ಕನ್ನಡ ಚಿತ್ರರಂಗದಲ್ಲಿ ಶಂಕರ್ ನಾಗ್ ಅವರ “ಇದು ಸಾಧ್ಯ”, ಎಸ್ ನಾರಾಯಣ್ ಅವರ ” ದಕ್ಷ” ಸೇರಿದಂತೆ ಕೆಲವು ಚಿತ್ರಗಳ ಚಿತ್ರೀಕರಣ ಕೆಲವೇ ಗಂಟೆಗಳಲ್ಲಿ ಮುಗಿದಿದ್ದು ಎಲ್ಲರಿಗೂ ತಿಳಿದ ಸಂಗತಿ. ಪ್ರಸ್ತುತ “ಯಂಗ್ ಮ್ಯಾನ್” ಚಿತ್ರದ ಚಿತ್ರೀಕರಣವನ್ನು ಸಿಂಗಲ್ ಟೇಕ್ ನಲ್ಲೇ ಉತ್ಸಾಹಿ ತಂಡ ಮಾಡಿ ಮುಗಿಸಿದೆ . ಚಿತ್ರ ಜೂನ್ 7 ರಂದು ಬಿಡುಗಡೆಯಾಗಲಿದೆ.
ಮುತ್ತುರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದು, ವಿಜಯಲಕ್ಷ್ಮಿ ರಾಮೇಗೌಡ ನಿರ್ಮಾಣ ಮಾಡಿದ್ದಾರೆ. ಕ್ರಿಯೇಟಿವ್ ಹೆಡ್ ಆಗಿ ಮುರಳಿ ಎಸ್ ವೈ ಕಾರ್ಯ ನಿರ್ವಹಿಸಿದ್ದಾರೆ. ಲೋಕಿ ಸಂಗೀತ ನಿರ್ದೇಶನ ಹಾಗೂ ನಾಗರಾಜ್ ವೀನಸ್ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಸುನೀಲ್ ಗೌಡ, ರಾಶಿಕಾ ಕರಾವಳಿ, ಹರೀಶ್ ಆಚಾರ್ಯ, ಶೃತಿ ಗೌಡ, ಋಷಿ ಅನಿತಾ, ಆನಂದ ಕುಮಾರ್, ನಯನ ಪುಟ್ಡಸ್ವಾಮಿ, ತನುಜಾ, ಅನುಕುಮಾರ್, ಜಯರಾಮ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ದೇಶಪ್ರೇಮ ಕುರಿತಾದ ಕಥಾಹಂದರ ಹೊಂದಿರುವ “ಯಂಗ್ ಮ್ಯಾನ್” ಚಿತ್ರವನ್ನು DSK Cinema’S ಸಂಸ್ಥೆಯ ಮುಖ್ಯಸ್ಥರಾದ
Dr’ ಸುನಿಲ್ ಕುಂಬಾರ್ ಅವರು
ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.