Kannada Beatz
News

ಸಂಚಾರಿ ವಿಜಯ್‌ ನಟನೆಯ ‘ತಲೆದಂಡ’ ಸಿನಿಮಾ ಏಪ್ರಿಲ್ 1 ರಂದು ಮಲ್ಟಿಫ್ಲೆಕ್ಸ್ ನಲ್ಲಿ ಬಿಡುಗಡೆ

ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿಶ್ವದ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಬಾಚಿದ, ನಟ ದಿವಂಗತ ಸಂಚಾರಿ ವಿಜಯ್‌ ನಟನೆಯ ‘ತಲೆದಂಡ’ ಸಿನಿಮಾ, ರಾಜ್ಯದ ಕೆಲ ಏಕಪರದೆ ಚಿತ್ರಮಂದಿರಗಳಲ್ಲಷ್ಟೇ ಬಿಡುಗಡೆಯಾಗಲಿದ್ದು, ಮಲ್ಟಿಪ್ಲೆಕ್ಸ್‌ಗಳಲ್ಲೇ ಹೆಚ್ಚಿನ ಪ್ರದರ್ಶನಕ್ಕೆ ಚಿತ್ರತಂಡ ನಿರ್ಧರಿಸಿದೆ

ಏಪ್ರಿಲ್1 ರಂದು ಸಿನಿಮಾ ಬಿಡುಗಡೆಯಾಗಲಿದೆ. ಆದರೆ ‘ಆರ್‌.ಆರ್‌.ಆರ್‌’ ಹಾಗೂ ‘ಕೆ.ಜಿ.ಎಫ್‌–2’ ಪ್ಯಾನ್‌ ಇಂಡಿಯಾ ಬಿಜ್‌ಬಜೆಟ್‌ ಸಿನಿಮಾಗಳ ಬಿಡುಗಡೆ ಹಾಗೂ ಏಕಪರದೆ ಚಿತ್ರಮಂದಿರಗಳ ಬಾಡಿಗೆ ಸಮಸ್ಯೆ ಕಾರಣದಿಂದಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಷ್ಟೇ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಏಕಪರದೆ ಚಿತ್ರಮಂದಿರಗಳು ಲಭ್ಯವಿದ್ದಲ್ಲಿ ಸಿನಿಮಾವನ್ನು ಅಲ್ಲಿಯೂ ಬಿಡುಗಡೆಗೊಳಿಸುವುದಾಗಿ ವಿತರಕರು ತಿಳಿಸಿದ್ದಾರೆ.

‘ಇದು ಕಮರ್ಷಿಯಲ್‌ ಸಿನಿಮಾವಲ್ಲದ ಕಾರಣ, ಲಕ್ಷಾಂತರ ರೂಪಾಯಿ ನೀಡಿ ಏಕಪರದೆ ಚಿತ್ರಮಂದಿರಗಳ ಬಾಡಿಗೆ ಕಟ್ಟಿ ಚಿತ್ರಪ್ರದರ್ಶನ ಸಾಧ್ಯವಿಲ್ಲ. ಮಲ್ಟಿಪ್ಲೆಕ್ಸ್‌ಗಳ 40 ಪರದೆಗಳಲ್ಲಷ್ಟೇ ಸದ್ಯಕ್ಕೆ ಬಿಡುಗಡೆಗೆ ನಿರ್ಧರಿಸಲಾಗಿದೆ. ಮಲ್ಟಿಪ್ಲೆಕ್ಸ್‌ ರೀತಿ ಶೇರಿಂಗ್‌ ನೀಡಿದರೆ ಏಕಪರದೆ ಚಿತ್ರಮಂದಿರಕ್ಕೂ ಸಿನಿಮಾ ನೀಡಲು ವಿತರಕರು ನಿರ್ಧರಿಸಿದ್ದಾರೆ’ ಎಂದು ಚಿತ್ರದ ನಿರ್ದೇಶಕ ಪ್ರವೀಣ್‌ ಕೃಪಾಕರ್‌ ತಿಳಿಸಿದ್ದಾರೆ.

ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಬರಲಿದೆ: ‘ಈ ಚಿತ್ರದಲ್ಲಿ ಸೋಲಿಗ ಬುಡಕಟ್ಟು ಜನಾಂಗಕ್ಕೆ ಸೇರಿದ ಅರೆಬುದ್ಧಿಮಾಂದ್ಯ ‘ಕುನ್ನ’ ಎಂಬ ಪಾತ್ರದಲ್ಲಿ ಸಂಚಾರಿ ವಿಜಯ್‌ ನಟಿಸಿದ್ದಾರೆ. ರಸ್ತೆಯೊಂದನ್ನು ಮಾಡಲು ನೂರಾರು ಮರಗಳನ್ನು ಕಡಿಯಲು ಮುಂದಾದಾಗ ಅದನ್ನು ಹೋಗಿ ತಡೆಯುತ್ತಾನೆ. ನಾವು ಈಗ ಎಚ್ಚೆತ್ತುಕೊಳ್ಳದೇ ಹೋದರೆ ಮುಂದೆ ಇಡೀ ಭೂಮಿಯ ತಲೆದಂಡ ಆಗುತ್ತದೆ. ನೀರಿಗಾಗಿ ಯುದ್ಧ ನಡೆಯುತ್ತದೆ. ವಿಜಯ್‌ ನಮ್ಮ ಜೊತೆ ಇಲ್ಲ ಎನ್ನುವುದು ಬಹಳ ದುಃಖದ ವಿಷಯ. ಈ ಪಾತ್ರಕ್ಕಾಗಿ ವಿಜಯ್‌ ಪರಕಾಯ ಪ್ರವೇಶ ಮಾಡಿದ್ದಾರೆ. ಈ ಚಿತ್ರದಲ್ಲಿನ ಪಾತ್ರಕ್ಕಾಗಿ ವಿಜಯ್‌ಗೆ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಬರಲಿದೆ ಎನ್ನುವುದು ನನ್ನ ನಂಬಿಕೆ’ ಎಂದರು ಕೃಪಾಕರ್‌.

‘ಪ್ರೀತಿಯ ಸಂಚಾರಿ ವಿಜಯ್‌, ಏಳು ಜನರಿಗೆ ಅಂಗಾಂಗ ದಾನ ಮಾಡುವ ಮೂಲಕ ನೀವಿನ್ನೂ ನಮ್ಮ ಜೊತೆ ಜೀವಂತವಾಗಿದ್ದೀರಿ. ನಮ್ಮ ಈ ‘ತಲೆದಂಡ’ ಸಿನಿಮಾವನ್ನು ನಿಮಗೆ ಅರ್ಪಿಸುತ್ತಿದ್ದೇವೆ’ ಎಂದಿದೆ ಚಿತ್ರತಂಡ.

ಗೋವಾದಲ್ಲಿ ನಡೆದ 52ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮ ವಿಭಾಗಕ್ಕೆ ‘ತಲೆದಂಡ’ ಆಯ್ಕೆಯಾಗಿತ್ತು. ಕಳೆದ ವಾರವಷ್ಟೇ ಲಂಡನ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಈ ಚಿತ್ರಕ್ಕೆ ಲಭಿಸಿತ್ತು. ಈ ಸಿನಿಮಾವನ್ನು ಬೆಂಗಳೂರು ಅಂತರರಾಷ್ಟ್ರಿಯ ಚಲನಚಿತ್ರೋತ್ಸವಕ್ಕೆ ಆಯ್ಕೆ ಮಾಡದೇ ಇದ್ದ ಕುರಿತೂ ಸ್ವತಃ ಸಂಚಾರಿ ವಿಜಯ್‌ ಅವರೇ ಅಸಮಾಧಾನ ಹೊರಹಾಕಿದ್ದರು.

Related posts

*’ರಾವಣ ರಾಜ್ಯದಲ್ಲಿ ನವದಂಪತಿ’ಗಳಾದ ಯುವ ಪ್ರತಿಭೆ ಅರ್ಜುನ್ ಸೂರ್ಯ ಹಾಗೂ ನಿಧಿ ಹೆಗ್ಡೆ


*ನಿರ್ಮಾಪಕರಾದ ಬಡವ ರಾಸ್ಕಲ್ ಡೈರೆಕ್ಟರ್… ರಾವಣ ರಾಜ್ಯದಲ್ಲಿ ನವದಂಪತಿಗಳಿಗೆ ಸಾಥ್ ಕೊಟ್ಟ ಶಂಕರ್ ಗುರು*


