ನಿರ್ಮಾಣ : ಶ್ರೀಕೃಷ್ಣ ಪ್ರೊಡಕ್ಷನ್ಸ್
ನಿರ್ಮಾಪಕರು : ಆದರ್ಶ್ ಅಯ್ಯಂಗಾರ್
ಸಂಗೀತ : ಹೇಮಂತ್ ಜೋಯಿಸ್
ಗಾಯಕರು : ಆದರ್ಶ್ ಅಯ್ಯಂಗಾರ್
ಸಾಹಿತ್ಯ : ಪ್ರಮೋದ್ ಮರವಂತೆ
ಕಲಾವಿದರು : ಆದರ್ಶ್ ಅಯ್ಯಂಗಾರ್,ನಿತ್ಯದಾಸ್ ಗೌಡ,ಸುನಿಲ್, ಮೈತ್ರಿ ಮುಂತಾದವರು.
ನಿರ್ದೇಶನ : ರಕ್ಷಿತ್ ತೀರ್ಥಹಳ್ಳಿ
ಛಾಯಾಗ್ರಹಣ : ಗುರುಪ್ರಸಾದ್ ನರ್ನಾಡ್, ಪ್ರವೀಣ್
ಸಂಕಲನ : ಸುಧೀರ್ ಎಸ್.ಜೆ.
ಶಿವಮೊಗ್ಗ ಮೂಲದ ಅಮೇರಿಕ ನಿವಾಸಿ ಆದರ್ಶ್ ಅಯ್ಯಂಗಾರ್ ಈ ಹಿಂದೆ ತಮ್ಮ ಶ್ರೀಕೃಷ್ಣ ಪ್ರೊಡಕ್ಷನ್ಸ್ ಮೂಲಕ ಹಲವು ಸಮಾಜಮುಖಿ ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿದ್ದರು.ಇದೀಗ ಕ್ವಿಟ್ ಎಂಬ ವಿಡಿಯೋ ಹಾಡಿನ ಮೂಲಕ ಸಮಾಜಕ್ಕೆ ಮತ್ತು ಕುಟುಂಬಗಳಿಗೆ ಹೊರೆಯಾಗಿರುವ ಡ್ರಗ್ ನ ನಿರ್ಮೂಲನೆ ಮತ್ತು ಅದರ ನಶೆಯಿಂದಾಗುವ ಪರಿಣಾಮಗಳ ಬಗ್ಗೆ ತಮ್ಮದೆ ಗಾಯನದಲ್ಲಿ ವಿಡಿಯೋ ಹಾಡೊಂದನ್ನು ಹೊರ ತಂದಿದ್ದಾರೆ.
ಈ ಹಾಡಿಗೆ ಹೇಮಂತ್ ಜೋಯಿಸ್ ಸಂಗೀತ ನೀಡಿದ್ದು ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಇನ್ನೂ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನ ಮಾಡಿರುವ ಈ ಹಾಡು ಒಂದು ಕುಟುಂಬ ಮತ್ತು ಆ ಕುಟುಂಬದ ಹುಡುಗ ಡ್ರಗ್ ವ್ಯಸನಿಯಾಗಿ ಅದರಿಂದ ಹೊರಬರುವ ಒಳ್ಳೆಯ ಸಂದೇಶವನ್ನ ಒಳಗೊಂಡಿದೆ.
ಆದರ್ಶ್ ಅಯ್ಯಂಗಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು ಅವರ ಜೊತೆಗೆ ತೆಲುಗಿನ ಡಿ(Dhee) ಡ್ಯಾನ್ಸ್ ಸೀಸನ್ 13 ರ ಸ್ಪರ್ಧಿ ಹಾಗೂ ದಮಯಂತಿ ಚಿತ್ರದಲ್ಲಿ ಅಭಿನಯಿಸಿದ್ದ ನಿತ್ಯದಾಸ್ ಗೌಡ ಆದರ್ಶ್ ಅವರಿಗೆ ಜೋಡಿಯಾಗಿದ್ದಾರೆ. ಹಾಡು “ಶ್ರೀಕೃಷ್ಣ ಪ್ರೊಡಕ್ಷನ್ಸ್” Youtube ಚಾನಲಲ್ಲಿ ನೋಡಲು ಲಭ್ಯವಿದೆ.