Kannada Beatz
News

ರಾಗಿಣಿ ಬಿಡುಗಡೆ ಮಾಡಿದರು “ರಂಗಿನ ರಾಟೆ”ಯ ಟ್ರೇಲರ್

ಕಮಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕವಿತಾ ಅರುಣ್ ಕುಮಾರ್ ನಿರ್ಮಿಸಿರುವ ” ರಂಗಿನ ರಾಟೆ ” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.

ಖ್ಯಾತ ನಟಿ ರಾಗಿಣಿ ದ್ವಿವೇದಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಮಾಜಿ ಸಂಸದ ಶಿವರಾಮೇಗೌಡ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನಾನು ಚಿತ್ರದ ಕೆಲವು ಸನ್ನಿವೇಶಗಳನ್ನು ನೋಡಿದ್ದೀನಿ. ತುಂಬಾ ಚೆನ್ನಾಗಿದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ರಾಗಿಣಿ ಹಾರೈಸಿದರು.

ಚಿತ್ರದ ಪ್ರಮುಖ ಪಾತ್ರಧಾರಿ ರಾಜೀವ್ ರಾಥೋಡ್ ನನ್ನ ಅಳಿಯಂದಿರು. ಅವರ ಜೊತೆಗೆ ಮಂಡ್ಯದ ಇಬ್ಬರು, ಮೂವರು ಹುಡುಗರು ಇದರಲ್ಲಿರುವುದು ತಿಳಿದು ಖುಷಿಯಾಯಿತು. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಚೆನ್ನಾಗಿದೆ. ಚಿತ್ರ ಕೂಡ ನಿರೀಕ್ಷೆಗೂ ಮೀರಿ ಜಯಭೇರಿ ಬಾರಿಸಲಿ ಎಂದರು ಮಾಜಿ ಸಂಸದರಾದ ಶಿವರಾಮೇಗೌಡ.

ಏಳು ಪ್ರಮುಖಪಾತ್ರಗಳ ಸುತ್ತ ನಡೆಯುವ ಕಥೆಯಿದು. ಕೆಟ್ಟದ್ದನ್ನು ಮಾಡಿದವರು ಇಲ್ಲೇ ಅನುಭವಿಸುತ್ತಾರೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಇಂದು ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ ಪ್ರೋತ್ಸಾಹಿಸಿ ಎಂದು ನಿರ್ದೇಶಕ ಆರ್ಮುಗಂ ತಿಳಿಸಿದರು.

ಇದೊಂದು ಕಾಡಿನಲ್ಲಿ ನಡೆಯುವ ಕಥೆ. ನನ್ನ ಜೊತೆಗಿರುವವರು ಅನಿವಾರ್ಯ ಕಾರಣದಿಂದ ಕಷ್ಟಕ್ಕೆ ಸಿಲುಕಿ ಕೊಳ್ಳುತ್ತಾರೆ. ಅವರನೆಲ್ಲಾ ಕಷ್ಟದಿಂದ ಪಾರು ಮಾಡುವ ಪಾತ್ರ ನನ್ನದು ಎಂದು ತಮ್ಮ ಪಾತ್ರದ ಬಗ್ಗೆ ರಾಜೀವ್ ರಾಥೋಡ್ ವಿವರಿಸಿದರು.

ನಿರ್ದೇಶಕ ಮುರಳಿ ಮೋಹನ್ ಸಹ ತಮಗೆ ಈ ಚಿತ್ರದಲ್ಲಿ ಉತ್ತಮ ಪಾತ್ರ ಸಿಕ್ಕಿರುವುದಾಗಿ ಹೇಳಿಕೊಂಡರು. ನಿರ್ಮಾಪಕಿ ಕವಿತಾ ಅರುಣ್ ಕುಮಾರ್, ಸಹನಾಯಕಿ ಸ್ವಪ್ನ ಶೆಟ್ಟಿಗಾರ್, ಸಂತೋಷ್ ಮಳವಳ್ಳಿ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಚಿತ್ರದ ಕುರಿತು ಮಾತನಾಡಿದರು. ಆಗಮಿಸಿದ್ದ ಅನೇಕ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು.

ಆರ್ಮುಗಂ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣ ಹಾಗೂ ಚಂದ್ರು ಓಬ್ಬಯ್ಯ ಅವರ ಸಂಗೀತ ನಿರ್ದೇಶನವಿದೆ.

ರಾಜೀವ್ ರಾಥೋಡ್, ಮುರಳಿ ಮೋಹನ್ (ಸಂತ), ದುನಿಯಾ ರಶ್ಮಿ, ಸಂತೋಷ್ ಮಳವಳ್ಳಿ, ಭವ್ಯ, ರಾಂಕಲ್ ಚಂದ್ರು, ಸ್ವಪ್ನ ಶೆಟ್ಟಿಗಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Related posts

ಕುತೂಹಲ ಮೂಡಿಸಿದೆ “ಮಾಂಕ್ ದಿ ಯಂಗ್” ಚಿತ್ರದ ಟ್ರೇಲರ್ .

Kannada Beatz

ನೋಡುಗರ ಗಮನ ಸೆಳೆಯುತ್ತಿದೆ “ಡೇವಿಡ್” ಚಿತ್ರದ ಹಾಡು ಹಾಗೂ ಟ್ರೇಲರ್.

Kannada Beatz

“ಕಲಾಕಾರ್”ನ ಸಿನಿಪಯಣಕ್ಕೆ ಬೆಳ್ಳಿಹಬ್ಬದ ಸಂಭ್ರಮ.

Kannada Beatz

Leave a Comment

Share via
Copy link
Powered by Social Snap