HomeNewsಭರವಸೆಯ ಬದುಕು ವಿಡಿಯೋ ಸಾಂಗ್ ರಿಲೀಸ್..!

ಭರವಸೆಯ ಬದುಕು ವಿಡಿಯೋ ಸಾಂಗ್ ರಿಲೀಸ್..!

ಬೆಂಗಳೂರು: ‘ಸಾಕು ಇನ್ನು ಸಾಕು ಬರಿ ದೋಷಣೆಯ ನಿಲ್ಲಿಸಿರಿ ಸಾಕು’ ಗೀತೆಯ ಮುಖೇನ ಜನಸಾಮಾನ್ಯರಲ್ಲಿ ಭರವಸೆಯನ್ನು ಮೂಡಿಸಲು ಹಾಗೂ ಸಕಾರಾತ್ಮಕ ಮನದಾಳವನ್ನು ಹೊರಹೊಮ್ಮಿಸಲು ಹೊರಟಿದೆ – ಆಲಾಪ್ ಕ್ರಿಯೇಷನ್ಸ್. ವಿಶೇಷ ಅಂದ್ರೆ ಫಾರ್ ರಿಜಿಸ್ಟ್ರೇಷನ್ ನಿರ್ದೇಶಕರಾದ ನವೀನ್ ದ್ವಾರಕನಾಥ್ ಆಲಾಪ್ ಕ್ರಿಯೇಷನ್ಸ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ‘ಭರವಸೆಯ ಬದುಕು’ ಎಂಬ ಶಿರ್ಷೆಕೆಯ ಈ ಗೀತೆಯನ್ನು ಹೊರತಂದಿದ್ದಾರೆ. ಇವರು ನಿರ್ದೇಶನ ಮಾಡಿರೋ ಈ ಹಾಡಿಗೆ ಚಂದನವನ ಹಾಗೂ ರಂಗಭೂಮಿ ಕಲಾವಿದರು, ಸಾಥ್ ನೀಡಿದ್ದಾರೆ.


ಈಗಾಗಲೇ ಅದೆಷ್ಟೋ ಮನಸ್ಸುಗಳು ನಕಾರಾತ್ಮಕ ಆಲೋಚನೆಯಲ್ಲಿ ಭರವಸೆಯನ್ನು ಕಳೆದುಕೊಂಡಿದ್ದು, ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ. ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವು ಹದೆಗೆಟ್ಟಿರುವುದರಿಂದ ಜನರಲ್ಲಿನ ಆತ್ಮ ವಿಶ್ವಾಸ ಕುಂದುತ್ತಿದೆ. ಈ ನಿಟ್ಟಿನಲ್ಲಿ ಶ್ರೀ ಸಾಮಾನ್ಯರಲ್ಲಿ ಪಾಸಿಟಿವ್ ಆಲೋಚನೆ ಬೆಳೆಸಲು, ಆತ್ಮ ವಿಶ್ವಾಸ ತುಂಬಲು ಹಾಗೂ ಭರವಸೆ ಮೂಡಿಸಲೆಂದೇ ಈ ಗೀತೆಯನ್ನು ನಿರ್ದೇಶಿಸಲು ಮುಂದಾದೆ ಎನ್ನುತ್ತಾರೆ ನಿರ್ದೇಶಕರಾದ ನವೀನ್ ದ್ವಾರಕನಾಥ್.
ಇದೇ 9 ನೇ ತಾರಿಕು ಬುಧವಾರ ಸಂಜೆ 5 ಗಂಟೆಗೆ ಆನಂದ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದ್ದು, ಈ ಹಾಡಿನಲ್ಲಿ ಅನಿರುದ್ಧ ಜಟ್ಕರ್, ಚಂದನ್ ಶರ್ಮಾ, ಪ್ರಥ್ವಿ ಅಂಬಾರ್ , ಸಿಂಪಲ್ ಸುನಿ, ವಸಿಷ್ಠ ಸಿಂಹ, ಸೋನು ಗೌಡ, ನಾಗೇಂದ್ರ ಪ್ರಸಾದ್, ಪಿ.ಡಿ.ಸತೀಶ್ ಚಂದ್ರ, ಕೃಷಿ ತಾಪಂಡಾ, ಹರ್ಷಿಕಾ ಪೂಣಚ್ಛ, ರಂಜಿನಿ ರಾಘವನ್, ರಘು ರಾಮನಕೊಪ್ಪ, ರೆಮೋ, ಜೈ ರಾಮ್ ಕಾರ್ತಿಕ್, ಕಿಶನ್ ಬೆಳಗಲಿ, ನವೀನ್ ಶಂಕರ್, ಮಯೂರ ರಾಘವೇಂದ್ರ, ಆರ್.ಜೆ. ಸೌಜನ್ಯ, ವರ್ಷಿಣಿ ಜಾನಕೀರಾಮ್,ಆರ್ ಅಭಿಲಾಷ್, ಯಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಇನ್ನು ಗಾಯಕರಾದ ರಘು ದೀಕ್ಷಿತ್ ಹಾಗೂ ವಾರಿಜಶ್ರೀ ವೇಣುಗೋಪಾಲ್ ಹಿನ್ನಲೆ ಗಾಯಕರಾಗಿದ್ದು, ತಮ್ಮ ಬಹುಮುಖ ಪ್ರತಿಭೆಯನ್ನು ಬಳಸಿಕೊಂಡು ಸಂಗೀತ ನಿರ್ದೇಶಕ ಹರೀಶ್ ಆರ್ .ಕೆ ಹಾಗೂ ಸಿದ್ಧಾರ್ಥ್ ಹಾಡಿನ ಸಂಯೋಜನೆ ಮಾಡಿ, ಹರೀಶ್.ಆರ್.ಕೆ ಈ ಹಾಡಿಗೆ ಸಾಹಿತ್ಯವನ್ನು ನೀಡಿದ್ದಾರೆ. ಹಾಗೆ ಮನು ಸೆಡ್‌ಗಾರ್ ವಿಡಿಯೋ ಸಂಕಲನ ಮಾಡಿದ್ದಾರೆ.

Artists in this song:
Vasista Simha
Pruthvi Ambaar
Nagendra Prasad -Chennai
Chandan Sharma
PD Satish Chandra
Krishi tapanda
Harshika Ponnacha
JK
Anirudd
Sonu Gowda
Ranjini Raghavan
Raaghu Ramanakoppa
Remo
RJ Sowjanya
Kishen-Big Boss
Triveni rao
[08/06, 10:08 am] For Reg Naveen Dwarik Di: Concept and Direction : Naveen Dwarakanath
Lyrics Harisha RK
Music : Harisha RK & Siddhart Kamath

Singers raghu dixit and varijashree venugopal

Must Read

spot_img
Share via
Copy link
Powered by Social Snap