HomeNewsಗರುಡ"ನ ಹಾಡಿಗೆ ಗಣ್ಯರ ಮೆಚ್ಚುಗೆ.

ಗರುಡ”ನ ಹಾಡಿಗೆ ಗಣ್ಯರ ಮೆಚ್ಚುಗೆ.

ಸಿದ್ದಾರ್ಥ್ ಮಹೇಶ್ – ಶ್ರೀನಗರ ಕಿಟ್ಟಿ ಅಭಿನಯದ ಈ ಚಿತ್ರ ಮೇ 20 ರಂದು ಬಿಡುಗಡೆ.

“ಸಿಪಾಯಿ” ಚಿತ್ರದ ಮೂಲಕ ಜನಮನ ಗೆದ್ದಿದ್ದ, ಸಿದ್ದಾರ್ಥ್ ಮಹೇಶ್ ಅಭಿನಯದ “ಗರುಡ” ಚಿತ್ರದ ಹಾಡು ಬಿಡುಗಡೆ ಹಾಗೂ ಪ್ರೀ ರಿಲೀಸ್ ಇವೆಂಟ್ ಇತ್ತೀಚಿಗೆ ನೆರವೇರಿತು. ಶಾಸಕ ಅರವಿಂದ್ ಲಿಂಬಾವಳಿ, ಸಂಸದ ಪಿ.ಸಿ.ಮೋಹನ್ , ನಟ ವಿನೋದ್ ಪ್ರಭಾಕರ್, ನಿರ್ದೇಶಕರಾದ ಮಹೇಶ್ ಬಾಬು, ಮಹೇಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ನೃತ್ಯ ನಿರ್ದೇಶಕನಾಗಿ‌ ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದೀನಿ. ನಿರ್ದೇಶನ ಮಾಡುವ ಆಸೆಯಿತ್ತು. ಅವಕಾಶ ಮಾಡಿಕೊಟ್ಟ ಸಿದ್ದಾರ್ಥ್ ಮಹೇಶ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕರಿಸಿದ ಚಿತ್ರತಂಡಕ್ಕೆ ಧನ್ಯವಾದವೆಂದರು ನಿರ್ದೇಶಕ ಧನ ಕುಮಾರ್ .

ನಾನು ಹಾಗೂ ಧನು ಮಾಸ್ಟರ್ ಚರ್ಚೆ ಮಾಡಿ ಈ ಚಿತ್ರದ ಕಥೆ ಸಿದ್ದ ಮಾಡಿಕೊಂಡೆವು. ನಂತರ ನಿರ್ಮಾಪಕರಿಗಾಗಿ ಕಾಯುತ್ತಿದ್ದಾಗ, ನಮ್ಮ ತಂದೆ ರಾಜಾ ರೆಡ್ಡಿ ಅವರು ನಿರ್ಮಾಣ ಮಾಡಲು ಮುಂದಾದರು. ಅವರ ಸಹಾಯ ಮರೆಯಲು ಸಾಧ್ಯವಿಲ್ಲ. ಸಮೀಕ್ಷೆಯ ಪ್ರಕಾರ “ಗರುಡ” ಸಾವಿರಾರು ಬದಕುವ ಪಕ್ಷಿ. ವಯಸ್ಸಾದ ಮೇಲೂ ತಾನೆ, ಮತ್ತೆ ಪುಟ್ಟಿದೇಳುವ ಪಕ್ಷಿ ಕೂಡ. ಹಾಗಾಗಿ ನಮ್ಮ ಸಿನಿಮಾಗೆ ಈ ಹೆಸರು ಸೂಕ್ತ ಅನಿಸಿತು. ಕಥೆ ಮಾಡುವಾಗಲೇ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ಅಭಿನಯಿಸಬೇಕೆಂದು ತೀರ್ಮಾನ‌ಮಾಡಿಕೊಂಡಿದ್ದೆವು. ಕಿಟ್ಟಪ್ಪ ಅಭಿನಯಿಸಲು ಒಪ್ಪಿದರು. ಐಂದ್ರಿತಾ ರೆ, ಆಶಿಕಾ ರಂಗನಾಥ್, ರಂಗಾಯಣ ರಘು ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಂತ್ರಜ್ಞರ ಕೆಲಸವೂ ಉತ್ತಮವಾಗಿದೆ. ಇದೇ ಇಪ್ಪತ್ತರಂದು ತೆರೆಗೆ ಬರುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ಸಿದ್ದಾರ್ಥ್ ಮಹೇಶ್.

ಶೀನಗರ ಕಿಟ್ಟಿ, ಆಶಿಕಾ ರಂಗನಾಥ್, ಐಂದ್ರಿತಾ ರೆ, ರಂಗಾಯಣ ರಘು ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿ, ಸಿದ್ದಾರ್ಥ್ ಮಹೇಶ್ ಅವರಿಗೆ ಶುಭ ಕೋರಿದರು.

ಜೈ ಆನಂದ್ ಛಾಯಾಗ್ರಹಣದ ಬಗ್ಗೆ ಮಾತನಾಡಿದರು. ಹಾಡಗಳ ಹಾಗು ಹಾಡಿದವರ ಬಗ್ಗೆ ತಿಳಿಸಿದ ಸಂಗೀತ ನಿರ್ದೇಶಕ ರಘು ದೀಕ್ಷಿತ್, ತಾವು ಈ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರು.

Must Read

spot_img
Share via
Copy link
Powered by Social Snap