HomeNewsಟ್ರೈಲರ್ ಮೂಲಕ ಬಂದ 'ಬನ್ ಟೀ': ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆ ಬಗ್ಗೆ ಹೇಳ್ತಿದೆ ಈ ಸಿನಿಮಾ

ಟ್ರೈಲರ್ ಮೂಲಕ ಬಂದ ‘ಬನ್ ಟೀ’: ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆ ಬಗ್ಗೆ ಹೇಳ್ತಿದೆ ಈ ಸಿನಿಮಾ

  • ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆ ಬಗ್ಗೆ ಹೇಳ್ತಿದ್ದಾರೆ ‘ಬನ್ ಟೀ’: ಟ್ರೈಲರ್ ಮೂಲಕ ಗಮನ ಸೆಳೆಯುತ್ತಿದೆ ಸಿನಿಮಾ
  • ಬನ್ರಿ ಚಿತ್ರಮಂದಿರಕ್ಕೆ: ಕುಡಿದು ತಿನ್ನೋಣ ‘ಬನ್ ಟೀ’

ಸ್ಯಾಂಡಲ್‌ವುಡ್‌ನಲ್ಲಿ ವಾರಕ್ಕೆ ಅನೇಕ ಸಿನಿಮಾಗಳು ರಿಲೀಸ್ ಆಗುತ್ತವೆ. ಅದರಲ್ಲಿ ಕೆಲವು ಹೊಸಬರ ಹೊಸ ಸಿನಿಮಾಗಳು ಇವೆ. ಇದೀಗ ಮತ್ತೊಂದು ಹೊಸಬರ ಹೊಸ ಸಿನಿಮಾ ರಿಲೀಸ್ ರೆಡಿಯಾಗಿದೆ. ಹೌದು, ‘ಬನ್ ಟೀ’ ಎನ್ನುವ ಸಿನಿಮಾ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ರಿಲೀಸ್‌ಗೂ ಮೊದಲೇ ಸಿನಿಮಾತಂಡ ಟ್ರೈಲರ್ ಮೂಲಕ ಮಾಧ್ಯಮದ ಮುಂದೆ ಹಾಜರಾಗಿತ್ತು. ‘ಬನ್ ಟೀ’ ಅಂದಕ್ಷಣ ಇದು ಬನ್ ಮತ್ತು ಟೀ ಬಗ್ಗೆ ಇರುವ ಸಿನಿಮಾ ಅಂತ ಅಂದ್ಕೋಬೇಡಿ, ಇದು ಶಿಕ್ಷಣದ ಬಗ್ಗೆ ಇರುವ ಚಿತ್ರ.

ಬನ್ ಟೀ ಚಿತ್ರಕ್ಕೆ ಉದಯ್ ಕುಮಾರ್ ಆಕ್ಷನ್ ಹೇಳಿದ್ದಾರೆ. ಅಂದಹಾಗೆ ಉದಯ್ ಕುಮಾರ್ ತನ್ನ ಸ್ನೇಹಿತನ ಜೀವನದಲ್ಲಿ ನಡೆದ ಕಥೆಯನ್ನೆ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಎನ್ನುವ ಕಾನ್ಸೆಪ್ಟ್ ಇರದೆ ಸಂಪೂರ್ಣ ಕಂಟೆಂಟ್ ಮೇಲೆ ಇರುವ ಚಿತ್ರವಾಗಿದೆ. ಬನ್ ಟೀ ಪ್ರಮುಖ ಪಾತ್ರದಲ್ಲಿ ಉಮೇಶ್ ಮತ್ತು ಶ್ರೀದೇವಿ, ಗುಂಡಣ್ಣ ಚಿಕ್ಕಮಗಳೂರು ಸೇರಿದಂತೆ ಅನೇಕರು ನಟಿಸಿದ್ದಾರೆ. ನಟ ಉಮೇಶ್ ಲಾಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಈ ಸಿನಿಮಾದ ಕಾನ್ಸೆಪ್ಟ್ ಇಷ್ಟ ಆಗಿ ನಟಿಸಿದ್ದಾರೆ. ನಟಿ ಶ್ರೀದೇವಿ ಅವರಿಗೂ ಇದು ಮೊದಲ ಸಿನಿಮಾವಾಗಿದೆ.

ಬನ್ ಟೀ ಸಿನಿಮಾದಲ್ಲಿ ಮೌರ್ಯ ಮತ್ತು ತನ್ಮಯಿ ಇಬ್ಬರು ಬಾಲ ಕಲಾವಿದರು ನಟಿಸಿದ್ದಾರೆ. ಬನ್‌ಟೀ ಪಾತ್ರದಲ್ಲಿ ಮೌರ್ಯ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಯಾವುದೇ ಸೆಟ್ ಬಳಸದೆ ಶೂಟಿಂಗ್ ಮಾಡಿದ್ದಾರೆ. ಸ್ಲಮ್, ಮಾರ್ಕೆಟ್ ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಮಾಡಿದ್ದಾರೆ. ಹದಗೆಟ್ಟಿರುವ ಶಿಕ್ಷಣದ ವ್ಯವಸ್ಥೆ, ಸಂಪೂರ್ಣವಾಗಿ ಕಮರ್ಷಿಯಲ್ ಆಗಿರುವ ಶಿಕ್ಷಣದ ಸುತ್ತ ಬನ್ ಟೀ ಸಿನಿಮಾದ ಕತೆ ಸುತ್ತುತ್ತದೆ.

ಬನ್ ಟೀ ಚಿತ್ರಕ್ಕೆ ಕೇಶವ್ ಆರ್ ನಿರ್ಮಾಣ ಮಾಡಿದ್ದಾರೆ. ಪ್ರದ್ಯೋತ್ತನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹಾಡುಗಳು ಇರದಿದ್ದರೂ ಬ್ಯಾಗ್ರೌಂಡ್ ಮ್ಯೂಸಿಕ್ ಅದ್ಭುತವಾಗಿ ಬಂದಿದೆ ಎನ್ನುವುದು ಟ್ರೈಲರ್ ನೋಡಿದ್ರೆ ಗೊತ್ತಾಗುತ್ತಿದೆ. ರಾಜ ರಾವ್ ಕ್ಯಾಮರಾ ವರ್ಕ್ ಸಿನಿಮಾಗಿದೆ. ಸದ್ಯ ಟ್ರೈಲರ್ ಮೂಲಕ ಗಮನ ಸೆಳೆಯುತ್ತಿರುವ ಬನ್ ಸಿನಿಮಾ ಇದೇ ತಿಂಗಳು 22ಕ್ಕೆ ತೆರೆಗೆ ಬರುತ್ತಿದೆ.

Must Read

spot_img
Share via
Copy link
Powered by Social Snap