Kannada Beatz
News

ತಮಿಳು, ಮಲಯಾಳಂ ಚಿತ್ರರಂಗಗಳಿಗೆ ಕೆಆರ್ ಜಿ ಸ್ಟುಡಿಯೋಸ್ ಪಾದಾರ್ಪಣೆ

ಕೆಆರ್ ಜಿ ಸ್ಟುಡಿಯೋಸ್ ಒಂದು ಹೆಸರಾಂತ ಚಿತ್ರ ನಿರ್ಮಾಣ, ವ್ಯಾಪಾರ ಹಾಗೂ ವಿತರಣಾ ಸಂಸ್ಥೆಯಾಗಿದ್ದು, ಹಲವಾರು ಯಶಸ್ವಿ ಚಿತ್ರಗಳನ್ನು ಕೊಡುಗೆಯಾಗಿ ನೀಡಿದೆ‌. ಇದೀಗ ಈ ಸಂಸ್ಥೆ ಬೇರೆ ಭಾಷೆಯ ಚಿತ್ರರಂಗಕ್ಕೂ ಕಾಲಿಡುತ್ತಿದೆ.

ಸೂಫಿಯುಂ ಸುಜಾತಯುಂ,‌ಹೋಮ್, ಅಂಗಮಲೇ ಬಾಯ್ಸ್ ನಂತಹ ಯಶಸ್ವಿ ಮಲಯಾಳಂ ಚಿತ್ರಗಳನ್ನು ನೀಡಿರುವ Friday Film Houseನೊಂದಿಗೆ “ಪಡಕ್ಕಲಂ” ಎಂಬ ಮಲಯಾಳಂ ಚಿತ್ರಕ್ಕಾಗಿ ಕೆಆರ್ ಜಿ ಕೈ ಜೋಡಿಸಿದೆ.ಈ‌ ಚಿತ್ರಕಥೆಯನ್ನು ಮನು ಸ್ವರಾಜ್ ಬರೆದು ನಿರ್ದೇಶಿಸಲಿದ್ದಾರೆ. ಬೇಸಿಲ್ ಜೋಸೆಫ್ ನಂತಹ ಖ್ಯಾತ ನಿರ್ದೇಶಕರೊಂದಿಗೆ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿರುವ ಖ್ಯಾತಿ ಇವರದ್ದು.


ಕೆ ಆರ್ ಜಿ ಸ್ಟುಡಿಯೋಸ್ ಮತ್ತು Friday Film House ಸಹಯೋಗದಲ್ಲಿ ಈಗಾಗಲೇ ಮೂಡಿ ಬಂದಿರುವ “ಅಬ್ಬಬ್ಬ” ಎಂಬ ಹಾಸ್ಯಭರಿತ ಕನ್ನಡ ಚಿತ್ರ, “ವಾಲಟಿ” ಎಂಬ ಮಲಯಾಳಂ ಚಿತ್ರದ ಕನ್ನಡ ಡಬ್ಬಿಂಗ್ ಹಾಗೂ ಬಿಡುಗಡೆ ಎಲ್ಲೆಡೆ ಸದ್ದು ಮಾಡಿತ್ತು.ಇನ್ನು ಹೆಸರಾಂತ ಹಿಂದಿ ಚಿತ್ರ ನಿರ್ಮಾಣ ಸಂಸ್ಥೆಯಾದ ಟಿ.ವಿ.ಎಫ್ ನೊಂದಿಗೆ “ಪೌಡರ್” ಎಂಬ ಕನ್ನಡ ಚಿತ್ರವನ್ನು ಎದುರು ನೋಡುತ್ತಿದೆ. ಅಷ್ಟೇ ಅಲ್ಲದೆ, Bangalore Days, ಉಸ್ತಾದ್ ಹೊಟೇಲ್ ಖ್ಯಾತಿಯ ಅಂಜಲಿ ಮೆನನ್ ನಿರ್ದೇಶನದಲ್ಲಿ ತಮಿಳು ಚಿತ್ರವೊಂದನ್ನು ನಿರ್ಮಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಕಾಲಿಡಲಿದೆ.

ಇನ್ನು ಇಂತಹ ಅನೇಕ ನವೀನ ಕಥಾ ವಸ್ತುವನ್ನು ಚಿತ್ರರಂಗಕ್ಕೆ ಪರಿಚಯಿಸುವ ಮಹೋದ್ದೇಶವನ್ನು ಕೆಆರ್ ಜಿ ಸ್ಟುಡಿಯೋಸ್ ಹೊಂದಿದೆ. ಈ ಮೂಲಕ ಕನ್ನಡ ಚಿತ್ರಗಳ ಮಾರ್ಕೆಟಿಂಗ್ ವ್ಯಾಪ್ತಿಯನ್ನು ಹೊರ ರಾಜ್ಯಗಳಲ್ಲಿ ವಿಸ್ತರಿಸಲು ಹೊರಟಿದೆ.
ಸದ್ಯಕ್ಕೆ ಕೆಆರ್ ಜಿ ಬ್ಯಾನರ್ ನಲ್ಲಿ ಪೌಡರ್, ಉತ್ತರಕಾಂಡ, ಕಿರಿಕೆಟ್ 11, ಕೆ.ಕೆ ಮುಂತಾದ ಚಿತ್ರಗಳು ತಯಾರಾಗುತ್ತಿವೆ.

Related posts

ಮಲಯಾಳಂನ “ಎಆರ್‌ಎಂ” ಸಿನಿಮಾದ ವಿತರಣೆ ಹಕ್ಕು ಪಡೆದ ಹೊಂಬಾಳೆ; ಸೆಪ್ಟೆಂಬರ್‌ 12ರಂದು ಪ್ಯಾನ್‌ ಇಂಡಿಯಾ ಚಿತ್ರ ಬಿಡುಗಡೆ

Kannada Beatz

ಕಾಶಿಯ ನಾಗಸಾಧುವಿನಿಂದ ರಂಗಸಮುದ್ರ ಚಿತ್ರದ “ಕೈಲಾಸ”ಸಾಂಗ್ ಬಿಡುಗಡೆ

Kannada Beatz

ಅಪಾರ ಜನಸಾಗರದ ನಡುವೆ ಶಿಡ್ಲಘಟ್ಟದಲ್ಲಿ ನಡೆಯಿತು ‘ಕಬ್ಜ’ ಹಬ್ಬ

Kannada Beatz

Leave a Comment

Share via
Copy link
Powered by Social Snap