ಇದೇ 30ರಂದು ರಾಜ್ಯದ್ಯಂತ ಯುವ ಪ್ರತಿಭೆಗಳ ಸಾರಥ್ಯದ “ಅಮೃತ ಅಂಜನ್” ಚಿತ್ರ ರಿಲೀಸ್.

ಈಗಾಗಲೇ ಕಿರು ಚಿತ್ರದ ಮೂಲಕ ಸಂಪೂರ್ಣ ಮನೋರಂಜನೆ ನೀಡಿದಂತಹ ” ಅಮೃತಾಂಜನ್” ಪ್ರೇಕ್ಷಕರ ಮನಸನ್ನ ಗೆದ್ದು ಮಿಲಿಯನ್ಸ್ ಗಟ್ಟಲೆ ವ್ಯೂಸನ್ನು ಪಡೆದುಕೊಂಡಿತ್ತು. ಆ ನಿಟ್ಟಿನಲ್ಲಿ ಯುವ ಪ್ರತಿಭೆಗಳ ತಂಡ ಸೇರಿಕೊಂಡು “ಅಮೃತ ಅಂಜನ್” ಎಂಬ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ನಗರದ ಜಿ ಟಿ ಮಾಲ್ ನಲ್ಲಿರುವ ಉತ್ಸವ್ ಲಗಸಿಯಲ್ಲಿ ಆಯೋಜನೆ ಮಾಡಿದ್ದು , ವಿಶೇಷವಾಗಿ ಮಾಜಿ ಎಂಎಲ್ಸಿ , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷೆ , ಹಾಗೂ ಹಿರಿಯ ನಟಿ ಜಯಮಾಲಾ ರವರ ಮೂಲಕ ಟ್ರೈಲರ್ ಲೋಕಾರ್ಪಣೆ ಮಾಡಲಾಯಿತು.

ನಂತರ ಮಾತನಾಡತ ನಾನು ಈ ಕಾರ್ಯಕ್ರಮಕ್ಕೆ ಬರಲು ಕಾರಣ ಲೋಕೇಶ್ ನಾಗಪ್ಪ , ಅವರು ಇಂಜಿನಿಯರ್ ಈಗ ನಾವು ಇರುವಂತ ಮನೆಯನ್ನ ಕಟ್ಟಿಕೊಟ್ಟಿದವರು ಅವರೇ, ಬಹಳ ಸಜ್ಜನಿಕೆಯ ವ್ಯಕ್ತಿ , ಅವರದು ಶಾಲೆ ಇದೆ , ಒಮ್ಮೆ ಶಾಲಾ ಫಂಕ್ಷನ್ ಗೆ ಬನ್ನಿ ಎಂದಿದ್ದರು , ಆಗ ಭೇಟಿ ಮಾಡಿದಾಗ ನಮ್ಮ ಶಾಲೆಯಲ್ಲಿ ಸುಧಾಕರ್ ಎಂಬ ವಿದ್ಯಾರ್ಥಿ ಇದ್ದಾನೆ. ಅವನಿಗೆ ಸಿನಿಮಾ ಬಗ್ಗೆ ಬಹಳಷ್ಟು ಆಸಕ್ತಿ ಇದೇ ಎಂದಿದ್ದರು, ಅದರಂತೆ ಸುಧಾಕರ್ ಬಹಳ ಟ್ಯಾಲೆಂಟೆಡ್ ಹುಡುಗ , ನಾನು ಆತನಿಗೆ ಡಿಗ್ರಿ ಮುಗಿದ ನಂತರ ಸಿನಿಮಾ ಗೆ ಬನ್ನಿ , ವಿದ್ಯೆ ಬಹಳ ಮುಖ್ಯ ಎಂದಿದೆ , ಅದರಂತೆ ಕೆಮಿಕಲ್ ಇಂಜಿನಿಯರ್ ಕೂಡ ಆದರೂ , ಒಮ್ಮೆ ಅವರ ತಂಡ ಮಾಡಿದಂತಹ ವೆಬ್ ಸೀರೀಸ್ ನೋಡಿದೆ ಎರಡುವರೆ ಕೋಟಿ ಜನ ವೀಕ್ಷಣೆ ಮಾಡಿದ್ದಾರೆ. ಈ ಕಾಮಿಡಿ ವೆಬ್ ಸೀರೀಸ್ ಇಷ್ಟು ಜನ ನೋಡಿದ್ದಾರೆಂದರೆ ಇವರ ಭವಿಷ್ಯ ಮುಂದೆ ಹೇಗಿರಬಹುದು ಎಂದುಕೊಂಡಿದ್ದೆ , ಬಹಳ ಆಸಕ್ತಿಯಿಂದ ಇಡೀ ತಂಡ ಕೆಲಸ ಮಾಡಿದ್ದು , ಕಲಾವಿದರು , ನಿರ್ದೇಶಕರು, ತಂತ್ರಜ್ಞರಿಗೆ ಎಲ್ಲರಿಗೂ ಒಳ್ಳೆಯದಾಗಲಿ. ಈ ಚಿತ್ರ ಇದೆ 30ರಂದು ಬಿಡುಗಡೆಯಾಗುತ್ತಿದೆ ಎಲ್ಲರೂ ಈ ಯುವ ಪ್ರತಿಭೆಗಳ ಚಿತ್ರವನ್ನ ನೋಡಿ ಬೆಂಬಲ ನೀಡಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರದ ನಿರ್ಮಾಪಕ ಲೋಕೇಶ್ ಮಾತನಾಡುತ್ತ ನಮ್ಮ ಶಾಲೆಯಲ್ಲಿ ಓದಿದಂತಹ ಸುಧಾಕರ್ ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾನೆ ಎಂದರೆ ನನಗೆ ಬಹಳ ಖುಷಿ ಇದೆ. ಬಹಳಷ್ಟು ಜನ ನನ್ನ ಬಳಿ ಸುಧಾಕರ ಕೋಪಿಷ್ಟ ಇವನಿಗೆ ಯಾಕೆ ಇಷ್ಟು ಬೆಂಬಲ ಎಂದಿದ್ದಾಗ , ನಾನು ಅವನಲ್ಲಿ ಖಂಡಿತ ಛಲ , ಮುಂದೆ ಬೆಳೆಯುತ್ತಾನೆ ಅಂದುಕೊಂಡೆ ಅದರಂತೆ ಇಂದು ಸಿನಿಮಾ ಮಾಡಿ ನಿಮ್ಮ ಮುಂದೆ ಬಂದಿದ್ದಾನೆ. ನಾನೊಬ್ಬನೇ ನಿರ್ಮಾಪಕನೆಲ್ಲ ನನ್ನ ಜೊತೆ ಇನ್ನೊಬ್ಬರು ಸಾತ್ ನೀಡಿದ್ದಾರೆ. ನಾನು ಈ ಚಿತ್ರದಿಂದ ಹಣ ಬರುತ್ತೆ ಎಂದು ನಿರೀಕ್ಷೆ ಮಾಡಿಲ್ಲ. ನಾನು ತಂಡಕ್ಕೆ ಹೇಳಿದೀನಿ ಪಾಸಿಟಿವ್ ಗಿಂತ ನೆಗೆಟಿವ್ ಬಗ್ಗೆ ಹೆಚ್ಚು ಗಮನ ಇರಲಿ, ಗೆಲ್ಲಲು ಪ್ರಯತ್ನ ಮಾಡಿ , ಗೆಲುವು ಸೋಲು ನಮ್ಮ ಕೈಯಲ್ಲಿ ಇಲ್ಲ ಎಂದಿದ್ದೇನೆ. ಚಿತ್ರ ಚೆನ್ನಾಗಿದ್ದಾರೆ ಖಂಡಿತ ಎಲ್ಲರೂ ಬೆಂಬಲ ನೀಡುತ್ತಾರೆ. ಅದರಂತೆ ಇಂದು ನಮ್ಮ ಕಾರ್ಯಕ್ರಮಕ್ಕೆ ಹಿರಿಯ ನಟಿ ಜಯಮಾಲ ರವರು ಬಂದು ಟ್ರೈಲರ್ ಬಿಡುಗಡೆ ಮಾಡಿ ಬೆಂಬಲ ನೀಡಿದ್ದಾರೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು.
