Kannada Beatz
News

7 ಸ್ಟಾರ್ ಸುಲ್ತಾನ ಕುರುಬಾನಿ ‘ಟಗರು ಪಲ್ಯ’ ಕ್ಯಾನ್ಸಲ್..ಅಭಿಮಾನಿಗಳು ಹಾಗೂ ಚಿತ್ರತಂಡದ ಒತ್ತಾಯಕ್ಕೆ ಮಣಿದ ಮಾಲೀಕ

ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ, ನಾಗಭೂಷಣ್ ಹಾಗೂ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಟಿಸುತ್ತಿರುವ ಸಿನಿಮಾ ಟಗರು ಪಲ್ಯ. ಉಮೇಶ್ ಕೆ ಕೃಪ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರದಲ್ಲಿ ಅನೇಕ ಟಗರು ಕಾಳಗದಲ್ಲಿ ಗೆದ್ದಿ ಬೀಗಿರುವ 7 ಸ್ಟಾರ್ ಸುಲ್ತಾನ ಹೆಸರಿನ ಟಗರನ್ನು ಬಕ್ರೀದ್ ಹಬ್ಬಕ್ಕೆ ಕುರುಬಾನಿ ಕೊಡಲು ಮಾಲೀಕ ತೀರ್ಮಾನ ನಡೆಸಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಯಾವುದೇ ಕಾರಣಕ್ಕೂ 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡಬಾರದು ಎಂಬ ದೊಡ್ಡ ಅಭಿಯಾನವೇ ಶುರುವಾಗಿತ್ತು. ಈ ಬಗ್ಗೆ ಟಗರು ಪಲ್ಯ ಚಿತ್ರತಂಡ ಮಾಲೀಕರಿಗೆ ಕುರುಬಾನಿ ಕೊಡದಂತೆ ಸಲಹೆ ನೀಡಿತ್ತು. ಅಭಿಮಾನಿಗಳು ಹಾಗೂ ಚಿತ್ರತಂಡದ ಮನವಿಗೆ ಪ್ರತಿಫಲ ಸಿಕ್ಕಿದ್ದು, 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡದಿರಲು ಮಾಲೀಕರು ತೀರ್ಮಾನ ನಡೆಸಿದ್ದಾರೆ.

ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದ‌ ಮಾಲೀಕ ಯುನೀಸ್ ಗಡೇದ್ ಬಕ್ರೀದ್ ಹಬ್ಬಕ್ಕೆ ಕುರ್ಬಾನಿ ಕೊಡಲೆಂದೇ ಎರಡೂವರೆ ವರ್ಷದ ಹಿಂದೆ 7 ಸ್ಟಾರ್ ಸುಲ್ತಾನ್ ಟಗರನ್ನು 1 ಲಕ್ಷ 88 ಸಾವಿರದ ಐನೂರು ರೂ ಗೆ ಖರೀದಿಸಿದ್ದರು. ಆದ್ರೆ ಕುರ್ಬಾನಿಗೂ ಮುನ್ನ ಟಗರನ್ನು ಕಾಳಗಕ್ಕೆ ಇಳಿಸಲಾಗಿದ್ದು ಟಗರು ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. ಇಲ್ಲಿಯ ವರೆಗೆ 34 ಕಣಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದು ಸುಮಾರು 20 ಲಕ್ಷದಷ್ಟು ಹಣ, ಬೆಳ್ಳಿ, ಬಂಗಾರ, ಬೈಕ್ಗಳನ್ನ ಗೆದ್ದು ಬೀಗಿದೆ. ಹೀಗಾಗಿ ಮಾಲೀಕ ಯುನೀಸ್ ಈ ಟಗರಿಗೆ 7 ಸ್ಟಾರ್ ಸುಲ್ತಾನ್ ಎಂದು ಹೆಸರಿಟ್ಟರು. ಆದ್ರೆ ಅಂದುಕೊಂಡಂತೆ ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಈ ಟಗರನ್ನ ಕುರ್ಬಾನಿ ನೀಡಲು ನಿರ್ಧರಿಸಿದ್ದರು. ಸಾಧಕ ಟಗರನ್ನು ಕುರ್ಬಾನಿ‌ ಮಾಡದಂತೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿತ್ತು. ಹೀಗಾಗಿ ಅಭಿಮಾನಿಗಳ ಒತ್ತಾಸೆಗೆ‌ ಮಣಿದು 7 ಸ್ಟಾರ್ ಸುಲ್ತಾನನ ಕುರ್ಬಾನಿ ಕೊಡದಿರಲು ಯುನೀಸ್ ನಿರ್ಧರಿಸಿದ್ದಾರೆ.

ಯಾವಾಗ ರಿಲೀಸ್ ‘ಟಗರು ಪಲ್ಯ’?

ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದು ಹಾಗೂ ಕಂಟೆಂಟ್ ಆಧಾರಿತ ಚಿತ್ರ ನಿರ್ಮಿಸಲು ಧನಂಜಯ್ ಪ್ರಾರಂಭಿಸುವ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ‌ ಮೂರನೇ ಕೊಡುಗೆ ಟಗರು ಪಲ್ಯ. ಇಕ್ಕಟ್, ಬಡವ ರಾಸ್ಕಲ್ ಸಿನಿಮಾಗಳ ಖ್ಯಾತಿಯ ನಾಗಭೂಷಣ್ ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ಜೋಡಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡತಾರಾಬಳಗವಿರುವ ಟಗರು ಪಲ್ಯ ಸಿನಿಮಾಗೆ ವಾಸುಕಿ ವೈಭವ್ ಟ್ಯೂನ್ ಹಾಕಿದ್ದು, ಎಸ್ ಕೆ ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರ‌ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

Related posts

ಮತ್ತೊಂದು ಗರಿ! ಲಹರಿಯಿಂದ ಹೊರಬಂದ ರಿಕಿ ಕೇಜ್‌ ಆಲ್ಬಂ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನ!!

administrator

ಪ್ರಸಿದ್ಧವಾದ FINGER TUTTING ನೃತ್ಯವನ್ನು ಇಡೀ ಭಾರತದಲ್ಲೇ ಟ್ರೆಂಡ್ ಮಾಡುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗ ಭರತ್ ಜಾಕ್

administrator

ರೈಲ್ವೆಯಲ್ಲಿ ಹಲವಾರು ಖಾಲಿ ಇರುವ ಕೆಲಸಗಳು. ಹುದ್ದೆಗಳ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ.

administrator

Leave a Comment

Share via
Copy link
Powered by Social Snap