ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಡಾ.ಟಿ. ಶಿವಕುಮಾರ್ ನಾಗರ ನವಿಲೆಯವರ ಮಾರ್ಗದರ್ಶನದಲ್ಲಿ,ರವಿ ಸಂತುರವರ ನೇತೃತ್ವದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಾಂಸ್ಕೃತಿಕ ಘಟಕ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ರವಿಸಂತು ಬಳಗದ ಸಯೋಗದಲ್ಲಿ ಚಾಮರಾಜನಗರದ ಸುಪ್ರಸಿದ್ದ ಜೆ.ಎಚ್. ಪಾಟೀಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಅದ್ದೂರಿ ಕಾರ್ಯಕ್ರಮವನ್ನು ಅತಿಥಿ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯ ಯುವ ಘಟಕದ ಅಧ್ಯಕ್ಷರನ್ನಾಗಿ ಭರತ್ ಜಾಕ್ ರವರನ್ನು ಆಯ್ಕೆ ಮಾಡಿ ಆದೇಶ ಪತ್ರ ವಿತರಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮಂಜುಳಾ ಪಾವಗಡ ರವರ ಬಯಲು ಭಾವನೆಗಳ ಸಾಗರ ಕವನ ಸಂಕಲನ ಲೋಕಾರ್ಪಣೆಯಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ, ಅಧ್ಯಕ್ಷರು ಇಂದಿನ ಕಾರ್ಯಕ್ರಮದ ರೂವಾರಿಗಳು ಹಾಗೂ ನಮ್ಮ ಸಂಸ್ಥೆಯ ಸ್ಯಾಂಸ್ಕೃತಿಕ ವಿಭಾಗದ ಅಧ್ಯಕ್ಷರಾದ ರವಿಸಂತುರವರು ಕ್ರಿಯಾಶೀಲತೆಗೆ ಹೆಸರಾದ ವ್ಯಕ್ತಿ. ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತನ್ನನ್ನು ತಾನು ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಬಹುಮುಖ ಪ್ರತಿಭೆ. ಕಲಾವಿದರಿಗಾಗಿ ತನ್ನ ತನು ಮನವನ್ನು ಮುಡಿಪಾಗಿಟ್ಟು, ಅವರ ಏಳಿಗೆಗಾಗಿ ಶ್ರಮಿಸುತ್ತಿರುವ ಶ್ರಮಜೀವಿ ಈ ದಿನ ಹಲವಾರು ಕಲಾವಿದರನ್ನು ಗುರುತಿಸಿ ಅವರಿಗೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯ ಸೇವಾರತ್ನ ಪ್ರಶಸ್ತಿ ನೀಡಿ ಪುರಸ್ಕಾರ ಮಾಡುತ್ತಿರುವುದು ವಿಶೇಷ.ಇವರ ಸೇವೆ ಹೀಗೆ ಮುಂದುವರಿಯಲಿ ಇವರಿಗೆ ಸದಾ ನಮ್ಮ ಸಂಸ್ಥೆ ಬೆನ್ನೆಲುಬಾಗಿರುತ್ತದೆ. ಪ್ರಶಸ್ತಿ ಸ್ವೀಕರಿಸಿದ ಕಲಾವಿದರಿಗೆ ಅಭಿನಂದನೆಗಳು ಶುಭವಾಗಲಿ ಎಂದರು.
ವೇದಿಕೆಯಲ್ಲಿ ಡಾ.ಸುಗಂಧ್ ರಾಜ್ , ಸುರೇಶ್ ಗೌಡ್ರು, ರವಿಕುಮಾರ್, ರವಿಮಂಚೆ ಗೌಡ್ರು
ರಾಜು ಬುದ್ಧಿ , ರಾಮದಾಸ್ , ಟಿ.ವಿ.ಎಸ್ ಕುಮಾರ್,ಸಿಂಚನ,ಶ್ರೀಕಂಠ ಪ್ರಸನ್ನ, ನವೀನ್, ಸುಂದರೇಶ್, ಚೇತನ್ ಮುಂತಾದವರು ಉಪಸ್ಥಿತರಿದ್ದರು.