HomeNewsಅಜಯ್ ರಾವ್ ಹುಟ್ಟುಹಬ್ಬಕ್ಕೆ ಹೊಸ ಚಿತ್ರ ಘೋಷಣೆ .

ಅಜಯ್ ರಾವ್ ಹುಟ್ಟುಹಬ್ಬಕ್ಕೆ ಹೊಸ ಚಿತ್ರ ಘೋಷಣೆ .

ಹರೀಶ್ ದೇವಿತಂದ್ರೆ ನಿರ್ಮಾಣದ ಈ ಚಿತ್ರಕ್ಕೆ ಶಿವತೇಜಸ್ ನಿರ್ದೇಶನ .

ಜನವರಿ 24, ನಾಯಕ ಅಜಯ್ ರಾವ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ನಾಯಕನಾಗಿ ನಟಿಸಲಿರುವ ನೂತನ ಚಿತ್ರದ ಘೋಷಣೆಯಾಗಿದೆ. ಹೆಚ್ ಪಿ ಆರ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಹರೀಶ್ ದೇವಿತಂದ್ರೆ ನಿರ್ಮಿಸುತ್ತಿರುವ ಈ ಚೊಚ್ಚಲ ಚಿತ್ರವನ್ನು “ಮಳೆ” ಚಿತ್ರದ ಖ್ಯಾತಿಯ ಶಿವತೇಜಸ್ ನಿರ್ದೇಶಿಸುತ್ತಿದ್ದಾರೆ.

ಈ ಹಿಂದೆ ನಾನು ನಿರ್ದೇಶಿಸಿದ “ಧೈರ್ಯಂ” ಚಿತ್ರದಲ್ಲಿ ಅಜಯ್ ರಾವ್ ನಾಯಕನಾಗಿ ನಟಿಸಿದ್ದರು ಹಾಗೂ “ದಿಲ್ ಪಸಂದ್” ಚಿತ್ರದಲ್ಲಿ ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಹೊಸ ಚಿತ್ರವೊಂದು ಸದ್ಯದಲ್ಲೇ ಆರಂಭವಾಗಲಿದೆ. . ಚಿತ್ರದ ಶೀರ್ಷಿಕೆ ಹಾಗೂ ಇತರ ಮಾಹಿತಿಯನ್ನು ಸದ್ಯದಲ್ಲೇ ನೀಡುವುದಾಗಿ ನಿರ್ದೇಶಕ ಶಿವತೇಜಸ್ ತಿಳಿಸಿದ್ದಾರೆ.

Must Read

spot_img
Share via
Copy link
Powered by Social Snap