Kannada Beatz
Celebrities

ಸರಳವಾಗಿ ನೆರವೇರಿದ ‘ವಾಮನ’ ಸಿನಿಮಾದ ಮುಹೂರ್ತ…ಇಂದಿನಿಂದ ಶೂಟಿಂಗ್ ಅಖಾಡಕ್ಕೆ ಧುಮುಕಿದ ಶೋಕ್ದಾರ್ ಧನ್ವೀರ್

ಬಜಾರ್ ಸಿನಿಮಾ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದ ಶೋಕ್ದಾರ್ ಧನ್ವೀರ್ ಸದ್ಯ ಬೈ ಟು ಲವ್ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ಬೈ ಟು ಲವ್ ಸಕ್ಸಸ್ ಯಾತ್ರೆ ಮುಗಿಸಿಕೊಂಡು ಇದೀಗ ವಾಮನ ಸಿನಿಮಾ ಶೂಟಿಂಗ್ ಅಖಾಡಕ್ಕೆ ಧುಮುಕಿದ್ದಾರೆ.

ಕತ್ತಿ ಮಾರಮ್ಮ ದೇಗುಲದಲ್ಲಿ ವಾಮನ ಮುಹೂರ್ತ

ಧನ್ವೀರ್ ಗೌಡ ನಟಿಸ್ತಿರುವ ಮೂರನೇ ಸಿನಿಮಾ ವಾಮನ.. ಸಂಕ್ರಾಂತಿ ಹಬ್ಬದ ಪ್ರಯುಕ್ತ ವಾಮನ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಬಿಟ್ರೆ ಬೇರೆ ಅಪ್ ಡೇಟ್ ಸಿಕ್ಕಿರಲಿಲ್ಲ. ಇದೀಗ ವಾಮನ ಸಿನಿಮಾದ ಮುಹೂರ್ತ ಸರಳವಾಗಿ ದೇವನಹಳ್ಳಿಯ ಕತ್ತಿ ಮಾರಮ್ಮ ದೇಗುಲದಲ್ಲಿ ನೆರವೇರಿದೆ.

ಇಂದಿನಿಂದ ಶೂಟಿಂಗ್

ವಾಮನ ಸಿನಿಮಾದ ಮುಹೂರ್ತದ ನಂತರ ಚಿತ್ರತಂಡ ಇಂದಿನಿಂದಲೇ ಶೂಟಿಂಗ್ ಗೆ‌ ಮುನ್ನುಡಿ ಬರೆದಿದೆ. ಬೆಂಗಳೂರಿನಲ್ಲಿಯೇ‌ ಮೊದಲ ಹಂತದ ಶೂಟಿಂಗ್ ನಡೆಸ್ತಿದೆ. ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಅಗಿರುವ ಶಂಕರ್ ರಾಮನ್ ವಾಮನ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಈಕ್ವಿನಾಕ್ಸ್ ಗೋಬಲ್ ಎಂಟರ್ ಟ್ರೈನ್ಮೆಂಟ್ ಪ್ರೊಡಕ್ಷನ್ ನಡಿ ಚೇತನ್ ಕುಮಾರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

Related posts

ರಿಲೀಸ್ ಆಯ್ತು ‘ಫೋರ್ ವಾಲ್ಸ್’ ಟ್ರೇಲರ್… ಫೆಬ್ರವರಿ 11ಕ್ಕೆ ಸಿನಿಮಾ ತೆರೆಗೆ

Kannada Beatz

ಪುನೀತ್, ದರ್ಶನ್ ಮತ್ತು ಸುದೀಪ್ ಸೇರಿ ಹೊಸ ಬಿಸಿನೆಸ್..! ಈ ಸ್ಪೆಷಲ್ ಸುದ್ದಿ ಓದಿ

administrator

ಅದ್ಧೂರಿಯಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಬಳ್ಳಾರಿ ಕುವರ…ಕಿರೀಟಿ ಚೊಚ್ಚಲ ಚಿತ್ರಕ್ಕೆ ತಾರಾಮೆರುಗು..ಕಿರೀಟಿ ಸ್ಟಂಟ್..ಆಕ್ಟಿಂಗ್..ಡ್ಯಾನ್ಸ್ ರಾಜಮೌಳಿ ಮೆಚ್ಚುಗೆ

Kannada Beatz

Leave a Comment

Share via
Copy link
Powered by Social Snap