ಅತ್ತ ಚಕ್ರತೀರ್ಥನು ಸಾರಾ ಅಬೂಬಕರ್ ಅವರ ಯುದ್ಧ ಕೃತಿಯನ್ನು ಪಠ್ಯ ಪುಸ್ತಕಗಳಿಂದ ಸಾರಾ ಸಗಟಾಗಿ ತೆಗೆದು ಎಸೆದಿದ್ದಾನೆ.ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ತಲ್ಲಣಗಳನ್ನು ಅತ್ಯಂತ ಸೂಕ್ಷ್ಮವಾಗಿ ದಾಖಲಿಸಿದ ಸಾರಾ ಅಬೂಬಕರ್ ರ ವಜ್ರಗಳು ಕಾದಂಬರಿ ಸಾರಾವಜ್ರ ಎಂಬ ಸಿನಿಮಾ ಆಗಿದೆ.
ಈ ಬಗ್ಗೆ ಸಾರಾ ಅವರನ್ನು ಕೇಳೋಣವೆಂದರೆ ಅಬೂಬಕರ್ ಗೆ ಪೂರ್ಣ ಅಲ್ಝೈಮರ್ ಸಂಪೂರ್ಣ ಮರೆವು ಅವರಿಗೆ ಯಾವ ನೆನಪೂ ಇಲ್ಲ…
ಇತ್ತ “ಹಿಜಾಬ್ ಬೇಡ ಕಿತಾಬ್ ಬೇಕು ” ಅಂತ ರಚ್ಚೆ ಹಿಡಿದ ಹೋರಾಟಗಾರರಿಗೆ ನ್ಯಾಯಸಿಕ್ಕಿದೆ.ಸಾವಿರಾರು ಹೆಣ್ಣುಮಕ್ಕಳು ಯಾರೋ ತಲೆಗೆ ತಂದಿಟ್ಟ ಹಿಜಬ್ ವಿವಾದದಿಂದ ಪರೀಕ್ಷೆಗಳನ್ನೇ ತ್ಯಜಿಸಿದರು.ಇಂತಹ ಸರಹೊತ್ತಿನಲ್ಲಿ ಮುಸ್ಲಿಂ ಮೂಲಭೂತವಾದ ಪುರುಷ ದೌರ್ಜನ್ಯಗಳ ವಿರುದ್ಧದ ಈ ಸಿನಿಮಾ ಸಾರಾ ವಜ್ರ ವನ್ನು ಹಿಜಾಬ್ ವಿರೋಧಿಗಳೆಲ್ಲ ನೋಡುತ್ತಾರಾ ?
ಒಂದು ಚಳವಳಿಯೇ ಬೇರೆ ಅದರ ಬಗ್ಗೆ ಸಿನಿಮಾ ಮಾಡೋದೇ ಬೇರೆ.ಕನ್ನಡದ ಮಾರುಕಟ್ಟೆಯಲ್ಲಿ ಎಷ್ಟೇ ಸಿನಿಮ್ಯಾಟಿಕ್ ಮಿತಿಗಳ ದಾಟಿ ಹೋರಾಟದ ಸಿನಿಮಾ ಮಾಡಿದಾಗ ಅದಕ್ಕೆ ತಕ್ಕ ಮೌಲ್ಯ ಸಿಕ್ಕಿದ್ದು ತೀರ ಕಡಿಮೆಯೇ?
ಸುಹಾನಾ ಸೈಯದ್ ಎಂಬ ಹೆಸರು ಕೇಳಿರಬಹುದು ನೀವು.ಬುರ್ಖಾ ಹಾಕಿಕೊಂಡು ಶ್ರೀನಿವಾಸನ ಹಾಡು ಹೇಳಿದಳೆಂದು ಮುಸ್ಲಿಂ ಮೂಲಭೂತವಾದಿಗಳು ಎಗರಿಬಿದ್ದಿದ್ದರು.ದುಬೈನಿಂದೆಲ್ಲಾ ಬೆದರಿಕೆ ಕರೆಗಳು ಬಂದಿದ್ದವು.ಕೊನೆಗೆ ಈ ಹುಡುಗಿ ಸುಹಾನಾ ಸೈಯದ್ ಹಾಡುಗಾರ್ತಿಯಾಗಿಯೇ ಉಳಿದಳು .ನಾನು ಈ ಸಿನಿಮಾ ನೋಡಿದಾಗ ಸುಹಾನ ಕೂಡ ನಟಿಸಿದ್ದು ವಿಶೇಷವೆನಿಸಿತು.
ಅನುಪ್ರಭಾಕರ್ ಇದಕ್ಕೆ ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಬರುತ್ತದೆಂದೇ ಭಾವಿಸಿದ್ದರು.ಕೇಳಿ ಬರುತ್ತಿರುವ ಮಾಹಿತಿಯಂತೆ ಅನು ಸಧ್ಯದಲ್ಲೇ ಬಿಜೆಪಿ ಸೇರುತ್ತಾರೆ.ಅದಕ್ಕೇ ಬಿಜೆಪಿಗರಿಗೆ ಹಿಂದೂತ್ವವಿದಿಗಳಿಗೆ ಇಷ್ಟವಾಗುವಂತಹ ಸಿನಿಮಾ ಮಾಡಿದ್ದಾರೆ.
ಅನು ಪ್ರಭಾಕರ್ ಕಲಾವಿದೆಯಾಗಿ ತುಂಬಾ ಸಹಜ ನಟಿ.
ಇದರ ನಿರ್ದೇಶಕಿ ಆರ್ನಾ ಸಾಧ್ಯ .( ಈ ಹೆಸರಿನ ಅರ್ಥ ಈವರೆಗೂ ಗೊತ್ತಾಗಿಲ್ಲ) ಅದೇಕೆ ಸಾರಾ ಕಾದಂಬರಿ ತೆಗೆದುಕೊಂಡರೋ ಅವರಿಗೂ ಹಿಜಬ್ ಶಿಕ್ಷಣ ಮೂಲಭೂತವಾದಿಗಳ ವಿರೋಧೀ ಮನೋಭಾವನೆ ಘಾಢವಾಗಿ ಇದ್ದಂತಿದೆ.
ಅಂದಹಾಗೆ ಹೋರಾಟ ಮಾಡುವುದು ರಾಜಕೀಯ ಮಾಡೋಕೆ ಅದರದೇ ಕಲಾಕೃತಿ ಸಿನಿಮಾ ಆದರೆ ನಮಗೇನೂ ಸಂಬಂಧ ಇಲ್ಲ ಎನ್ನುವ ಸಮಾಜ.
ಅಂದಹಾಗೆ ಮತ್ತೊಬ್ಬ ನಟಿಯನ್ನ ಮುಂದೆ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ನೋಡುವ ಭಾಗ್ಯವಂತೂ ಸಿಗಲಿದೆ.