Kannada Beatz
News

ಟ್ರೇಲರ್ ಮೂಲಕ ಗಮನಸೆಳೆದ ಹೊಸಬರ ಆರ..ಜುಲೈ 28ರಂದು ಸಿನಿಮಾ ರಿಲೀಸ್

ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿರುವ ಹೊಸಬರ ಆರ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ನೋಡುಗರ ಗಮನಸೆಳೆಯುತ್ತಿದೆ. ಸಸ್ಪೆನ್ಸ್, ಪಯಣ, ಪ್ರೀತಿ, ದುಷ್ಟ ಶಕ್ತಿ, ದೈವ ಸಂಘರ್ಷದ ಕಥಾಹಂದರ ಒಳಗೊಂಡಿರುವ ಸ್ಪಿರಿಚುಯಲ್ ಡ್ರಾಮಾ ಮತ್ತು ಥ್ರಿಲ್ಲರ್ ಜಾನರ್ ಸಿನಿಮಾ ‘ಆರ’. ಈ ಚಿತ್ರವನ್ನು ಅಶ್ವಿನ್ ವಿಜಯಮೂರ್ತಿ ನಿರ್ದೇಶಿಸಿದ್ದಾರೆ. ಸಿನಿಮಾ, ಸಂಪೂರ್ಣ ಹೊಸ ಪ್ರತಿಭೆಗಳಿಂದ, ಹೊಸತನದಿಂದ ಕೂಡಿದೆ. ರೋಹಿತ್ ಹಾಗೂ ದೀಪಿಕಾ ಆರಾಧ್ಯ ‘ಆರ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಚಿತ್ರದ ನಾಯಕ ರೋಹಿತ್ ಬರೆದಿದ್ದು. ಆನಂದ್ ನೀನಾಸಂ ಸತ್ಯ ರಾಜ್ ನಿಖಿಲ್ ಶ್ರೀಪಾದ್ ಪ್ರತೀಕ್ ಲೋಕೇಶ್ ಹಾಗೂ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಿರ್ದೇಶಕ ಅಶ್ವಿನ್ ವಿಜಯಮೂರ್ತಿ ಮಾತನಾಡಿ, ಒಬ್ಬ ಹುಡುಗನ ಜರ್ನಿ ಕಥೆ ಇದು. ಆ ಜರ್ನಿಯಲ್ಲಿ ಅವನು ಆಧ್ಯಾತ್ಮಿಕವಾಗಿ ಯಾವ ರೀತಿ ಸವಾಲುಗಳನ್ನು ಎದುರಿಸುತ್ತಾನೆ. ಅದು ಯಾವುದೇ ಮುಖಾಂತರವಾಗಿಯಾದರು ಬರಬಹುದು. ಹೆಣ್ಣಿನ ಮೂಲಕವಾದರೂ ಬರಬಹುದು. ದುಡ್ಡಿನ ಮೂಲಕವಾದರು ಬರಬಹುದು. ಸಂಬಂಧಗಳ ಮೂಲಕವಾದರ ಬರಬಹುದು. ನಮ್ಮ ಜೀವನದಲ್ಲಿ ಯಾರೊಬ್ಬರಾದರೂ ಬಂದರು. ಅವರು ತೋರಿಸಿಕೊಳ್ಳಲು ಬರುತ್ತಾರೆ. ತಿಳಿಸಿಕೊಡಲು ಬರ್ತಾರೆ. ಈ ಸವಾಲುಗಳನ್ನು ಎದುರಿಸಿ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಾರಾ ಅನ್ನೋದು ಕಥೆ. ಇದನ್ನು ಕಮರ್ಷಿಯಲ್ ಆಗಿ ಆಧ್ಯಾತ್ಮಿಕವಾಗಿ ತೋರಿಸಲಾಗಿದೆ ಎಂದರು.

‘ಆರ’ ಎಂಬ ಯುವಕನ ಸುತ್ತ ಹೆಣೆದ ಕಥೆಯಿದು. ವಿಧಿಯ ಜೊತೆ ಸೇರಿ ಸಂರಕ್ಷಣೆಗಾಗಿ ಹೋರಾಡುವ ಸ್ಟೋರಿ ಚಿತ್ರದಲ್ಲಿ ಇದೆ. ಚಿತ್ರದ ಬಹುತೇಕ ಚಿತ್ರೀಕರಣ ಉಡುಪಿಯಲ್ಲಿ ನಡೆದಿದೆ. ಚಿತ್ರದಲ್ಲಿ ಉಡುಪಿಯ ಕನ್ನಡವನ್ನು ಬಳಸಲಾಗಿದೆ. ಈ ಚಿತ್ರವನ್ನು ‘ಎಆರ್’ ಫಿಲ್ಮ್ಸ್‌ ಬ್ಯಾನರ್ ಅಡಿ ಸುಜಾತ ಚಡಗ, ಚಂದ್ರಶೇಖರ್ ಸಿ ಜಂಬಿಗಿ ನಿರ್ಮಾಣ ಮಾಡಿದ್ದಾರೆ. ಯುವ ಪ್ರತಿಭೆ ಶ್ರೀಹರಿ ಛಾಯಾಗ್ರಾಹಣ, ಗಿರೀಶ್ ಹೊತ್ತೂರ್ ಸಂಗೀತ ನಿರ್ದೇಶನ, ಮಾದೇಶ್ ಸಂಕಲನ, ದೇವಿ ಪ್ರಕಾಶ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಆರ ಇದೇ ಜುಲೈ 28ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲಿದೆ.

Related posts

ಉತ್ತರಪ್ರದೇಶದಲ್ಲಿ ಆರಂಭವಾಯಿತು “ರೆಡ್ ರಮ್”.

Kannada Beatz

ವಿಭಿನ್ನ ಚಿತ್ರಕಥೆಗೆ ಆಕ್ಷನ್ ಕಟ್ ಹೇಳಿದ ನಿರ್ದೇಶಕ ಈಶ್ವರ್ ಪೋಲಂಕಿ

Kannada Beatz

ಸಿರಿಕನ್ನಡದಲ್ಲಿ “ವಿಜಯ ದಶಮಿ”ಯ ಜೊತೆ “ಅಮ್ಮನ ಮದುವೆ

Kannada Beatz

Leave a Comment

Share via
Copy link
Powered by Social Snap