Kannada Beatz
News

ಪ್ರೇಮ್ ಕಂಠಸಿರಿಯಲ್ಲಿ “ಪರಿಮಳ ಡಿಸೋಜಾ” ಚಿತ್ರದ ಹಾಡು. ಕೆ ಕಲ್ಯಾಣ್ ಲಿರಿಕ್ಸ್ 👌

ನಿರ್ದೇಶನದಿಂದ ಜನಮನಸೂರೆಗೊಂಡಿರುವ ಪ್ರೇಮ್ (ಜೋಗಿ) ಅವರು ಗಾಯಕನಾಗೂ ಜನಪ್ರಿಯ.
ವಿಲೇಜ್ ರೋಡ್ ಫಿಲಂಸ್ ಲಾಂಛನದಲ್ಲಿ ವಿನೋದ್ ಶೇಷಾದ್ರಿ ನಿರ್ಮಿಸುತ್ತಿರುವ “ಪರಿಮಳ ಡಿಸೋಜಾ” ಚಿತ್ರದ ಹಾಡೊಂದನ್ನು ನಿರ್ದೇಶಕ ಪ್ರೇಮ್ ಹಾಡಿದ್ದಾರೆ. ಕೆ.ಕಲ್ಯಾಣ್ ಗೀತರಚನೆ ಮಾಡಿದ್ದಾರೆ. ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ.

ಡಾ||ಗಿರಿಧರ್ ಹೆಚ್ ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಪ್ರೇಮ್ ಅವರು ಹಾಡಿರುವ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯದಲ್ಲೇ ಆ ಹಾಡಿನ ಚಿತ್ರೀಕರಣ ನಡೆಯಲಿದೆ.

ಹಿಂದು ಸಂಪ್ರದಾಯದ ಶ್ರೀಮಂತ ಕುಟುಂಬವೊಂದು ಸುಖ ಸಂತೋಷದಿಂದ ಜೀವನ ನಡೆಸುತ್ತಿರುತ್ತಾರೆ. ಆ ಮನೆಗೆ ಕ್ರಿಶ್ಚಿಯನ್ ಸಂಪ್ರದಾಯದ ಪರಿಮಳ ಡಿಸೋಜಾ ಸೊಸೆಯಾಗಿ ಬರುತ್ತಾಳೆ. ಜೊತೆಗೆ ‌ಮತ್ತಷ್ಟು ಸಂತೋಷ, ಆನಂದವನ್ನು ಹೊತ್ತು ತರುತ್ತಾಳೆ. ಎರಡುವರ್ಷಗಳ ನಂತರ ಆ ಮನೆಯಲ್ಲಿ ಯಾರು ಊಹಿಸದ ಘಟನೆ ನಡೆಯುತ್ತದೆ. ಆ ಘಟನೆಯಿಂದ ಮನೆಮಂದಿಯಲ್ಲಾ ಸಂಕಷ್ಟಕ್ಕೆ ಸಿಲುಕುತ್ತಾರೆ. ಮುಂದೇನು ನಡೆಯುತ್ತದೆ ಎಂಬುದೇ ಕುತೂಹಲ ಎನ್ನುವ ನಿರ್ದೇಶಕ ಗಿರಿಧರ್, ಇದೊಂದು ಸಸ್ಪೆನ್ಸ್ ಥ್ರಿಲ್ಲರ್, ಆಕ್ಷನ್ , ಸೆಂಟಿಮೆಂಟ್ ಹಾಗೂ ಕಾಮಿಡಿ ಎಲ್ಲವನ್ನು ಒಳಗೊಂಡಿರುವ ಚಿತ್ರ ಎಂದು ತಿಳಿಸುತ್ತಾರೆ.

ಕೋಮಲ ಬನವಾಸೆ , ವಿನೋದ್ ಶೇಷಾದ್ರಿ, ಶ್ರೀನಿವಾಸಪ್ರಭು, ಭವ್ಯ, ಪೂಜಾ ರಾಮಚಂದ್ರ, ಶಿವಕುಮಾರ್ ಆರಾಧ್ಯ, ಶಂಖನಾದ ಅಂಜನಪ್ಪ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌.

ನಾಲ್ಕು ಹಾಡುಗಳಿದ್ದು, ವಿ.ನಾಗೇಂದ್ರಪ್ರಸಾದ್, ಜಯಂತ್ ಕಾಯ್ಕಿಣಿ , ಕೆ.ಕಲ್ಯಾಣ್ ಹಾಗೂ ವಿನೋದ್ ಶೇಷಾದ್ರಿ ಬರೆದಿದ್ದಾರೆ. ಜೋಗಿ ಪ್ರೇಮ್, ರಾಜೇಶ್ ಕೃಷ್ಣನ್, ಅನುರಾಧ ಭಟ್, ನಕುಲ್ ಅಭ್ಯಂಕರ್, ಸುಪ್ರಿಯಾ ರಾಮ್, ಶೃತಿ ವಿ.ಎಸ್ ಹಾಡಿದ್ದಾರೆ. ಕೆ.ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಂಜೀವ್ ರೆಡ್ಡಿ ಅವರ ಸಂಕಲನವಿದೆ.

Related posts

ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಲಾರ್ಡ್ ಚಿತ್ರದ ಆಡಿಯೋ ಹಕ್ಕನ್ನು ಆನಂದ ಆಡಿಯೋ ದಾಖಲೆ ಬೆಲೆಗೆ ಖರೀದಿ

Kannada Beatz

ಚಿತ್ರರಂಗಕ್ಕೆ ಲವ್ ಲಿ ಸ್ಟಾರ್ ಪ್ರೇಮ್ ಪುತ್ರಿ ಎಂಟ್ರಿ- ‘ಟಗರು ಪಲ್ಯ’ಕ್ಕೆ ಬಟ್ಟಲು ಕಣ್ಣಿನ ಹುಡುಗಿ ಅಮೃತ ಪ್ರೇಮ್ ನಾಯಕಿ

Kannada Beatz

‘ಕರಾವಳಿ’ ಸೇರಿದ ಪ್ರಜ್ವಲ್ ದೇವರಾಜ್: ರೋಚಕವಾಗಿದೆ 40ನೇ ಸಿನಿಮಾದ ಟೀಸರ್

Kannada Beatz

Leave a Comment

Share via
Copy link
Powered by Social Snap