Kannada Beatz
News

175 ದಿನ ಪೂರೈಸಿದ “ಲಂಕೆ”

.

ಸಂಕಷ್ಟದ ಸಮಯದಲ್ಲಿ ಸಂಭ್ರಮದ ವಾತಾವರಣ.

ಕಳೆದ ಎರಡು ವರ್ಷಗಳಿಂದ ಕೊರೋನ ಹೊಡೆತಕ್ಕೆ ಸಿಲುಕಿ ಚಿತ್ರರಂಗ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಅಂತಹ ಸಂಕಷ್ಟದ ಸಮಯದಲ್ಲಿ ಬಿಡುಗಡೆಯಾಗಿ ಜನಮನ ಗೆದ್ದಿರುವ ಚಿತ್ರ “ಲಂಕೆ”.

ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿ, ರಾಮ್ ಪ್ರಸಾದ್ ಎಂ.ಡಿ ನಿರ್ಮಿಸಿ, ನಿರ್ದೇಶಿಸಿರುವ “ಲಂಕೆ” ಚಿತ್ರ 175 ದಿನಗಳನ್ನು ಪೂರೈಸಿದೆ.

ನಮ್ಮ ಚಿತ್ರ ಯಶಸ್ವಿ 175 ದಿನಗಳನ್ನು ಪೂರೈಸಿರುವುದು ನಿಜಕ್ಕೂ ಸಂತಸದ ವಿಷಯ. ಈ ಸಂದರ್ಭದಲ್ಲಿ ನಾಯಕ ಯೋಗಿ ಸೇರಿದಂತೆ ಇಡೀ ನಮ್ಮ ತಂಡಕ್ಕೆ ಧನ್ಯವಾದ. ಈ ಸಂತೋಷ ಹಂಚಿಕೊಳ್ಳಲು ಸದ್ಯದಲ್ಲೇ ಸಮಾರಂಭ ಆಯೋಜಿಸಲಿದ್ದೇವೆ.
ಈ ಖುಷಿ ಸಮಯದಲ್ಲಿ ಚಿತ್ರದಲ್ಲಿ ನಟಿಸಿರುವ ಸಂಚಾರಿ ವಿಜಯ್ ಇಲ್ಲದಿರುವುದು ನಮಗೆ ದುಃಖದ ಸಂಗತಿ.
ಮತ್ತೊಂದು ಖುಷಿಯ ವಿಚಾರವೆಂದರೆ ನಮ್ಮ ಚಿತ್ರ ತೆಲುಗಿನಲ್ಲೂ ನಿರ್ಮಾಣವಾಗುತ್ತಿದ್ದು, ಏಪ್ರಿಲ್ ನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. “ಲಂಕೆ” ಚಿತ್ರದಲ್ಲಿ ತಾಯಿ ಪಾತ್ರದ ಮೂಲಕ ಎಲ್ಲರ ಗಮನಸೆಳೆದಿದ್ದ ಎಸ್ಟರ್ ನರೋನ, ತೆಲುಗು ಅವತರಣಿಕೆಯಲ್ಲಿ ನೆಗಟೀವ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾನೇ ನಿರ್ದೇಶನ ಮಾಡಲಿದ್ದೇನೆ‌. ಈ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸದ್ಯದಲ್ಲೇ ನೀಡುತ್ತೇನೆ ಎಂದು “ಲಂಕೆ”ಯ ನಿರ್ದೇಶಕ ರಾಮ್ ಪ್ರಸಾದ್ ಎಂ.ಡಿ ತಿಳಿಸಿದ್ದಾರೆ.

Related posts

ಅನುಷ್ಕಾ ಶೆಟ್ಟಿ ಅಭಿನಯದ “ಘಾಟಿ” ಚಿತ್ರದ ಮೂಲಕ ವಿತರಣಾ ವಲಯಕ್ಕೆ ಅಡಿಯಿಟ್ಟ “ಕೊತ್ತಲವಾಡಿ” ಚಿತ್ರದ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ .

Kannada Beatz

ಅಪ್ಪು ಸ್ಮರಣೆಯೊಂದಿಗೆ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ ಪ್ರತಿಷ್ಠಿತ “ಸೈಮಾ” ಅವಾರ್ಡ್ಸ್ 2022.

Kannada Beatz

ತೆರೆಮೇಲೆ ಬರ್ತಿದೆ ಸಹ್ಯಾದ್ರಿ ಕಾಡಿನ ಸಸ್ಪೆನ್ಸ್ ಥ್ರಿಲ್ಲರ್ ಕಥೆ “ಜುಗಾರಿ ಕ್ರಾಸ್‌”

Kannada Beatz

Leave a Comment

Share via
Copy link
Powered by Social Snap