HomeNewsಅಪ್ಪ-ಮಗನ ಬಾಂಧವ್ಯಧ ಸನ್ನಿವೇಶಗಳನ್ನೊಳಗೊಂಡ ಕೌಟುಂಬಿಕ ಕಥಾಹಂದರ ಹೊಂದಿರುವ "SO ಮುತ್ತಣ್ಣ" ಚಿತ್ರಕ್ಕೆ ಶಾಲಿನಿ ಆರ್ಟ್ಸ್ ಮೆಚ್ಚುಗೆ

ಅಪ್ಪ-ಮಗನ ಬಾಂಧವ್ಯಧ ಸನ್ನಿವೇಶಗಳನ್ನೊಳಗೊಂಡ ಕೌಟುಂಬಿಕ ಕಥಾಹಂದರ ಹೊಂದಿರುವ “S\O ಮುತ್ತಣ್ಣ” ಚಿತ್ರಕ್ಕೆ ಶಾಲಿನಿ ಆರ್ಟ್ಸ್ ಮೆಚ್ಚುಗೆ

ಪ್ರತಿಷ್ಠಿತ ಸಂಸ್ಥೆಯಿಂದ ವಿಶಾಲ ಕರ್ನಾಟಕಕ್ಕೆ ಈ ಚಿತ್ರದ ಹಂಚಿಕೆ .

ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ “S\O ಮುತ್ತಣ್ಣ” ಚಿತ್ರ ಪ್ರಾರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚಿಗೆ ಈ ಚಿತ್ರದ ಆಡಿಯೋ ರೈಟ್ಸ್‌ ಕೂಡ A2 music ಸಂಸ್ಥೆಗೆ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಈ ರೀತಿ ಸಿನಿಮಾದ ಹಲವು ವಿಶೇಷಗಳನ್ನು ಪರಿಗಣಿಸಿದ ಜಾಕ್ ಮಂಜು ಅವರ ನೇತೃತ್ವದ ಶಾಲಿನಿ‌ ಆರ್ಟ್ಸ್, ನಿರ್ಮಾಪಕರಿಗೆ ಹಾಗೂ ನಿರ್ದೇಶಕ ಶ್ರೀಕಾಂತ್ ಹುಣಸೂರು ಅವರಿಗೆ ಕರೆ ಮಾಡಿ ಈ ಚಿತ್ರವನ್ನು ನೋಡಬೇಕೆಂದು ಕೇಳಿದಾಗ ನಿರ್ಮಾಪಕರು ಹಾಗೂ ನಿರ್ದೇಶಕರು ಪ್ರೀತಿಯಿಂದ ಸಿನಿಮಾ ತೋರಿಸಿದ್ದಾರೆ. “ನಮಗೆ S/O ಮುತ್ತಣ್ಣ ಚಿತ್ರ ನೋಡಿ ಖುಷಿಯಾಗಿದೆ. ಪ್ರಣಂ ದೇವರಾಜ್ ಹಾಗೂ ದಿಯಾ ಖುಷಿ ಅಭಿನಯ ಚೆನ್ನಾಗಿದೆ. ರಂಗಾಯಣ ರಘು ಹಾಗೂ ಪ್ರಣಂ ದೇವರಾಜ್ ಅವರ ತಂದೆ – ಮಗನ ಬಾಂಧವ್ಯದ ಸನ್ನಿವೇಶಗಳು ಮನಸ್ಸಿಗೆ ಹತ್ತಿರವಾಗಿದೆ. ಹಾಡುಗಳಂತೂ ಒಂದಕ್ಕಿಂತ ಒಂದು ಅದ್ಭುತವಾಗಿದೆ. ಅದರಲ್ಲೂ ಈ ಸಿನಿಮಾದ ಕ್ಲೈಮ್ಯಾಕ್ಸ್ ಬಹಳ ಇಷ್ಟವಾಯಿತು. ಹಾಗಾಗಿ ನಮ್ಮ ಸಂಸ್ಥೆಯ ಮೂಲಕ ‌ಕರ್ನಾಟಕ ಜನರಿಗೆ ಹೆಮ್ಮೆಯಿಂದ ಸಮರ್ಪಿಸಬೇಕೆಂದು ತೀರ್ಮಾನಿಸಿ, ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿರುವ ಶಾಲಿನಿ ಆರ್ಟ್ಸ್ ಸಂಸ್ಥೆ, ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಹಾಗೂ ಆಶೀರ್ವಾದ ಸದಾ ಇರಲಿ ಎಂದು ವಿನಂತಿ ಮಾಡಿದೆ.

ಪುರಾತನ ಫಿಲಂಸ್ ನಿರ್ಮಾಣ ಮಾಡಿರುವ ಸಿನಿಮಾಗೆ ಎಸ್ ಅರ್ ಕೆ ಫಿಲಂಸ್ ಜಂಟಿಯಾಗಿದೆ ಈ ಚಿತ್ರವನ್ನು ಶ್ರೀಕಾಂತ್ ಹುಣಸೂರು ನಿರ್ದೇಶಿಸಿದ್ದಾರೆ.

ಹಾಗೂ ಈ ಸಿನಿಮಾದಲ್ಲಿ ಪ್ರಣಾಂ ದೇವರಾಜ್ ಅವರಿಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನ ಬಹು ನಿರೀಕ್ಷಿತ ಈ ಚಿತ್ರಕ್ಕಿದೆ.

Must Read

spot_img
Share via
Copy link
Powered by Social Snap