HomeNewsಆಕ್ಟಿಂಗ್ಗು ಸೈ ಡೈರೆಕ್ಷನ್ ಜೈ (ಸಂತೋಷ್ ಶೆಟ್ಟಿ)

ಆಕ್ಟಿಂಗ್ಗು ಸೈ ಡೈರೆಕ್ಷನ್ ಜೈ (ಸಂತೋಷ್ ಶೆಟ್ಟಿ)

ಮೂಲತಹ ಕೊಪ್ಪದವರಾದ ಸಂತೋಷ್ ಶೆಟ್ಟಿ ಅವರು ಶಿವಮೊಗ್ಗದಲ್ಲಿ ವಾಸವಾಗಿದ್ದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ದಾಪುಗಾಲನ್ನಿಟ್ಟು ಮುಂದೆ ಸಾಗುತ್ತಿದ್ದಾರೆ ಇವರು ಕನ್ನಡದಲ್ಲಿ ಸುಮಾರು 12ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಅಷ್ಟೇ ಅಲ್ಲದೆ ಮಲಯಾಳಂ ಭಾಷೆಯಲ್ಲಿ “ararum” ಎಂಬುವ ಆಲ್ಬಮ್ ಸಾಂಗ್ ನಲ್ಲಿ ನಟಿಸಿದ್ದು

ಇದು ಸುಮಾರು ನಾಲ್ಕು ಮಿಲಿಯನ್ ವ್ಯೂಸ್ ಕಂಡಿದ್ದು ಯೂಟ್ಯೂಬ್ನಲ್ಲಿ ತುಂಬಾ ಜನಪ್ರಿಯವಾಗಿದೆ ಹಾಗೂ ಇವರು ಕನ್ನಡದಲ್ಲಿ ಬೆಲ್ ಬಾಟಮ್,ಗೋಲ್ಡನ್ ಸ್ಟಾರ್ ಗಣೇಶನ ಗೀತಾ, ಇಷ್ಟಕಾಮ್ಯ,6ನೇ ಮೈಲಿ, ನಂದನವನದೊಳ್, ಸಂಯುಕ್ತ 2, PRK ಪ್ರೊಡಕ್ಷನ್ನ ಫ್ಯಾಮಿಲಿ ಪ್ಯಾಕ್ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ

PRK ಪ್ರೊಡಕ್ಷನ್ನ ಮತ್ತೊಂದು ಸಿನಿಮಾ “ಮ್ಯಾನ್ ಆಫ್ ದಿ ಮ್ಯಾಚ್” ಇದರಲ್ಲಿ ಕೂಡ ಅಭಿನಯಿಸಿದ್ದು ಇತ್ತೀಚೆಗೆ ಬಂದಂತಹ ಹೊಸ ಕನ್ನಡ OTT App “Talkis ” ನಲ್ಲಿ ವಿಜಯ ರಾಘವೇಂದ್ರ ಅವರೊಂದಿಗೆ ಅಭಿನಯಿಸಿದ್ದು ಹಾಗೂ “ಸಾರಿ ಯಾಕೆ’ ಎಂಬ ಸೀರೀಸ್ ನಲ್ಲಿ ನಯನ ನಾಗರಾಜ್ ಅವರೊಂದಿಗೆ ಹೀರೋ ಪಾತ್ರದಲ್ಲಿ ಕೂಡ ಅಭಿನಯಿಸಿರುತ್ತಾರೆ.ಹೀಗೆ ಅನೇಕ ಪ್ರಮುಖ ಚಿತ್ರಗಳಲ್ಲಿ ಹಲವಾರು ಹಿರಿಯ ನಟ- ನಟಿಯರೊಂದಿಗೆ ನಟಿಸಿದ್ದು ಇವರ ಮುಂಬರುವ ಚಿತ್ರಗಳು ಉಪೇಂದ್ರ ಅವರ ಬುದ್ಧಿವಂತ2,

ಇನ್ನೊಂದು ಸಿನಿಮಾ “hide and seek “ಇನ್ನು ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಷ್ಟೇ ಅಲ್ಲದೆ ವ್ಯವಹಾರಿಕ ಕ್ಷೇತ್ರದಲ್ಲೂ ತಮ್ಮದೇ ಆದ ಅಸ್ತಿತ್ವವನ್ನು ಹೊಂದಿದ್ದು ಹಲವಾರು ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸಿದ್ದಾರೆ. ತಮ್ಮದೇ ಆದ ಅಥರ್ವ ಕ್ರಿಯೇಶನ್ಸ್” ಎಂಬ ಬ್ಯಾನರ್ ನಡಿ ಕೆಲವೊಂದು ಕಿರುಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿ ಮುಂದೆ ದೊಡ್ಡ ಸಿನಿಮಾಗಳನ್ನು ಕೂಡ ನಿರ್ಮಿಸುವ ಹಾಗೂ ನಿರ್ದೇಶಿಸುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅದರ ಮೊದಲ ಪ್ರಯತ್ನದಂತೆ ಇದೀಗ ಅವರ ನಿರ್ದೇಶನದ “ಕಜಿನಿ” ಎಂಬ ಕಿರು ಚಿತ್ರವು ” ಅಂಬೆಗಾಲು “ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ಮೂರು ವಿಭಾಗದಲ್ಲಿ ಪ್ರಶಸ್ತಿಯನ್ನು ಕೂಡ ಪಡೆದಿರುತ್ತದೆ.

Must Read

spot_img
Share via
Copy link
Powered by Social Snap