HomeNews‘ಹೊಂದಿಸಿ ಬರೆಯಿರಿ’ ಮೊದಲ ನೋಟ ರಿಲೀಸ್…ನಿಮ್ಮ ವಿದ್ಯಾರ್ಥಿ ಜೀವನ ನೆನಪಿಸುತ್ತದೆ ಈ ಟೀಸರ್ ಝಲಕ್

‘ಹೊಂದಿಸಿ ಬರೆಯಿರಿ’ ಮೊದಲ ನೋಟ ರಿಲೀಸ್…ನಿಮ್ಮ ವಿದ್ಯಾರ್ಥಿ ಜೀವನ ನೆನಪಿಸುತ್ತದೆ ಈ ಟೀಸರ್ ಝಲಕ್

ಇಂಜಿನಿಯರಿಂಗ್ ಕಾಲೇಜ್ ಫ್ರೊಫೆಸರ್ ಆಗಿದ್ದ ರಾಮೇನಹಳ್ಳಿ ಜಗನ್ನಾಥ್ ಹೊಂದಿಸಿ ಬರೆಯಿರಿ ಸಿನಿಮಾ ಮೂಲಕ ನಿರ್ದೇಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ಹೌಸ್ ನಲ್ಲಿ ಡೈರೆಕ್ಷನ್ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವವಿರುವ ಜಗನ್ನಾಥ್ ಈ ಸಿನಿಮಾ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಹೊಂದಿಸಿ ಬರೆಯಿರಿ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಸಖತ್ ಸೌಂಡ್ ಮಾಡಿತ್ತು. ಈಗ ಬಿಡುಗಡೆಯಾಗಿರುವ ಟೀಸರ್ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ವಿದ್ಯಾರ್ಥಿ ಜೀವನದ ಅನುಭವ ಅನಾವರಣ
ನೆನಪು, ಕನಸು ಹಾಗೂ ವಾಸ್ತವ..ಈ ಮೂರು ಪರಿಕಲ್ಪನೆಗಳ ಮೇಲೆ ಅನಾವರಣವಾಗುವ ಸಿನಿಮಾವೇ ಹೊಂದಿಸಿ ಬರೆಯಿರಿ. ಅದರಂತೆ ಟೀಸರ್ ನಲ್ಲಿ ಕಾಲೇಜ್ ನೆನಪುಗಳ ಕಟ್ಟಿಕೊಡಲಾಗಿದೆ. ವಿದ್ಯಾರ್ಥಿ ಜೀವನದ ಏರಿಳಿತಗಳನ್ನು ತೋರಿಸಲಾಗಿದೆ. ಸಖತ್ ಪ್ರಾಮೀಸ್ ಆಗಿ ಮೂಡಿ ಬಂದಿರುವ ಟೀಸರ್ ನಲ್ಲಿ ಚೂರಿಕಟ್ಟೆ ಖ್ಯಾತಿಯ ಪ್ರವೀಣ್, ಗುಳ್ಟು ಖ್ಯಾತಿಯ ನವೀನ್, ವಾಸ್ತುಪ್ರಕಾರದಿಂದ ಪರಿಚಿತರಾದ ಐಶಾನಿ ಶೆಟ್ಟಿ, ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಗೆ ಅಮ್ಮನಾಗಿ ನಟಿಸಿದ್ದ ಅರ್ಚನಾ ಜೋಯಿಸ್, ಸಂಯುಕ್ತ ಹೊರನಾಡು, ಇಷ್ಟದೇವತೆ ಧಾರಾವಾಹಿಯ ಖ್ಯಾತಿಯ ಶ್ರೀಮಹಾದೇವ್, ಗಾಳಿಪಟ ಚಿತ್ರಖ್ಯಾತಿಯ ಭಾವನಾರಾವ್ ಹೀಗೆ ಹಲವು ಪ್ರತಿಭೆಗಳು ಮಿಂಚಿದ್ದಾರೆ.

ಈಗಾಗಲೇ ಹೊಂದಿಸಿ ಬರೆಯಿರಿ ಸಿನಿಮಾದ ಶೂಟಿಂಗ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ..ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಗುಳ್ಟು’ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್‌ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ದೊಡ್ಡ ತಾರಾಬಳಗವೇ ನಟಿಸಿರುವ ಹೊಂದಿಸಿ ಬರೆಯಿರಿ ಸಿನಿಮಾವನ್ನು “ಸಂಡೇ ಸಿನಿಮಾಸ್ “ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದಾರೆ.

Must Read

spot_img
Share via
Copy link
Powered by Social Snap