Kannada Beatz
News

ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದರು “ಅರಸಯ್ಯನ ಪ್ರೇಮಪ್ರಸಂಗ” ಚಿತ್ರದ ಪೋಸ್ಟರ್.

ಕನ್ನಡ ಚಿತ್ರರಂಗದಲ್ಲಿ ಈಗ ಸುಗ್ಗಿ ಸಂಭ್ರಮ.‌ ಒಂದಕ್ಕಿಂತ ಒಂದು ಅದ್ಭುತ ಚಿತ್ರಗಳು ಜನಮನಸೂರೆಗೊಳ್ಳುತ್ತಿದೆ.

“ಫ್ರೆಂಚ್ ಬಿರಿಯಾನಿ” , “ಗುರು ಶಿಷ್ಯರು” ಚಿತ್ರದ ಮೂಲಕ ಎಲ್ಲರ ಮನ ಸೆಳೆದಿರುವ ಮಹಂತೇಶ್ ಹಿರೇಮಠ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಅರಸಯ್ಯನ ಪ್ರೇಮಪ್ರಸಂಗ” ಚಿತ್ರದ ಪೋಸ್ಟರನ್ನು ಇತ್ತೀಚಿಗೆ ರಾಘವೇಂದ್ರ ‌ರಾಜಕುಮಾರ್ ಹಾಗೂ ಮಂಗಳ ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

ಮೇಘಶ್ರೀ ರಾಜೇಶ್ ಅವರು ರಾಜ್ ಕಮಲ ಪಿಕ್ಚರ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಅವರ ಮೊದಲ‌ ನಿರ್ಮಾಣದ ಚಿತ್ರ.
ಮೇಘಶ್ರೀ ಅವರಿಗೆ ಚಿತ್ರ ನಿರ್ಮಾಣಕ್ಕೆ ಪತಿ ರಾಜೇಶ್ ಸಾಥ್ ನೀಡಿದ್ದಾರೆ. ರಾಜೇಶ್ ಅವರು ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜೆ.ವಿ.ಆರ್ ದೀಪು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಸನ, ಗೋರೂರಿನ ಸುತ್ತಮುತ್ತಲ್ಲಿನ ಪರಿಸರದಲ್ಲಿ ಚಿತ್ರೀಕರಣವಾಗಿದೆ.‌

ಐದು ಹಾಡುಗಳಿದ್ದು, ಪ್ರವೀಣ್ – ಪ್ರದೀಪ್ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ನಾರ್ನಾಡ್ ಛಾಯಾಗ್ರಹಣ, ಸುನೀಲ್ ಕಶ್ಯಪ್ ಸಂಕಲನವಿರುವ ಈ ಚಿತ್ರಕ್ಕೆ ಹರೀಶ್ ಹಾಗೂ ಜಿ.ವಿ.ಆರ್ ದೀಪು ಸಂಭಾಷಣೆ ಬರೆದಿದ್ದಾರೆ.

ಮಹಂತೇಶ್ ಹಿರೇಮಠ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಅರಸಯ್ಯನ ಪ್ರೇಮಪ್ರಸಂಗ” ಚಿತ್ರದ ತಾರಾಬಳಗದಲ್ಲಿ ರಶ್ಮಿತಾ ಗೌಡ, ವಿಜಯ್ ಚೆಂಡೂರ್, ಪಿ.ಡಿ.ಸತೀಶ್, ರಘು ರಮಣಕೊಪ್ಪ, ಜಹಂಗೀರ್ ಮುಂತಾದವರಿದ್ದಾರೆ.

Related posts

“ಪದವಿಪೂರ್ವ” ಹಾಡುಗಳ ಧ್ವನಿ ಮುದ್ರಣ ಕಾರ್ಯ ಶುರು

Kannada Beatz

ಕೆಕೆ ಬಿಜಿನೆಸ್ ಟಾಕ್ ಶೋ ಶುರು. ಬಿಸಿನೆಸ್ ಮಾಡುವವರಿಗೆ ಇವರು ಕೊಡ್ತಾರೆ ಐಡಿಯಾ

Kannada Beatz

ಡಾ.ವಿಷ್ಣು ಸೇನಾ ಸಮಿತಿಯ 2021ನೇ ಸಾಲಿನ ಸರ್ವಸದಸ್ಯರ ಸಭೆ ದಿನಾಂಕ-05.12.2021ರಂದು ಬೆಂಗಳೂರಿನ ಶಾರದಾ ಥಿಯೇಟರ್ ನಲ್ಲಿ ನಡೆಯಿತು.

administrator

Leave a Comment

Share via
Copy link
Powered by Social Snap