ಈ ಚಿತ್ರದ ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ಮಾತನಾಡುತ್ತಾ ನಾನು ಈ ಚಿತ್ರವನ್ನು ಆರಂಭಿಸಲು ಮುಖ್ಯ ಕಾರಣವೇ ನನ್ನ ಅಮೃತಾಂಜನ್ ಕಿರುಚಿತ್ರ. ಈ ನಮ್ಮ ಅಮೃತ ಅಂಜನ್ ಚಿತ್ರ ಸಂಪೂರ್ಣ ಕಾಮಿಡಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು , 80 ಪರ್ಸೆಂಟ್ ಹಾಸ್ಯ , 20 ಪರ್ಸೆಂಟ್ ಸೆಂಟಿಮೆಂಟ್ ಕಥೆಯನ್ನು ಒಳಗೊಂಡಿದೆ. ಪ್ರೀತಿ, ಸ್ನೇಹ , ಸಂಬಂಧಗಳ ಜೊತೆಗೆ ಹಾಸ್ಯದ ಲೇಪನದೊಂದಿಗೆ ಎರಡು ಹಾಡು, ಫೈಟ್ ಗಳು ಸೇರಿದಂತೆ ಎಲ್ಲರಿಗೂ ಇಷ್ಟವಾಗುವಂತ ಅಂಶ ಒಳಗೊಂಡಿದೆ. ನೈಜಕ್ಕೆ ಪೂರಕವಾಗಿ ಬರಬೇಕೆಂದು ಬಹಳಷ್ಟು ಶ್ರಮಪಟ್ಟು ಎಲ್ಲರೂ ಕೆಲಸ ಮಾಡಿದ್ದೇವೆ.
ವಿಶೇಷವಾಗಿ ನಮ್ಮ ಈ ಚಿತ್ರದ ಟ್ರೈಲರ್ ಬಿಡುಗಡೆಯನ್ನು ಜಯಮಾಲಾ ಮೇಡಂ ರವರು ಮಾಡಿದ್ದು ನಮಗೆ ಬಹಳಷ್ಟು ಬೆಂಬಲ ಸಿಕ್ಕಿದೆ. ನಮ್ಮ ಚಿತ್ರವನ್ನು ಜಯಣ್ಣ ಫಿಲಂಸ್ ಮೂಲಕ ರಿಲೀಸ್ ಮಾಡುತ್ತಿದ್ದೇವೆ , ನಿಮ್ಮೆಲ್ಲರ ಪ್ರೀತಿ ಸಹಕಾರ ನಮ್ಮ ಚಿತ್ರಕ್ಕೆ ಇರಲಿ ಎಂದು ಕೇಳಿಕೊಂಡರು.
