HomeNewsನಟಿ ವಿಜಯಲಕ್ಷ್ಮಿಗೆ ಆಸ್ಪತ್ರೆಯಲ್ಲೇ ಕಿರುಕುಳ..! ಈ ಸುದ್ದಿ ನೋಡಿ

ನಟಿ ವಿಜಯಲಕ್ಷ್ಮಿಗೆ ಆಸ್ಪತ್ರೆಯಲ್ಲೇ ಕಿರುಕುಳ..! ಈ ಸುದ್ದಿ ನೋಡಿ

ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ನಟಿ ವಿಜಯಲಕ್ಷ್ಮಿ ಅವರು ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟಿ ವಿಜಯಲಕ್ಷ್ಮಿ ಅವರು ನಾಗಮಂಡಲ ಚಿತ್ರದಿಂದ ಪ್ರಖ್ಯಾತಿಯನ್ನು ಪಡೆದರು. ನಾಗಮಂಡಲ ಚಿತ್ರದಲ್ಲಿನ ತಮ್ಮ ಅಮೋಘ ಅಭಿನಯಕ್ಕೆ ಮನಸೋತ ನಿರ್ದೇಶಕ ಮತ್ತು ನಿರ್ಮಾಪಕರು ವಿಜಯಲಕ್ಷ್ಮಿ ಅವರಿಗೆ ತಮ್ಮ ಚಿತ್ರದಲ್ಲಿ ನಟಿಸುವಂತೆ ಹಲವಾರು ಆಫರ್ಗಳನ್ನು ನೀಡಿದರು.

ಹೀಗೆ ನಾಗಮಂಡಲ ಚಿತ್ರ ಸಕ್ಸಸ್ ಕಂಡ ನಂತರ ವಿಜಯಲಕ್ಷ್ಮಿ ಅವರಿಗೆ ಹಲವಾರು ಸಿನಿಮಾಗಳ ಆಫರ್ ಬಂದವು ಆದರೆ ಕಾಲಕ್ರಮೇಣ ಆಫರ್ಗಳು ಕಡಿಮೆಯಾಗುತ್ತಾ ಹೋದವು ಕೊನೆಗೊಂದು ದಿನ ಚಿತ್ರದಲ್ಲಿ ನಟಿಸುವ ಅವಕಾಶವಿಲ್ಲದೆ ವಿಜಯಲಕ್ಷ್ಮಿ ಅವರು ಖಾಲಿ ಕೈಯಲ್ಲಿ ಕೂರಬೇಕಾದ ಪರಿಸ್ಥಿತಿಯು ಕೂಡ ಬಂತು. ಇದರ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ಕಿರುತೆರೆಯಲ್ಲಿ ಅಭಿನಯಿಸಲು ಶುರು ಮಾಡಿದರೂ ಮೊದಮೊದಲು ಅಲ್ಲಿ ಎಲ್ಲ ಚೆನ್ನಾಗಿತ್ತು ಆದರೆ ದಿನ ಉರುಳಿದಂತೆ ಅಲ್ಲಿಯೂ ಸಹ ಅವಕಾಶಗಳು ಕುಗ್ಗಿ ಹೋದವು.

ಹೀಗೆ ಸಿನಿಮಾ ಮತ್ತು ಧಾರಾವಾಹಿ ಎರಡರಲ್ಲಿಯೂ ಸಹ ಅವಕಾಶವಿಲ್ಲದ ವಿಜಯಲಕ್ಷ್ಮಿ ಅವರಿಗೆ ಅನಾರೋಗ್ಯ ಸಮಸ್ಯೆಯೂ ಸಹ ಎದುರಾಗಿ ಇದೀಗ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇನ್ನು ವಿಜಯಲಕ್ಷ್ಮಿ ಅವರ ಬಳಿ ಸಾಕಷ್ಟು ಹಣ ಇಲ್ಲದ ಕಾರಣ ಚಿಕಿತ್ಸೆಗೆ ಯಾರಾದರೂ ಸಹ ಹಣ ಸಹಾಯ ಮಾಡಬೇಕಾಗಿ ಸಹಾಯ ಹಸ್ತವನ್ನು ಬೇಡಿದ್ದರು. ಆದರೆ ಇದೀಗ ವಿಜಯಲಕ್ಷ್ಮಿ ಅವರಿಗೆ ಮತ್ತೊಂದು ತಲೆನೋವು ಎದುರಾಗಿದ್ದು ಆಸ್ಪತ್ರೆಯಲ್ಲಿಯೇ ಅವಮಾನವೊಂದು ಆಗಿದೆ.

ಹೌದು ಅದೇನೆಂದರೆ ವಿಜಯಲಕ್ಷ್ಮಿ ಅವರಿಗೆ ನೀವು ಇಲ್ಲಸಲ್ಲದ ನ್ಯೂಸೆನ್ಸ್ ಕ್ರಿಯೇಟ್ ಮಾಡುತ್ತಿದ್ದೀರಾ ಎಂದು ಆಸ್ಪತ್ರೆಯ ವೈದ್ಯರು ತಾಕೀತು ಮಾಡಿದ್ದು ಕೂಡಲೇ ಇಲ್ಲಿಂದ ಹೊರ ಹೋಗಬೇಕೆಂದು ವಿಜಯಲಕ್ಷ್ಮಿ ಅವರಲ್ಲಿ ವೈದ್ಯರು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ನ್ಯೂಸೆನ್ಸ್ ಕ್ರಿಯೇಟ್ ಮಾಡುತ್ತಿದ್ದೀರಾ ಎಂಬ ಕಾರಣ ನೀಡಿ ವೈದ್ಯರು ವಿಜಯಲಕ್ಷ್ಮಿ ಅವರಿಗೆ ಆಸ್ಪತ್ರೆಯನ್ನು ಬಿಟ್ಟು ಹೋಗುವಂತೆ ಹೇಳಿದ್ದಾರೆ. ಮೊದಲೇ ನೋವಿನಲ್ಲಿದ್ದ ವಿಜಯಲಕ್ಷ್ಮಿ ಅವರಿಗೆ ಇದೀಗ ಮತ್ತೊಂದು ನೋವು ಉಂಟಾಗಿತ್ತು ಅವರು ಇನ್ನಷ್ಟು ಚಿಂತೆಗೆ ಈಡಾಗಿದ್ದಾರೆ.

Must Read

spot_img
Share via
Copy link
Powered by Social Snap