಸ್, ಬಿಸಿನೆಸ್ ಮಾಡಲು ಗೈಡ್ ಲೈನ್ ನಾವು ಕೊಡುತ್ತೇವೆ. ಈ ರೀತಿ ಫ್ಲಾಟ್ ಫಾರಂ ಬೇಕಿತ್ತು. ಅದನ್ನು ಫಿಲ್ ಮಾಡುತ್ತಿದ್ದೇವೆ. ತಮ್ಮ ಬಿಸಿನೆಸ್ ಜರ್ನಿ ಇಟ್ಕೊಂಡು ಅವರಿಗೆ ಐಡಿಯಾಗಳನ್ನು ಕೊಡುತ್ತೇವೆ ಎಂದು ತಿಳಿಸಿದರು.

ಕೆ.ಕೆ.ಶೋ ಡೈರೆಕ್ಟರ್ ಸಜ್ಜನ್ ಮಾತನಾಡಿ, ಎಲ್ಲಾ ರೀತಿಯ ಟಾಕ್ ನೋಡಿರುತ್ತೀರಾ. ಆಕ್ಟಿಂಗ್ , ಡ್ಯಾನ್ಸಿಂಗ್, ಸಿಂಗಿಂಗ್ ಗೆ ರಿಯಾಲಿಟ ಶೋ ಇದೆ. ಆದರೆ ಬಿಸಿನೆಸ್ ಗೆ ಯಾವುದೇ ಶೋ ಇಲ್ಲ. ಕಾಮನ್ ಆಗಿ ಬಿಸೆನೆಸ್ ಬಗ್ಗೆ ಯೂಟ್ಯೂಬ್ ನಲ್ಲಿ ಮಾತನಾಡುತ್ತಾರೆ. ಆದ್ರೆ ಅವರ ಸಕ್ಸಸ್ , ಫೇಲ್ಯೂರ್ ಬಗ್ಗೆ ಹೇಳ್ತಾರೆ. ಆದರೆ ಎಲ್ಲಿಂದ ಶುರುವಾಯ್ತು ಅನ್ನೋದನ್ನು ಡಿ-ಕೋಡ್ ಮಾಡೋದೆ ಈ ಟಾಕ್ ಶೋನ ಮುಖ್ಯ ಉದ್ದೇಶ. ಬಿಸಿನೆಸ್ ಮಾಡುವುದರಿಂದ ಹಾಳಾಗುತ್ತಾರೆ,. ಲಾಸ್ ಆಗುತ್ತದೆ ಎನ್ನುತ್ತಾರೆ. ಉದ್ಯೋಗ ಸೃಷ್ಟಿ ಕಷ್ಟ. ಆದರೆರ ಉದ್ಯಮ ಸೃಷ್ಟಿ ಮಾಡಬಹುದು. ಅದನ್ನು ಮಾಡಲು ಕೆಕೆ ಟಾಕ್ ಶೋ ವೇದಿಕೆಯಾಗಿದೆ ಎಂದು ತಿಳಿಸಿದರು.

Related posts

ಮಂಡ್ಯಹೈದ ಟೀಸರ್
ಟೈಟಲ್ ಸಾಂಗ್ ಲಾಂಚ್

Kannada Beatz

ಮನೋಜವಂ ಆತ್ರೇಯ ಸಾರಥ್ಯದಲ್ಲಿ “ಮೈ ನೇಮ್ ಇಸ್ ರಾಜ್” ಅದ್ದೂರಿ ಸಂಗೀತ ಕಾರ್ಯಕ್ರಮ.

Kannada Beatz

ನವರಸನಾಯಕ ಈಗ ರಂಗನಾಯಕ

Kannada Beatz

Leave a Comment

Share via
Copy link
Powered by Social Snap