ಇನ್ನು ಈ ಚಿತ್ರ ಆರಂಭವಾಗಲು ಮುಖ್ಯ ರೂವಾರಿಯಾಗಿರುವಂತಹ ನಟ ಸುಧಾಕರ್ ಗೌಡ ಮಾತನಾಡುತ್ತಾ ನಮ್ಮ ತಂಡ ಇವತ್ತು ಈ ವೇದಿಕೆ ಮೇಲೆ ಇದೆ ಅಂದರೆ , ಅದಕ್ಕೆ ಮುಖ್ಯ ಕಾರಣ ನನ್ನ ಮಾರ್ಗದರ್ಶಿ, ಗುರುಗಳಾದ ಲೋಕೇಶ್ ನಾಗಪ್ಪ. ನಾನು ಅವರ ಶಾಲೆಯಲ್ಲಿ ಓದಿ ನಂತರ ಇಂಜಿನಿಯರಿಂಗ್ ಮಾಡಿ , ನನ್ನ ಆಸೆಯಂತೆ ಇಂದು ಸಿನಿಮಾ ನಟನಾಗಿ ಕಾಣಿಸಿಕೊಂಡಿದ್ದೇನೆ. ನಾನು ಇಲ್ಲಿವರೆಗೂ ಅವರ ಬಗ್ಗೆ ಎಲ್ಲೂ ಮಾತನಾಡಿಲ್ಲ , ಯಾಕೆಂದರೆ ನಾನು ಏನಾದರೂ ಸಾಧಿಸಿ ನಂತರ ಅವರ ಬಗ್ಗೆ ಹೇಳಿಕೊಡಬೇಕು ಅಂದುಕೊಂಡಿದ್ದೆ , ಇವತ್ತು ಅವಕಾಶ ಸಿಕ್ಕಿದೆ. ಖಂಡಿತ ನಮ್ಮ ಇಡೀ ತಂಡಕ್ಕೆ ಅವರ ಬೆಂಬಲವೇ ಹೆಚ್ಚು ಎಂದರು. ಬಹಳ ಇಷ್ಟಪಟ್ಟು ಶ್ರಮವಹಿಸಿ ಸಿನಿಮಾ ಮಾಡಿದ್ದೇವೆ. ಇಂದು ನಮ್ಮ ಕಾರ್ಯಕ್ರಮಕ್ಕೆ ಹಿರಿಯ ನಟಿ ಜಯಮಾಲಾ ಮೇಡಂ ನೀಡಿರುವ ಸಪ್ಪೋರ್ಟ್ ನಾನು ಎಂದು ಮರೆಯುವುದಿಲ್ಲ. ನಾವು ಜೀರೋ ಇಂದ ಈ ಮಟ್ಟಕ್ಕೆ ಬಂದಿದ್ದೇವೆ. ನಾವು ಚಿತ್ರರಂಗದಲ್ಲಿ ಬೆಳೆಯಬೇಕೆಂದು ಬಂದಿರುವಂತಹವರು , ದಯವಿಟ್ಟು ನಮ್ಮನ್ನು ಹರಸಿ ಬೆಳೆಸಿ ಎಂದು ಕೇಳಿಕೊಂಡರು.
ನಟ ಗೌರವ ಶೆಟ್ಟಿ ಮಾತನಾಡುತ್ತಾ ನಾವು ಏನು ಅಂದುಕೊಂಡಿದ್ದೆವು, ಅದರಂತೆ ನಮ್ಮ ಚಿತ್ರ ಬಂದಿದೆ. ಖಂಡಿತ ಇದು ಸಂಪೂರ್ಣ ಹಾಸ್ಯ ಭರಿತ ಮನೋರಂಜನೆಯ ಚಿತ್ರ. ಇಡೀ ತಂಡ ಬಹಳ ಶ್ರಮಪಟ್ಟು ಕೆಲಸ ಮಾಡಿದೆ. ನನ್ನದು ಈ ಚಿತ್ರದಲ್ಲಿ ಒಂದು ಕುಡುಕನ ಪಾತ್ರ. ಈಗ ನೀವು ಟ್ರೈಲರ್ ನೋಡಿದ್ದೀರಿ ನಿಮಗೆಲ್ಲಾ ಹೇಗೆ ಅನಿಸಿತು ಎಂದು ತಿಳಿಸಿ , ಅದೇ ರೀತಿ ನಮ್ಮ ಚಿತ್ರ ಇದೇ ತಿಂಗಳು 30ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ಬಂದು ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.
