HomeNewsಗುರು ಸಹೋದರನನ್ನು ಮದುವೆ ಆಗುವಂತೆ ಗುರು ಪತ್ನಿ ಕಲಾವತಿಗೆ ಒತ್ತಡ? ಈ ಸುದ್ದಿ ಓದಿ

ಗುರು ಸಹೋದರನನ್ನು ಮದುವೆ ಆಗುವಂತೆ ಗುರು ಪತ್ನಿ ಕಲಾವತಿಗೆ ಒತ್ತಡ? ಈ ಸುದ್ದಿ ಓದಿ

ಇತ್ತೀಚೆಗೆ ಸಾಕಷ್ಟು ಸದ್ದು ಮಾಡುತ್ತಿರುವ ವಿಚಾರವೆಂದರೆ ಅದು ಹುತಾತ್ಮ ವೀರ ಯೋಧ ಗುರು ಅವರ ಕುಟುಂಬದ ಕಲಹ ವಿಚಾರ. ಹೌದು ಇತ್ತೀಚೆಗಷ್ಟೇ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಕೆಎಂ ದೊಡ್ಡಿ ಬಳಿಯ ಗುಡಿಗೆರೆ ಗ್ರಾಮದ ವೀರಯೋಧ ಶ್ರೀ ಹೆಚ್ ಗುರು ಅವರು ವೀರ ಮರಣವನ್ನು ಹೊಂದಿದ್ದರು.

ಗುರು ಅವರು ವೀರಮರಣವನ್ನು ಹೊಂದಿದ ಬೆನ್ನಲ್ಲೇ ಸರ್ಕಾರ ಮತ್ತು ಹಲವಾರು ಸಂಸ್ಥೆಗಳು ಹಾಗೂ ಸಾಮಾನ್ಯ ಜನರು ಗುರು ಅವರ ಕುಟುಂಬಕ್ಕೆ ಸಹಾಯವಾಗಲಿ ಎಂದು ಅಪಾರವಾದ ಹಣವನ್ನು ದಾನದ ರೂಪದಲ್ಲಿ ನೀಡಿದರು. ಸಿನಿಮಾ ರಂಗದ ಕಲಾವಿದರು, ಸರ್ಕಾರ, ಸಾಮಾನ್ಯ ಜನ ಮತ್ತು ವ್ಯವಹಾರಸ್ಥರು ಸೇರಿದಂತೆ ಇನ್ನು ಹಲವಾರು ಕ್ಷೇತ್ರದ ಜನ ನೀಡಿದ ಹಣದಿಂದ ಹಲವಾರು ಕೋಟಿ ಸಂಗ್ರಹವಾಯಿತು.

ಇನ್ನು ಈ ಹಲವಾರು ಕೋಟಿ ರೂಪಾಯಿ ದುಡ್ಡನ್ನು ಕುಟುಂಬದಲ್ಲಿ ಹಂಚಿಕೊಳ್ಳಲು ಕಲಹ ಶುರುವಾಗಿದೆ. ಹೌದು ಗುರು ಪತ್ನಿ ಕಲಾವತಿ ಮತ್ತು ಗುರು ಅವರ ಪೋಷಕರು ಹಾಗೂ ಅಣ್ಣ ತಮ್ಮಂದಿರ ನಡುವೆ ನೆರವಾಗಿ ಬಂದ ಹಣವನ್ನು ಹಂಚಿಕೊಳ್ಳಲು ಕಲಹ ಉಂಟಾಗಿದೆ.

ಹೌದು ಗುರು ಅವರ ಕುಟುಂಬದಲ್ಲಿ ನೆರವು ನೀಡಿದ ಹಣವನ್ನು ಹಂಚಿಕೊಳ್ಳಲು ಕಲಹ ಉಂಟಾಗಿದ್ದು ದುಡ್ಡು ತಮ್ಮ ಮನೆಯಲ್ಲಿಯೇ ಉಳಿದುಕೊಳ್ಳಲು ಗುರು ಅವರ ಪತ್ನಿ ಕಲಾವತಿ ಅವರನ್ನು ಗುರು ಅವರ ಕಿರಿಯ ಸಹೋದರನನ್ನು ಮದುವೆಯಾಗುವಂತೆ ಒತ್ತಡ ಹೇರಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಪೊಲೀಸ್ ಠಾಣೆ ಮೆಟ್ಟಿಲನ್ನು ಕುಟುಂಬ ಹತ್ತಿದ್ದು ನಿಮ್ಮ ಮನೆಯಲ್ಲಿಯೇ ಸರಿಪಡಿಸಿಕೊಳ್ಳಿ ಎಂದು ಬುದ್ಧಿವಾದವನ್ನು ಪೊಲೀಸರು ಹೇಳಿದ್ದಾರೆ.

ಇನ್ನು ಈ ಮದುವೆ ವಿಚಾರ ಕುರಿತಾಗಿ ಪ್ರತಿಕ್ರಿಯಿಸಿರುವ ಕಲಾವತಿ ಅವರು ಇದೆಲ್ಲ ನಮಗೆ ಆಗದೇ ಇರುವವರು ಹಬ್ಬಿಸುತ್ತಿರುವ ಸುದ್ದಿ ಎಂದು ಆ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

Must Read

spot_img
Share via
Copy link
Powered by Social Snap