HomeNewsರಾಗಿಣಿ ನಟನೆಯ "ಸಾರಿ" ಚಿತ್ರಕ್ಕೆ ಚಾಲನೆ

ರಾಗಿಣಿ ನಟನೆಯ “ಸಾರಿ” ಚಿತ್ರಕ್ಕೆ ಚಾಲನೆ

ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಸಾರಿ (ಕರ್ಮ ರಿಟರ್ನ್ಸ್) ಎಂಬ ನಾಯಕಿ ಪ್ರಧಾನ ಚಿತ್ರದ ಮೂಲಕ ನಟಿ ರಾಗಿಣಿ ದ್ವಿವೇದಿ ಅವರು ಬಹಳ ದಿನಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ಮಾಡಿರದ ವಿಶೇಷ ಪಾತ್ರದಲ್ಲಿ ರಾಗಿಣಿ ಕಾಣಿಸಿಕೊಳ್ಳಲಿದ್ದಾರೆ.

ಕಿಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ (ಕೆನಡ)ಅಡಿಯಲ್ಲಿ ಆದ‌ ನವೀನ್ ಕುಮಾರ್ (ಕೆನಡಾ ) ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬ್ರಹ್ಮ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಮಾಗಡಿ ರಸ್ತೆಯ,ಮಾಚೋಹಳ್ಳಿ ಇರುವ ಲಕ್ಕೇನಹಳ್ಳಿ ಗ್ರಾಮದೇವತೆ ದೇವಸ್ಥಾನದಲ್ಲಿ ಮಂಗಳವಾರ ನೆರವೇರಿತು. ಕಳೆದ ವಾರವೇ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆಯ ದುಃಖದಲ್ಲಿ ಮುಂದೂಡಲಾಗಿತ್ತು.


ಈ ಹಿಂದೆ ಇದೇ ನಿರ್ಮಾಪಕ, ನಿರ್ದೇಶಕರ ನಿರ್ಮಾಣದ ಸಿದ್ದಿಸೀರೆ ಎಂಬ ಚಿತ್ರವು ನ್ಯೂಯಾರ್ಕ್, ಟೋಕಿಯೋ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿತ್ತು. ಸಕಲೇಶಪುರ, ಬೆಂಗಳೂರು ಹಾಗೂ ಕಗ್ಗಲೀಪುರದ ಸುತ್ತಮುತ್ತ ಸಾರಿ ಚಿತ್ರದ ಶೂಟಿಂಗ್ ನಡೆಯಲಿದ್ದು, ಅಫ್ಜಲ್(ಸೂಪರ್‌ಸ್ಟಾರ್) ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಜಾನ್ ಜಾರ್ಜ್ ಹಾಗೂ ಜೈಕೃಪಲಾನಿ ಅವರ ಸಹನಿರ್ಮಾಪಕರು.


ಅದ್ದೂರಿ ವೆಚ್ಚದ ಈ ಚಿತ್ರಕ್ಕೆ ರಾಜು ಎಮ್ಮಿಗನೂರು ಮತ್ತು ಬ್ರಹ್ಮ ಅವರ ಸಂಗೀತ, ರಾಜೀವ್ ಗಣೇಸನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಅಲ್ಟಿಮೇಟ್ ಶಿವು ಸಾಹಸನಿರ್ದೇಶನ, ಭೂಪತಿರಾಜ್ ಸಂಕಲನ, ಇಮ್ರಾನ್ ಸರ್ದಾರಿಯಾ, ಮನು ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದಲ್ಲಿ ಇತರೆ ಪಾತ್ರಗಳಲ್ಲಿ ರಾಗಿಣಿ ಅವರ ಜೊತೆಗೆ ಅಫ್ಜಲ್(ಸೂಪರ್‌ಸ್ಟಾರ್ಸ್) ವಿ.ಜೆ.ಮನೋಜ್, ರಣವೀರ್, ಯುಕ್ತ ಪೆರ್ವಿ, ಪೂಜಾ ಪಾಟೀಲ್ ನಟಿಸುತ್ತಿದ್ದಾರೆ.

Must Read

spot_img
Share via
Copy link
Powered by Social Snap