ನಟಿ ಪಾಯಲ್ ಚಂಗಪ್ಪ ಮಾತನಾಡುತ್ತಾ ಒಂದು ಸಿನಿಮಾ ಮಾಡುವುದು ಅಷ್ಟು ಸುಲಭ ಅಲ್ಲ , ಹೊಸಬರಿಗೆ ಅವಕಾಶ ಕೊಡುವುದು ಬಹಳ ಕಷ್ಟ , ನಾನು ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ. ನನಗೆ ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದಕ್ಕೆ, ನಾನು ಕಿರುಚಿತ್ರದಲ್ಲೂ ಅಭಿನಯಿಸಿದ್ದೇನೆ. ಈಗ ಸಿನಿಮಾದಲ್ಲೂ ಉರಿ ಎಂಬ ಪಾತ್ರವನ್ನು ನಿರ್ವಹಿಸಿದ್ದೇನೆ. ಈ ಚಿತ್ರದಲ್ಲಿ ಲವ್ ಸ್ಟೋರಿ , ಕಾಲೇಜು ಕಥೆ , ಫ್ಯಾಮಿಲಿ ಕಂಟೆಂಟ್ ಎಲ್ಲವೂ ಒಳಗೊಂಡಿದೆ. ನಮ್ಮ ಸಿನಿಮಾ ಇದೆ 30ರಂದು ಚಿತ್ರಮಂದಿರಕ್ಕೆ ಬರುತ್ತಿದೆ. ಬಂದು ಎಲ್ಲರೂ ನೋಡಿ ಎಂದು ಕೇಳಿಕೊಂಡರು.
ನಟಿ ಶ್ರೀ ಭವ್ಯ ಮಾತನಾಡುತ್ತಾ ನಾನು ಅಮೃತಂಜನ್ ಹಚ್ಚಿಕೊಂಡು ಎರಡು ಐಡಿಯಾ ಕೊಟ್ಟಿದ್ದೆ ಕಿರು ಚಿತ್ರದಲ್ಲಿ , ಈಗ ಸಿನಿಮಾದಲ್ಲಿ ಬಹಳಷ್ಟು ಐಡಿಯಾಗಳನ್ನು ನೀಡಿದ್ದೇನೆ.
ನಮ್ಮ ತಂಡದ ಪ್ರತಿಯೊಬ್ಬರು ಬಹಳ ಟ್ಯಾಲೆಂಟೆಡ್ ಆಗಿದ್ದು, ಬಹಳ ಶ್ರಮವಹಿಸಿ ಈ ಒಂದು ಸಿನಿಮಾವನ್ನು ಮಾಡಿದ್ದೇವೆ ಖಂಡಿತ ಇದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತೆ ನೀವೆಲ್ಲರೂ ನೋಡಿ ಹರಿಸಿ ಎಂದು ಕೇಳಿಕೊಂಡರು.
ಇನ್ನು ಈ ಚಿತ್ರದಲ್ಲಿ ಅಭಿನಯಿಸಿದಂತಹ ಕಲಾವಿದರಾದ ಕಾರ್ತಿಕ್ ರೂವಾರಿ, ಹಾಡನ್ನು ಬರೆದ ವೆಂಕಟೇಶ್ ಕುಲಕರ್ಣಿ ಸಿರಿದಂತೆ ಹಲವರು ಚಿತ್ರದ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ಹಿರಿಯ ನಟ ನವೀನ್. ಡಿ. ಪಡೀಲ್ , ಮಧುಮತಿ ಹಾಗೂ ಇನ್ನು ಮುಂತಾದವರು ಅಭಿನಯಿಸಿದ್ದು, ಈ ಚಿತ್ರಕ್ಕೆ ಸುಮಂತ್ ಆಚಾರ್ಯ ಛಾಯಾಗ್ರಹಣ , ಕಿರಣ್ ಕುಮಾರ್ ಸಂಕಲನ ಹಾಗೂ ರೋಹಿತ್ ಶೋವರ್ ಹಿನ್ನೆಲೆ ಸಂಗೀತವನ್ನು ಒದಗಿಸಿದ್ದಾರೆ. ಯುವ ಪ್ರತಿಭೆಗಳು ಸೇರಿ ನಿರ್ಮಿಸಿರುವ ಈ ಚಿತ್ರ ಇದೇ 30ರಂದು ರಾಜ್ಯಾದ್ಯಂತ ರಾರಾಜಿಸಲಿದೆ.

