Kannada Beatz
News

‘ಚಿಕ್ಕಿಯ ಮೂಗುತಿ’ ಚಿತ್ರದ ಪವರ್ ಫುಲ್ ಟೀಸರ್ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪತ್ನಿ ಅಶ್ವಿನಿ ಪುನೀತ್

ಪವರ್‌ಫುಲ್ ಪಾತ್ರದಲ್ಲಿ ನಟಿ ತಾರಾ: ಹೇಗಿದ ನೋಡಿ ‘ಚಿಕ್ಕಿಯ ಮೂಗುತಿ’

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಭಿನ್ನ ಸಿನಿಮಾ ‘ಚಿಕ್ಕಿಯ ಮೂಗುತಿ’

ದೇವಿಕಾ ಜನಿತ್ರಿ ನಿರ್ದೇಶನದ ‘ಚಿಕ್ಕಿಯ ಮೂಗುತಿ’ ಟೀಸರ್ ಔಟ್: ಪವರ್ ಫುಲ್ ಪಾತ್ರದಲ್ಲಿ ನಟಿ ತಾರಾ

ಲವ್ ಸ್ಟೋರಿ, ಕ್ರೈಮ್, ಹಾರರ್ ಸಿನಿಮಾಗಳ ನಡುವೆ ಆಗಾಗ ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ, ವಿನೂತನ ಕಾನ್ಸೆಪ್ಟ್‌ನ ಚಿತ್ರಗಳು ಸಹ ಸದ್ದು ಮಾಡುತ್ತಿರುತ್ತವೆ. ಇದೀಗ ಮತ್ತೊಂದು ಹೊಸ ಬಗೆಯ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಅದೇ ಚಿಕ್ಕಿಯ ಮೂಗುತಿ. ದೇವಿಕಾ ಜನಿತ್ರಿ ನಿರ್ದೇಶನದ ಚಿಕ್ಕಿಯ ಮೂಗುತಿ ಸಿನಿಮಾ ಸದ್ಯ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ನವ ನಿರ್ದೇಶಕಿಗೆ ಸಾಥ್ ಕೊಟ್ಟಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್ …ಅಪ್ಪು ಹಾಗೂ ಅಶ್ವಿನಿಯವರ ಆತ್ಮೀಯರು ಆಗಿರೋ ದೇವಿಕಾ ನಿರ್ದೇಶದ ಮೊದಲ ಸಿನಿಮಾ ಇದಾಗಿದೆ..ಚಿಕ್ಕಿಯ ಮೂಗುತಿ ಕಾದಂಬರಿ ಆಧಾರಿತ ಸಿನಿಮಾವಾಗಿದ್ದು ವಿಶೇಷ ಎಂದರೆ ದೇವಕಿ ಜನಿತ್ರಿ ಅವರೇ ಬರೆದಿದ್ದ ಕಾದಂಬರಿಯೇಈಗ ಚಿತ್ರವಾಗಿ ಮೂಡಿ ಬರುತ್ತಿದೆ. ಇನ್ನು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಅಂದಹಾಗೆ ‘ಚಿಕ್ಕಿಯ ಮೂಗುತಿ’ ಹೆಸರೇ ಹೇಳುವ ಹಾಗೆ ಇದೊಂದು ಮಹಿಳಾ ಪ್ರಧಾನ ಸಿನಿಮಾ. ಹೆಣ್ಣು ಮಕ್ಕಳ ಹೋರಾಟ, ಶೋಷಣೆ ಬಗ್ಗೆ ಇರುವ ಚಿತ್ರ ಇದಾಗಿದೆ. ಹಿರಿಯ ನಟಿ ತಾರಾ ಅನುರಾಧಾ, ಶ್ವೇತಾ ಶ್ವೀವಾತ್ಸವ್, ಭವಾನಿ ಪ್ರಕಾಶ್, ಅವಿನಾಶ್, ತಬಲ ನಾಣಿ, ರಂಗಾಯಣ ರಘು, ಭರತ್ ಬೋಪಣ್ಣ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ವಿಶೇಷ ಎಂದರೆ ಈ ಸಿನಿಮಾಗೆ ಹೆಣ್ಣು ಮಕ್ಕಳೇ ಶಕ್ತಿ ಎಂದರೆ ತಪ್ಪಾಗಲ್ಲ. ಯಾಕೆಂದರೆ ನಿರ್ದೇಶಕಿ ಸೇರಿದಂತೆ ಬಹುತೇಕರು ಹೆಣ್ಣು ಮಕ್ಕಳೇ ಸೇರಿಕೊಂಡು ಮಾಡಿರುವ ಸಿನಿಮಾ ಇದಾಗಿದೆ.

ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ತಾರಾ, ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದಂತೆ ಈ ಸಿನಿಮಾದಲ್ಲೂ ಮಹಿಳೆಯರಿಗೂ ಮೀಸಲಾತಿ ಇದೆ. ಎಲ್ಲರೂ ಹೆಣ್ಣು ಮಕ್ಕಳೆ ಸೇರಿಕೊಂಡು ಮಾಡಿರುವ ಸಿನಿಮಾ, ಅದ್ಭತವಾಗಿ ಸಿನಿಮಾ ಮೂಡಿಬಂದಿ.ೆ ದೇವಿಕಾ ಅವರ ಮೊದಲು ಸಿನಿಮಾ ಅಂತ ಅನಿಸುವುದೇ ಇಲ್ಲ, ಉತ್ತಮವಾಗಿ ಮೂಡಿಬಂದಿದೆ’ ಎಂದು ಹೇಳಿದರು. ಇನ್ನು ನಟಿ ಶ್ವೇತಾ ಮಾತನಾಡಿ ಮಗುವಿಗೆ ಜನ್ಮ ನೀಡಿದ ಬಳಿಕ ನಟನೆ ಮಾಡಿದ ಮೊದಲ ಸಿನಿಮಾ ಎಂದು ಹೇಳಿದರು. ಭವಾನಿ ಪ್ರಕಾಶ್ ಕೂಡ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ನಿರ್ದೇಶಕಿ ದೇವಿಕಿ ಅವರು ಈ ಮೊದಲು ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಅನೇಕ 40ಕ್ಕೂ ಅಧಿಕ ಕಾದಂಬರಿಗಳನ್ನು ಬರೆದಿದ್ದಾರೆ. ಇದೀಗ ಅವರ ಒಂದು ಕಾದಂಬರಿ ಚಿಕ್ಕಿಯ ಮೂಗುತಿ ಸಿನಿಮಾವಾಗಿ ತೆರೆ ಮೇಲೆ ಬರಲು ಸಜ್ಜಾಗಿದೆ. ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿಕ್ಕಿಯ ಮೂಗುತಿ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ. ಸಿನಿಮಾದ ಟೀಸರ್ ಇದೇ ತಿಂಗಳು 20ಕ್ಕೆ ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.

ಚಿಕ್ಕಿಯ ಮೂಗುತಿ ಚಿತ್ರ ಜನಿತ್ರಿ ಪ್ರೋಡಕ್ಷನ್ ನಿರ್ಮಾಣವಾಗಿದೆ, ಚಿತ್ರಕ್ಕೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದು ವೆಂಕಟೇಶ್ ಆರ್ ಕ್ಯಾಮೆರಾ ವರ್ಕ್ ಜೊತೆಗೆ ಎಡಿಟಿಂಗ್ ಕೂಡ ಮಾಡಿದ್ದಾರೆ…ಸದ್ಯ ಟೀಸರ್ ರಿಲೀಸ್ ಮಾಡಿರೋ ತಂಡ ಆದಷ್ಟು ಬೇಗ ಸಿನಿಮಾವನ್ನ ಪ್ರೇಕ್ಷಕರನ್ನ ಮುಂದೆ ತರಲಿದ್ದಾರೆ….

Related posts

ಬಿಗ್ ನ್ಯೂಸ್..

Kannada Beatz

ಟಿವಿ9 ಪ್ರಾಪರ್ಟಿ ಎಕ್ಸ ಪೊ ಆರಂಭ; ಒಳ್ಳೊಳ್ಳೆಯ ರಿಯಲ್ ಎಸ್ಟೇಟ್ ಆಫರ್ಗಳು; ಜನರಿಂದ ಉತ್ತಮ ಸ್ಪಂದನೆ

Kannada Beatz

ಕೆವಿಎನ್ ತೆಕ್ಕೆಗೆ ಬಾಹುಬಲಿ ಸೂತ್ರಧಾರ ರಾಜಮೌಳಿಯ ‘RRR’ ಸಿನಿಮಾ ವಿತರಣೆ ಹಕ್ಕು…

administrator

Leave a Comment

Share via
Copy link
Powered by Social Snap