‘ಬಡವರ ಮನೆ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂಬ ನಾಣ್ಮುಡಿ ಸೃಷ್ಟಿಕರ್ತ ಈಗ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಸೂತ್ರಧಾರ ಶಂಕರ್ ಗುರು ಈಗ ನಿರ್ಮಾಪಕರಾಗಿದ್ದಾರೆ. ಯುವ ಪ್ರತಿಭೆಗಳ‌ ರಾವಣ ರಾಜ್ಯದಲ್ಲಿ ನವದಂಪತಿಗಳು ಎಂಬ ಕನಸಿಗೆ ಶಂಕರ್ ಗುರು ಸಾಥ್ ಕೊಟ್ಟಿದ್ದಾರೆ. ಅಂದಹಾಗೇ ಈ ಚಿತ್ರದ ಪ್ರಮುಖ‌ ಪಿಲ್ಲರ್ ಧೀರಜ್ ಎಂವಿ ಹಾಗೂ ವರುಣ್ ಗುರುರಾಜ್. ಇವರಿಬ್ಬರು ಗ್ರೀನ್ ಚಿಲ್ಲೀಸ್ ಸ್ಟುಡಿಯೋಸ್ ಹಾಗೂ ಧೀರಜ್ ಎಂವಿ ಫಿಲ್ಮಂಸ್ ನಡಿ ರಾವಣ ರಾಜ್ಯದಲ್ಲಿ ನವದಂಪತಿಗಳು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಧೀರಜ್ ಹಾಗೂ ವರುಣ್ ಗುರುರಾಜ್ ಸಾಹಸಕ್ಕೆ ಶಂಕರ್ ಗುರು ನಿರ್ಮಾಪರಾಗಿ ಬೆಂಬಲ ನೀಡಿದ್ದಾರೆ.


ರಾವಣ ರಾಜ್ಯದಲ್ಲಿ ನವದಂಪತಿಗಳು ಸಿನಿಮಾಗೆ ಯುವ ಪ್ರತಿಭೆ ರಂಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗುರು ಪ್ರಸಾದ್ ಗರಡಿಯಲ್ಲಿ ಕೋ ಡೈರೆಕ್ಟರ್ ಆಗಿ ಹಾಗೂ ಸುನಿಲ್ ಕುಮಾರ್ ದೇಸಾಯಿ ಅವರ ಜೊತೆ ನಿರ್ದೇಶನದ ಪಟು ಕಲಿತುಕೊಂಡಿರುವ ರಂಗ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅದರ ಭಾಗವಾಗಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಡಲಾಗಿದೆ. ಯುವ ಪ್ರತಿಭೆ ಅರುಣ್ ಸೂರ್ಯ ಹಾಗೂ ಡೊಳ್ಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಿಧಿ ಹೆಗ್ಡೆ  ಜೋಡಿಯಾಗಿ ನಟಿಸಿದ್ದಾರೆ.



ಅಭಿನಂದನ್ ಕಶ್ಯಪ್ ಮ್ಯೂಸಿಕ್ ಹಾಗೂ ಸೌಂಡ್ ಡಿಸೈನ್, ವೀರೇಶ್ ಎನ್ ಟಿಎ ಕ್ಯಾಮೆರಾ ಹಿಡಿದಿದ್ದು, ವಸಂತ ಸಂಕಲನ ಚಿತ್ರಕ್ಕಿದೆ. ಡಾರ್ಕ್ ಸೋಷಿಯಲ್ ಸರ್ಟಿಕಲ್ ಡ್ರಾಮಾ ಕಂಟೆಂಟ್ ಹೊಂದಿದ್ದು,  ಹೊಸದಾಗಿ ಮದುವೆಯಾದ ನವದಂಪತಿಗಳು ಸಾಮಾಜಿಕ ಕಟ್ಟುಪಾಡುಗಳಿಗೆ ಸಿಲುಕುವ ಕಥೆಯೇ ಚಿತ್ರದ ತಿರುಳು. ರಾವಣ ರಾಜ್ಯದಲ್ಲಿ ನವದಂಪತಿಗಳು ಸಿನಿಮಾವನ್ನು ಕನ್ನಡ‌ ಫಿಲ್ಮಿ ಕ್ಲಬ್ ಸಿನಿಮಾ ಬಿಡುಗಡೆ ಕಾರ್ಯಕ್ಕೆ ಸಾಥ್ ಕೊಡಲಿದೆ.

Kannada Beatz

ವಿಕ್ರಾಂತ್‌ರೋಣನ ಅದ್ಭುತ ಲೋಕವನ್ನು
ತಮ್ಮ ಭಾಷೆಯಲ್ಲೇ ನೋಡೋ ಅವಕಾಶ

Kannada Beatz

‘ಹೊಂದಿಸಿ ಬರೆಯಿರಿ’ ಮೊದಲ ನೋಟ ರಿಲೀಸ್…ನಿಮ್ಮ ವಿದ್ಯಾರ್ಥಿ ಜೀವನ ನೆನಪಿಸುತ್ತದೆ ಈ ಟೀಸರ್ ಝಲಕ್

Kannada Beatz

Leave a Comment

Share via
Copy link
Powered by Social Snap