Kannada Beatz
Celebrities

ಭೀಮ” ನಾಗಿ ಬರುತ್ತಿದ್ದಾರೆ ದುನಿಯಾ ವಿಜಯ್ .

ಪ್ರಥಮ ನಿರ್ದೇಶನದ “ಸಲಗ” ಚಿತ್ರದ ಮೂಲಕ ಜನಮನ ಗೆದ್ದಿರುವ ದುನಿಯಾ ವಿಜಯ್, ತಮ್ಮ ನಿರ್ದೇಶನದ ಎರಡನೇ ಚಿತ್ರಕ್ಕೆ ಅಣಿಯಾಗಿದ್ದಾರೆ. ನೈಜಘಟನೆ ಆಧಾರಿತ ಕಥೆಯನ್ನು ಸಿದ್ದ ಮಾಡಿಕೊಂಡಿದ್ದಾರೆ.
ಈ ಚಿತ್ರಕ್ಕೆ “ಭೀಮ” ಎಂದು ಹೆಸರಿಡಲಾಗಿದೆ. ದುನಿಯಾ ವಿಜಯ್ ಈ ಚಿತ್ರದಲ್ಲಿ ನಿರ್ದೇಶನದೊಂದಿಗೆ ನಾಯಕನಾಗೂ ಅಭಿನಯಿಸುತ್ತಿದ್ದಾರೆ.

ಕರುನಾಡ ಚಕ್ರವರ್ತಿ ಶಿವ
ರಾಜಕುಮಾರ್ ಅಭಿನಯದ “ಭೈರಾಗಿ” ಚಿತ್ರವನ್ನು ನಿರ್ಮಿಸುತ್ತಿರುವ ಕೃಷ್ಣ ಸಾರ್ಥಕ್ ಈ ಚಿತ್ರ‌ ನಿರ್ಮಾಣ ಮಾಡುತ್ತಿದ್ದಾರೆ. “ಸಲಗ” ಚಿತ್ರದ ವಿತರಕ ಜಗದೀಶ್ ಗೌಡ ಅವರು ಸಹ ಕೃಷ್ಣ ಸಾರ್ಥಕ್ ಅವರೊಂದಿಗೆ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.

“ಟಗರು” ಖ್ಯಾತಿಯ ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ದೀಪು ಎಸ್ ಕುಮಾರ್ ಸಂಕಲನಕಾರರಾಗಿ ಕಾರ್ಯ‌ ನಿರ್ವಹಿಸಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯಲಿದ್ದಾರೆ.

ಮಹಾಶಿವರಾತ್ರಿಯ ಶುಭದಿನದಂದು “ಭೀಮ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.

Related posts

ಡಿ ಬಾಸ್ ಮೇಲೆ ಐಟಿ ರೈಡ್ ಆಗಲಿಲ್ಲ ಯಾಕೆ ಗೊತ್ತಾ? ಇಲ್ಲಿದೆ ನೋಡಿ ಶಾಕಿಂಗ್ ಕಾರಣ

administrator

ನಟ ಸಾರ್ವಭೌಮ ದಲ್ಲಿ ಹಿಂದೆಂದೂ ಕಂಡಿರದ ಅಪ್ಪು..!

administrator

ದಯವಿಟ್ಟು ನನಗೊಂದು ನಟ ಸಾರ್ವಭೌಮ ಟಿಕೆಟ್ ನೀಡಿ ಎಂದು ಕೇಳಿಕೊಂಡ ಪವನ್ ಒಡೆಯರ್..!

administrator

Leave a Comment

Share via
Copy link
Powered by Social Snap