Kannada Beatz
News

ದರ್ಶನ್ & ಯಶ್ ಪುನೀತ್ ಗಿಂತ ದೊಡ್ಡ ನಟರಲ್ಲ..! ಹೀಗೆ ಹೇಳಿದ್ದು ಯಾರು ಗೊತ್ತಾ? ಈ ಸುದ್ದಿ ಓದಿ

ಮಂಡ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಗೆಲ್ಲುವುದಕ್ಕಾಗಿ ನಾನಾ ರೀತಿಯ ತಂತ್ರಗಳನ್ನು ಮಾಡುತ್ತಿದ್ದಾರೆ. ಸುಮಲತಾ ಅಂಬರೀಶ್ ಅವರು ಕನ್ನಡದ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರಿಂದ ಮಂಡ್ಯ ಜಿಲ್ಲೆಯಲ್ಲಿ ಪ್ರಚಾರವನ್ನು ಮಾಡಿಸುತ್ತಿದ್ದಾರೆ. ದರ್ಶನ್ ಮತ್ತು ಯಶ್ ಇಬ್ಬರೂ ಸಹ ಸ್ವ ಇಚ್ಛೆಯಿಂದ ಸುಮಲತಾ ಅವರ ಪರ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು ಯಶ್ ಮತ್ತು ದರ್ಶನ್ ಅವರು ಸುಮಲತಾ ಅಂಬರೀಶ್ ಅವರ ಪರ ಪ್ರಚಾರ ಮಾಡುವುದರ ವಿರುದ್ಧ ಈಗಾಗಲೇ ಸಾಕಷ್ಟು ಜನ ಹೇಳಿಕೆಗಳನ್ನು ನೀಡಿದ್ದರು ಆದರೆ ಇದೀಗ ಸಂಸದ ಶಿವರಾಮೇಗೌಡ ಅವರು ನೀಡಿರುವ ಹೇಳಿಕೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಹೌದು ಸಂಸದ ಶಿವರಾಮೇಗೌಡ ಅವರು ದರ್ಶನ್ ಮತ್ತು ಯಶ್ ಅವರ ಪ್ರಚಾರದ ವಿರುದ್ಧ ಇದೀಗ ಗುಡುಗಿದ್ದಾರೆ..

ಸುಮಲತಾ ಅವರ ಪರ ಪ್ರಚಾರ ಮಾಡೋಕೆ ದರ್ಶನ್ ಮತ್ತು ಯಶ್ ಇಬ್ಬರೂ ಬಂದಿದ್ದಾರೆ. ಅವರೇನು ಪುನೀತ್ ರಾಜ್ ಕುಮಾರ್ ರೀತಿ ದೊಡ್ಡ ನಟರೇ? ಅಂತಹ ದೊಡ್ಡ ನಟರಾದ ಪುನೀತ್ ರಾಜ್ಕುಮಾರ್ ಅವರೇ ಸುಮ್ಮನಿರಬೇಕಾದರೆ ಇವರೇಕೆ ಪ್ರಚಾರಕ್ಕೆ ಬಂದರು ಎಂದು ಈ ಇಬ್ಬರು ನಟರ ವಿರುದ್ಧ ಸಂಸದ ಶಿವರಾಮೇಗೌಡ ಅವರು ಕಿಡಿಕಾರಿದ್ದಾರೆ. ಇನ್ನು ಮುಂದಿನ ವಾರದಿಂದ ಕಿಚ್ಚ ಸುದೀಪ್ ಅವರು ಕೂಡ ಸುಮಲತಾ ಅವರ ಬಗ್ಗೆ ಪ್ರಚಾರ ಮಾಡುವುದಾಗಿ ಈಗಾಗಲೇ ಹೇಳಿದ್ದು ಇವರ ಬಗ್ಗೆ ಶಿವರಾಮೇಗೌಡ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.

Related posts

QUIT MUSIC VIDEO

Kannada Beatz

ದಳಪತಿ ವಿಜಯ್ 69ನೇ ಚಿತ್ರದ ಫಸ್ಟ್ ಲುಕ್ ರಿಲೀಸ್: ಕೊನೆಯ ಸಿನಿಮಾದ ಟೈಟಲ್ ಏನು?

administrator

ಎಂ.ಎಸ್ ಅಕ್ಷರ್ – ರೀಷ್ಮಾ ನಾಣಯ್ಯ ಅಭಿನಯದಲ್ಲಿ ಬಂತು “ಛೀ ಕಳ್ಳ” ಆಲ್ಬಂ ಸಾಂಗ್.

Kannada Beatz

Leave a Comment

Share via
Copy link
Powered by Social Snap