Kannada Beatz
CelebritiesFeatured

ಮಹಾಶಿವರಾತ್ರಿಯ ಸುಸಂದರ್ಭದಲ್ಲಿ ಗಾನಪ್ರಿಯ ಶಂಕರನಿಗೆ ಗಾನನಮನ ಸಲ್ಲಿಸಿದ ರಾಕ್ ಲೈನ್ ಮೊಮ್ಮಗಳು

ಶರಯು ವೈ ಯೂಟ್ಯೂಬ್ ಚಾನಲ್ ಮೂಲಕ ಈ ಹಾಡು ಬಿಡುಗಡೆ.

ದೇಶದೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ. ಈ ಸುಸಂದರ್ಭದಲ್ಲಿ ಕುಮಾರಿ ಶರಯು ಯತೀಶ್ ಗಾನಪ್ರಿಯ ಶಂಕರನಿಗೆ ಗಾನನಮನ ಸಲ್ಲಿಸಿದ್ದಾರೆ.

ನಗರದ ಜೆ.ಸಿ.ಪಾರ್ಕ್ ನಲ್ಲಿ ನಡೆಯುವ ಅದ್ದೂರಿ ಮಹಾಶಿವರಾತ್ರಿ ಉತ್ಸವದ ಸಂದರ್ಭದಲ್ಲಿ, ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಶರಯು ವೈ ಯೂಟ್ಯೂಬ್ ಚಾನಲ್ ಮೂಲಕ ಪರಶಿವನ ಕುರಿತಾದ ಈ ಹಾಡು ಲೋಕಾರ್ಪಣೆಯಾಗಿದೆ.

ಪ್ರದ್ಯುಮ್ನ ನರಹಳ್ಳಿ ಹಾಗೂ ಈಶ್ವರ್ ಶ್ಯಾಮರಾವ್ ಬರೆದಿರುವ ಈ ಭಕ್ತಿಗೀತೆಯನ್ನು ಶರಯು ಸುಶ್ರಾವ್ಯವಾಗಿ ಹಾಡಿದ್ದಾರೆ ಹಾಗೂ ಅಭಿನಯಿಸಿದ್ದಾರೆ. ಈ ಹಿಂದೆ ಕೂಡ ಶರಯು ಅವರು ಸಾಕಷ್ಟು ಹಾಡುಗಳನ್ನು ಹಾಡಿದ್ದು, ಕೇಳುಗರ ಮನಗೆದ್ದಿದೆ.

ಯತೀಶ್ ವೆಂಕಟೇಶ್ (ರಾಕ್ ಲೈನ್ ವೆಂಕಟೇಶ್ ಪುತ್ರ) ನಿರ್ಮಿಸಿರುವ ಭಕ್ತಿಪ್ರಧಾನ ಈ ವಿಡಿಯೋ ಹಾಡಿಗೆ ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ. ರಾಬರ್ಟ್ ಖ್ಯಾತಿಯ ಸುಧಾಕರ್ ಎಸ್ ರಾಜ್ ಛಾಯಾಗ್ರಹಣ ಮಾಡಿದ್ದಾರೆ. ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಅದ್ಭುತವಾದ ಸೆಟ್ ಹಾಕಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಿರುವ ಭೂಷಣ್ ಅವರ ನೃತ್ಯ ನಿರ್ದೇಶನ ಹಾಗೂ ಯತೀಶ್ ಅವರ ಪತ್ನಿ ಹಾಗೂ ಶರಯು ತಾಯಿ ಸಿಂಧೂರಿ ಅವರ ವಸ್ತ್ರವಿನ್ಯಾಸ ಈ ಭಕ್ತಿಗೀತೆಗಿದೆ.

Related posts

ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು “ಖಡಕ್” ಹಾಡುಗಳು

Kannada Beatz

“ರೈತ” ನಿಗೆ ಗಾನನಮನ ಸಲ್ಲಿಸಿದ ALL OK ಮತ್ತು ಸಂಜಯ್ ಗೌಡ

Kannada Beatz

‘ಇಂದಿರಾ’ ಮೊದಲ ಹಾಡು ರಿಲೀಸ್… ಪ್ರೇಕ್ಷಕರ ಗಮನ ಸೆಳೆಯುತ್ತಿದೆ ‘ಸ್ಟೆಪ್ಸ್ ಟು ಡೆಸ್ಟಿನಿ’ ಟ್ರ್ಯಾಕ್

Kannada Beatz

Leave a Comment

Share via
Copy link
Powered by Social Snap