Kannada Beatz
News

ಸಾಯಿ ಪಲ್ಲವಿ ಅಭಿನಯದ “ಗಾರ್ಗಿ” ಚಿತ್ರ ಜುಲೈ 15 ರಂದು ತೆರೆಗೆ.

ಪರಮ್ ವಾ ಪಿಕ್ಚರ್ಸ್ ಕನ್ನಡದಲ್ಲಿ ಈ ಚಿತ್ರವನ್ನು ಪ್ರಸ್ತುತ ಪಡಿಸಲಿದೆ.

ಖ್ಯಾತ ನಟಿ ಸಾಯಿ‌ ಪಲ್ಲವಿ ಅಭಿನಯದ “ಗಾರ್ಗಿ’ ಚಿತ್ರ ಜುಲೈ ಹದಿನೈದರಂದು ಬಿಡುಗಡೆಯಾಗುತ್ತಿದೆ. ಹೆಸರಾಂತ ಪರಮ್ ವಾ ಪಿಕ್ಚರ್ಸ್ ಕನ್ನಡದಲ್ಲಿ ಈ ಚಿತ್ರವನ್ನು ಪ್ರಸ್ತುತ ಪಡಿಸಲಿದೆ. ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ
ಬಿಡುಗಡೆಯಾಗುತ್ತಿದೆ.

ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಚಿತ್ರ ತಮಿಳಿನಲ್ಲಿ ನಿರ್ಮಾಣವಾಗಿದ್ದು, ಕನ್ನಡ ಹಾಗೂ ತೆಲುಗಿಗೆ ಡಬ್ ಆಗಿದೆ.

ರವಿಚಂದ್ರನ್ ರಾಮಚಂದ್ರನ್, ಐಶ್ವರ್ಯ ಲಕ್ಷ್ಮೀ, ಥಾಮಸ್ ಜಾರ್ಜ್ ಹಾಗೂ ಗೌತಮ್ ರಾಮಚಂದ್ರನ್ ನಿರ್ಮಿಸಿರುವ ಈ ಚಿತ್ರಕ್ಕೆ ಗೋಗಿಂದ್ ವಸಂತ ಸಂಗೀತ ನೀಡಿದ್ದಾರೆ. ಸ್ರೈಯಂತಿ ಹಾಗೂ ಪ್ರೇಮ್ ಅಕ್ಕಟ್ಟು ಛಾಯಾಗ್ರಹಣ, ಶಫಿಕ್ ಮೊಹಮದ್ ಆಲಿ ಅವರ ಸಂಕಲನ ಈ ಚಿತ್ರಕ್ಕಿದೆ.

ಸಾಯಿಪಲ್ಲವಿ, ಕಾಳಿ ವೆಂಕಟ್, ಸರವಣನ್, ಜಯಪ್ರಕಾಶ್, ಆರ್ ಎಸ್ ಶಿವಾಜಿ, ಲಿವಿಂಗ್ ಸ್ಟನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌.

Related posts

ಕನ್ನಡದ ವ್ಯಾಕರಣ ಹೇಳಿಕೊಡುವ ಈ ಡಿಫರೆಂಟ್ ಗ್ಯಾಂಗ್ ಸ್ಟರ್.. ಸವರ್ಣದೀರ್ಘ ಸಂಧಿ ಚಿತ್ರದ ರಿವ್ಯೂ

administrator

ಬೆಂಗಳೂರಿನಲ್ಲಿ ‘The Conversion’ ಸಿನಿಮಾದ ಪ್ರೀಮಿಯರ್ ಶೋ..ಮೇ 6ಕ್ಕೆ ಬೆಳ್ಳಿತೆರೆಗೆ ಮತಾಂತರ ವಿಷಯಾಧಾರಿತ ಚಿತ್ರ ಎಂಟ್ರಿ

Kannada Beatz

ಮುಲಕುಪ್ಪಡಮ್ ಸಂಸ್ಥೆಯ ತೆಕ್ಕೆಗೆ ಬನಾರಸ್ ವಿತರಣಾ ಹಕ್ಕು

Kannada Beatz

Leave a Comment

Share via
Copy link
Powered by Social Snap