Kannada Beatz
CelebritiesFeaturedNewsReviewsSandalwoodSilver Screen

ನಟ ಸಾರ್ವಭೌಮ ದಲ್ಲಿ ಹಿಂದೆಂದೂ ಕಂಡಿರದ ಅಪ್ಪು..!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಯಾವುದೇ ಚಿತ್ರ ಕಳೆದ ವರ್ಷ ತೆರೆ ಕಾಣಲೇ ಇಲ್ಲ. 2017ರ ಡಿಸೆಂಬರ್ ತಿಂಗಳಿನಲ್ಲಿ ಪುನೀತ್ ಅಭಿನಯದ ಅಂಜನಿಪುತ್ರ ತೆರೆಕಂಡು ಬ್ಲಾಕ್ ಬಸ್ಟರ್ ಆಗಿತ್ತು. ಇದಾದ ಬಳಿಕ ಪುನೀತ್ ಅವರ ಯಾವುದೇ ಚಿತ್ರ ಇದುವರೆಗೂ ತೆರೆಕಂಡಿಲ್ಲ. ಇನ್ನು ರಣವಿಕ್ರಮ ನಂತರ ಪುನೀತ್ ಮತ್ತು ನಿರ್ದೇಶಕ ಪವನ್ ಒಡೆಯರ್ ಜೋಡಿ ಒಂದಾಗಿ ನಟ ಸಾರ್ವಭೌಮ ಚಿತ್ರ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷದ ದಸರಾ ಸಮಯದಲ್ಲಿ ಪುನೀತ್ ಅಭಿನಯದ ನಟ ಸಾರ್ವಭೌಮ ತೆರೆ ಕಾಣಬೇಕಿತ್ತು. ಆದರೆ ಚಿತ್ರೀಕರಣ ಮತ್ತು ಮೇಕಿಂಗ್ ಗುಣಮಟ್ಟ ಹೆಚ್ಚಿಸುವ ಸಲುವಾಗಿ ನಟ ಸಾರ್ವಭೌಮ ಬಿಡುಗಡೆ ದಿನಾಂಕವನ್ನು ಆಗಿಂದಾಗ್ಗೆ ಮುಂದೂಡುತ್ತಾ ಬರಲಾಯಿತು. ಇನ್ನು ಈಗಾಗಲೇ ನಟಸಾರ್ವಭೌಮ ಚಿತ್ರದ ಟೀಸರ್ ಮತ್ತು ಎಣ್ಣೆ ಸಾಂಗ್ ವೊಂದು ಬಿಡುಗಡೆಯಾಗಿದ್ದು ಸಿನಿರಸಿಕರಲ್ಲಿ ನಿರೀಕ್ಷೆಯನ್ನು ಮೂಡಿಸಿವೆ. ಅದರಲ್ಲೂ ನಟ ಸಾರ್ವಭೌಮ ಟೀಸರ್ ಮಾತ್ರ ಚಿತ್ರ ಹಿಟ್ ಆಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ನೆಕ್ಸ್ ಲೆವೆಲ್ ಮೇಕಿಂಗ್ ಮ್ಯೂಸಿಕ್ ಸಾಂಗ್ಸ್ ಮತ್ತು ಎಂಟರ್ಟೈನ್ಮೆಂಟ್ ಅನ್ನು ಹೊಂದಿರುವ ಚಿತ್ರ ನಟ ಸಾರ್ವಭೌಮ ಆಗಿರಲಿದೆ ಎಂಬ ನಂಬಿಕೆಯನ್ನು ಆ ಟೀಸರ್ ಮೂಡಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಟೀಸರ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಸ್ಕ್ರೀನ್ ಪ್ರೆಸೆನ್ಸ್ ನಲ್ಲಿ ತುಂಬಾ ವೇರಿಯೇಷನ್ ಗಳು ಕಂಡು ಬರುತ್ತವೆ. ಹೌದು ಟೀಸರ್ ನಲ್ಲಿ ಅಪ್ಪು ಅವರನ್ನು ಗಮನಿಸಿದರೆ ಈ ಹಿಂದೆ ಎಂದೂ ಕಂಡಿರದ ಪುನೀತ್ ರಾಜಕುಮಾರ್ ಅವರು ನಮಗೆ ಕಾಣುತ್ತಾರೆ. ಹಿಂದೆ ಪವನ್ ಒಡೆಯರ್ ಅವರು ಸಹ ಇದೇ ಮಾತನ್ನು ಹೇಳಿದ್ದರು ನಟಸಾರ್ವಭೌಮ ಚಿತ್ರದಲ್ಲಿ ಅಪ್ಪು ಅವರು ಈ ಹಿಂದೆ ಎಂದು ನಿರ್ವಹಿಸದೆ ಇರುವಂತಹ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಹೇಳಿದ್ದರು. ಟೀಸರ್ ವೀಕ್ಷಿಸಿದ ಬಳಿಕ ಪವನ್ ಅವರ ಆ ಮಾತುಗಳು ನಿಜ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಪ್ರೇಕ್ಷಕರು. ಇನ್ನು ಟೀಸರ್ ನಲ್ಲಿ ಪುನೀತ್ ಅವರ ಡಾನ್ಸ್ ನೋಡಿ ಕೇವಲ ಕನ್ನಡ ಸಿನಿರಸಿಕರು ಮಾತ್ರವಲ್ಲದೆ ಬೇರೆ ಭಾಷೆಯ ಸಿನಿರಸಿಕರೂ ಸಹ ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಪುನೀತ್ ಅವರಿಗೆ ನಾಯಕಿಯರಾಗಿ ರಚಿತಾ ರಾಮ್ ಮತ್ತು ಅನುಪಮಾ ಪರಮೇಶ್ವರನ್ ಅವರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ರಾಕ್ಲೈನ್ ವೆಂಕಟೇಶ್ ಅವರು ಬಂಡವಾಳ ಹೂಡಿದ್ದು ಚಿತ್ರ ಫೆಬ್ರವರಿ 7 ರಂದು ಪ್ರಪಂಚಾದ್ಯಂತ ತೆರೆಕಾಣಲಿದೆ. ಹಾಗೂ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಜನವರಿ 5 ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯನ್ನು ಹೊಂದಿದ್ದು ಅತಿ ದೊಡ್ಡ ಮಟ್ಟದ ಆಡಿಯೋ ರಿಲೀಸ್ ಫಂಕ್ಷನ್ ಇದಾಗಲಿದೆ. ಒಟ್ಟಾರೆಯಾಗಿ ಒಂದು ವರ್ಷ ಗ್ಯಾಪ್ ನಂತರ ಬರುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಯಾವುದೇ ಡೌಟ್ ಇಲ್ಲ.

Related posts

ವಿಜಯ ದಶಮಿಯಂದು ಆರಂಭವಾಯಿತು “ಕೈಮರ”.

Kannada Beatz

ಮತ್ತೆ ನಿರ್ದೇಶನಕ್ಕಿಳಿದ ಅರ್ಜುನ್ ಸರ್ಜಾ…ಮಗಳ ಚಿತ್ರಕ್ಕೆ ಆಕ್ಷನ್ ಕಿಂಗ್ ಆಕ್ಷನ್ ಕಟ್..

Kannada Beatz

ಎಂಟೇ ನಿಮಿಷದಲ್ಲಿ ಕೆಜಿಎಫ್ ರೆಕಾರ್ಡ್ ಉಡೀಸ್ ಮಾಡಿದ ದರ್ಶನ್..!

administrator

Leave a Comment

Share via
Copy link
Powered by Social Snap