HomeNews"ಜೀವ್ನಾನೇ ನಾಟ್ಕ ಸಾಮಿ" ಅಂತಾರೆ "ಕನ್ನಡತಿ" ಖ್ಯಾತಿಯ ಕಿರಣ್ ರಾಜ್.

“ಜೀವ್ನಾನೇ ನಾಟ್ಕ ಸಾಮಿ” ಅಂತಾರೆ “ಕನ್ನಡತಿ” ಖ್ಯಾತಿಯ ಕಿರಣ್ ರಾಜ್.

ಗಾಯನದ ಜೊತೆಗೆ ನಟನೆಗೂ ಸೈ ಎಂದ “ಸರಿಗಮಪ” ಖ್ಯಾತಿಯ ಶ್ರೀಹರ್ಷ.

ಮಹಾಭಾರತದ ಉಪಕಥೆಯನ್ನ ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ “ಜೀವ್ನಾನೇ ನಾಟ್ಕ ಸಾಮಿ”.
ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ
“ಕನ್ನಡತಿ” ಧಾರಾವಾಹಿ ಖ್ಯಾತಿಯ‌ ಕಿರಣ್ ರಾಜ್ ಹಾಗೂ “ಸರಿಗಮಪ” ಮೂಲಕ ಮನೆಮಾತಾಗಿದ್ದ, ಶ್ರೀಹರ್ಷ ಅಭಿನಯಿಸಿದ್ದಾರೆ.


ರಂಗಭೂಮಿ ಹಿನ್ನೆಲೆ ಹೊಂದಿರುವ ರಾಜು ಭಂಡಾರಿ ರಾಜವರ್ತ ಈ ಚಿತ್ರದ ನಿರ್ದೇಶಕರು.
ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು..
ಮಹಾಭಾರತದ ಉಪಕಥೆಯನ್ನು ಆಧರಿಸಿ ಹಾಗೂ ರಿಯಾಲಿಟಿ ಶೋಗಳಲ್ಲಿ ನಡೆಯುವ ಕೆಲವು ವಿಷಯಗಳ ಬಗ್ಗೆ ಕಥಾವಸ್ತುವನಿಟ್ಟುಕೊಂಡು ಈ ಚಿತ್ರ‌ ನಿರ್ಮಾಣ ಮಾಡಿದ್ದೇವೆ . ಪಾಸಿಟಿವ್ ಹಾಗೂ ನೆಗಟಿವ್ ಆಲೋಚನೆಗಳನ್ನು ಎರಡು ಪಾತ್ರಗಳ ಮೂಲಕ ಹೇಳಹೊರಟಿದ್ದೇವೆ. ಕಿರಣ್ ರಾಜ್ ಹಾಗೂ ಶ್ರೀಹರ್ಷ ಈ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ನಿರ್ದೇಶಕರು.
ಇದೊಂದು ಸಂಪೂರ್ಣ ಮನರಂಜನಾ ಚಿತ್ರ. ಸ್ವಲ್ಪ ಟ್ರಾಜಿಡಿ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳು ನಮ್ಮ ಚಿತ್ರದಲ್ಲಿದೆ. ಇದೇ ಆಗಸ್ಟ್ ‌19 ಸಿನಿರಸಿಕರ ಮಡಿಲಿಗೆ ನಮ್ಮ ಚಿತ್ರ ಹಾಕುತ್ತಿದ್ದೇವೆ. ನೋಡಿ ಹರಸಿ ಎಂದು ನಿರ್ದೇಶಕ ರಾಜು ಭಂಡಾರಿ ವಿನಂತಿಸಿದರು.‌ನಿನ್ನೆ


“ಕನ್ನಡತಿ” ಧಾರಾವಾಹಿ‌ ಖ್ಯಾತಿಯ ಕಿರಣ್ ರಾಜ್ ಸಹ ತಮ್ಮ ‌ಪಾತ್ರ ವಿವರಣೆ ನೀಡುತ್ತಾ, ಇಂತಹ ಒಳ್ಳಯ ತಂಡದಲ್ಲಿ ಅಭಿನಯಿಸಿದ್ದ ಸಂತೋಷ ನನಗಿದೆ. ನನ್ನ ಧಾರಾವಾಹಿಯ ಅಭಿಮಾನಿಗಳು ಈ ಚಿತ್ರವನ್ನು ನೋಡಿ ಗೆಲಿಸುತ್ತಾರೆ ಎನ್ನುತ್ತಾರೆ ಕಿರಣ್ ರಾಜ್.
“ಸರಿಗಮಪ” ದಲ್ಲಿ ತಮ್ಮ ಗಾಯನದ ಮೂಲಕ ಮನೆಮಾತಾಗಿದ್ದ, ಶ್ರೀಹರ್ಷ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಈ ಚಿತ್ರದಲ್ಲಿ ಬರೀ ನಟನೆಯಷ್ಟೇ ಅಲ್ಲ. ಒಂದು ಹಾಡನ್ನು ಹಾಡಿದ್ದೇನೆ ಅಂತಾರೆ ಶ್ರೀಹರ್ಷ.
ತೆಲುಗು – ತಮಿಳು ಸಿನಿಮಾಗಳಲ್ಲಿ ನಟಿಸಿ, ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸುತ್ತಿರುವ ಪವಿತ್ರ ಕೋಟ್ಯಾನ್ ಹಾಗೂ ಅನಿಕ ರಮ್ಯ ಈ ಚಿತ್ರದ ನಾಯಕಿಯರು.‌ ಇವರು ಸಹ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳಾಡಿದರು.
ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ. ಆಗಸ್ಟ್ 19 ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ.‌ ಪ್ರೇಕ್ಷಕರು ನಮ್ಮ ಸಿನಿಮಾಗೆ ಗೆಲುವಿನ ಮಾಲೆ ತೊಡಿಸುತ್ತಾರೆ ಎಂಬ ಅನಿಸಿಕೆ
ನಿರ್ಮಾಪಕ ರಾಜಶೇಖರ್ ಶಿರಹಟ್ಟಿ ಅವರದು.

Must Read

spot_img
Share via
Copy link
Powered by Social Snap