ಕನ್ನಡ ಬೀಟ್ಸ್ ವಿಮರ್ಶೆ ಮತ್ತು ರೇಟಿಂಗ್
ಸಿನೆಮಾ: ಆ ದೃಶ್ಯ
ತಾರಾಗಣ: ಡಾ.ವಿ. ರವಿಚಂದ್ರನ್,ರಮೇಶ್ ಭಟ್, ಅಚ್ಚುತ್ ಕುಮಾರ್,ಯಶವಂತ್ ಶೆಟ್ಟಿ,ಅರ್ಜುನ್ ಗೌಡ, ಅಜಿತ್ ಜಯರಾಜ್ ನಿಸರ್ಗ ಗಿರೀಶ್ ಮತ್ತು ಇನ್ನಿತರು
ರೇಟಿಂಗ್: 4/5
ನಿರ್ದೇಶನ: ಶಿವ ಗಣೇಶ್
ನಿರ್ಮಾಪಕರು: ಕೆ.ಮಂಜು
ಬ್ಯಾನರ್: ಕೆ.ಮಂಜು ಸಿನಿಮಾಸ್
ಸಂಗೀತ: ಗೌತಮ್ ಶ್ರೀವತ್ಸ
ದಶಮುಖ ಮತ್ತು ದೃಶ್ಯ ಚಿತ್ರದ ನಂತರ ತುಂಬಾ ದಿನಗಳ ನಂತರ ಮತ್ತೆ ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ರವಿಚಂದ್ರನ್ ಅವರು, ಆ ದೃಶ್ಯ ಚಿತ್ರದಲ್ಲಿ ಯೂತ್ ಫುಲ್ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ.
ಎಲ್ಲರಿಗೂ ಗೊತ್ತಿರುವ ಹಾಗೆ ಚಿತ್ರ ತಮಿಳಿನ ಧುರುವಂಗಲ್ 16 ಚಿತ್ರದ ರಿಮೇಕ್. ಆದರೂ ನಿರ್ದೇಶಕ ಶಿವ ಗಣೇಶ್ ಪಕ್ಕ ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರಕಥೆಯನ್ನು ಹೆಣೆದಿದ್ದಾರೆ.
ಪೂರ್ತಿ ಚಿತ್ರವು ಒಬ್ಬ ಸೈಕೋ ಕಿಲ್ಲರ್ ಮತ್ತು ಆತ ಮಾಡಿದ ಕೊಲೆಗಳನ್ನು ಬೇಧಿಸುವ ಒಂದು ಪಕ್ಕ ಮರ್ಡರ್ ಮಿಸ್ಟರಿ ಚಿತ್ರ ‘ಆ ದೃಶ್ಯ’.
ರಿಟೈರ್ಡ್ ಅಧಿಕಾರಿ ಸೂರ್ಯ ತೇಜ್( ಡಾ.ರವಿಚಂದ್ರನ್) ತಮ್ಮ ವೃತ್ತಿಜೀವನದಲ್ಲಿ ಕಂಡ ವಿಚಿತ್ರವಾದ ಕೇಸ್ ಬಗ್ಗೆ ಮತ್ತೋರ್ವ ವ್ಯಕ್ತಿಗೆ ತಿಳಿಸುತ್ತಾರೆ.
ಕಾಲು ಕಳೆದುಕೊಂಡ ಸೂರ್ಯ ಮತ್ತು ಅರ್ಧಕ್ಕೆ ಕೇಸ್ ನಿಲ್ಲಿಸಿದ ಆ ಎರಡು ಮರ್ಡರ್ ಕುತೂಹಲಕರವೆನಿಸಿ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುತ್ತಾರೆ.
ಚಿತ್ರದಲ್ಲಿ ರವಿಚಂದ್ರನ್ ಅವರು ಎರಡು ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅಧಿಕಾರದಲ್ಲಿದ್ದಾಗ ಎಂಗ್ ಅಂಡ್ ಎನರ್ಜಿಟಿಕ್ ಕಾಪ್ ಆಗಿ ಮತ್ತು ಲೆಟರ್ ಲೈಫ್ನಲ್ಲಿ ವಾಕಿಂಗ್ ಸ್ಟಿಕ್ ಹಿಡಿದು ಒಂದು ಪ್ರಭುದ್ಧ ನಟನಾಗಿ ತೋರುತ್ತಾರೆ.
ಇನ್ನು ಆ ಸೈಕೋ ಕಿಲ್ಲರ್ ಮತ್ತು ಕೇಸನ್ನು ಬಗೆಹರಿಸುವ ರೀತಿ ಚಿತ್ರದಲ್ಲಿ ನೋಡಿ ಸವಿಯಬೇಕು.
ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ನಿಸರ್ಗ ಗೌಡ ಅವರ ಮುಗ್ಧ ನಟನೆ ಚಿತ್ರ ಮುಗಿದ ಮೇಲೆ ನೆನಪಿನಲ್ಲಿ ಉಳಿಯುತ್ತದೆ.
ವಿಲನ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಯಶ್ವಂತ್ ಶೆಟ್ಟಿ ಮತ್ತು ಅರ್ಜುನ್ ಗೌಡ ಅದ್ಭುತವಾಗಿ ನಟಿಸಿದ್ದಾರೆ.
ಉಳಿದಂತೆ ಸಹಕಲಾವಿದರಾಗಿ ರಮೇಶ್ ಭಟ್,ಅಚ್ಚುತ್ ಕುಮಾರ್, ಅಜಿತ್ ಜೈರಾಜ್,ಗಿರೀಶ್, ಚೈತ್ರ ಆಚಾರ್ ಮತ್ತಿತರು ಚಿತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಕೆ ಮಂಜು ನಿರ್ಮಿಸಿರುವ ಈ ಚಿತ್ರ ಥ್ರಿಲ್ಲರ್ ಇಷ್ಟಪಡುವ ಪ್ರೇಕ್ಷಕರಿಗೆ ಪಕ್ಕ ಪೈಸಾ ವಸೂಲ್.
ಗೌತಮ್ ಶ್ರೀವತ್ಸ ಅವರ ಹಿನ್ನೆಲೆ ಸಂಗೀತ ಥ್ರಿಲ್ಲರ್ ಚಿತ್ರಕ್ಕೆ ಪೂರಕವಾಗಿದೆ.