Kannada Beatz
Celebrities

ಅದ್ಧೂರಿಯಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಬಳ್ಳಾರಿ ಕುವರ…ಕಿರೀಟಿ ಚೊಚ್ಚಲ ಚಿತ್ರಕ್ಕೆ ತಾರಾಮೆರುಗು..ಕಿರೀಟಿ ಸ್ಟಂಟ್..ಆಕ್ಟಿಂಗ್..ಡ್ಯಾನ್ಸ್ ರಾಜಮೌಳಿ ಮೆಚ್ಚುಗೆ

ಮಾಜಿ ಸಚಿವ ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಅದ್ಧೂರಿಯಾಗಿ ಗಾಂಧಿನಗರದ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬಾಹುಬಲಿ ಸೂತ್ರಧಾರ ಎಸ್.ಎಸ್ ರಾಜಮೌಳಿಯ ಅಭಯ ಹಸ್ತದಿಂದ ಕಿರೀಟಿ ಚೊಚ್ಚಲ ಚಿತ್ರಕ್ಕೆ ಆರಂಭ ಸಿಕ್ಕಿದೆ. ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾಬಳಗವೇ ನಟಿಸಲಿರುವ ಈ ಸಿನಿಮಾದ ಮುಹೂರ್ತ ಇವತ್ತು ಅದ್ಧೂರಿಯಾಗಿ ನೆರವೇರಿದೆ.

ಕಿರೀಟಿ ಸ್ಟಂಟ್, ಡ್ಯಾನ್ಸ್ ಮೆಚ್ಚಿದ ಮೌಳಿ..!
ಕಿರೀಟಿ ಚೊಚ್ಚನ ಸಿನಿಮಾಗೆ ಕ್ಲ್ಯಾಪ್ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ ರಾಜಮೌಳಿ ಹೀರೋ ಇಂಟ್ರೂಡಕ್ಷನ್ ಟೀಸರ್ ನೋಡಿ ಕಿರೀಟಿ ಬೆನ್ನುತಟ್ಟಿದರು. “ನನಗೆ ಪ್ರಾಮಿಸಿಂಗ್ ಆಗಿರುವ ಯುವ ಪ್ರತಿಭೆಯನ್ನು ಲಾಂಚ್ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇವರು ನಟನೆ ಮಾಡಬಹುದು, ಡ್ಯಾನ್ಸ್ ಮಾಡಬಹುದು, ಇವರು ಸ್ಟಂಟ್ಸ್ ಅನ್ನೂ ಮಾಡಬಹುದು. ಇದೇ ಸಂದರ್ಭದಲ್ಲಿ ಯುವ ಪ್ರತಿಭೆಗೆ ಒಳ್ಳೆ ಲಾಂಚ್ ಕೂಡಬೇಕು. ಈ ಪ್ರತಿಭೆ ಈಗ ಅದ್ಭುತ ಕೈಗಳ ಜೊತೆ ಸೇರಿಕೊಂಡಿದೆ. ಅದಕ್ಕೆ ಖುಷಿಯಾಗುತ್ತಿದೆ. ಎಂದು ರಾಜಮೌಳಿ ಹೇಳಿದ್ದಾರೆ.

ಕಿರೀಟಿ ಬಗ್ಗೆ ಏನಂದ್ರು ಕ್ರೇಜಿಸ್ಟಾರ್!

ಕ್ರೇಜಿಸ್ಟಾರ್ ರವಿಚಂದ್ರನ್ ಕಿರೀಟಿ ಸಿನಿಮಾದಲ್ಲಿ ಸ್ಪೆಷಲ್ ರೋಲ್ ವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಕಿರೀಟಿ ತಂದೆಯಾಗಿ ಕಾಣಿಸಿಕೊಳ್ಳಲಿರುವ ರವಿಮಾವ ಸಿನಿಮಾ ಬಗ್ಗೆ ಸ್ಟಾರ್ ಕಾಸ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿರೀಟಿ ಏರ್ ಪೋರ್ಟ್ ನಲ್ಲಿ ಒಮ್ಮೆ ಭೇಟಿ ಮಾಡಿದ್ದೇವು. ನನಗೆ ನಟನೆ ಬಗ್ಗೆ ಸಾವಿರ ಪ್ರಶ್ನೆ ಕೇಳಿದ್ದರು. ಈ ಸಿನಿಮಾದಲ್ಲಿ ಕಿರೀಟಿಗೆ ಸಾರಥಿ ಬಂದು ರಾಧಾಕೃಷ್ಣ. ಹಿಂದೆ ಜನಾರ್ಧನ್ ರೆಡ್ಡಿಯವರ ಆಶೀರ್ವಾದ. ಶ್ರೀಲೀಲಾ ಇದ್ದಾರೆ, ಜನೀಲಿಯಾ ಇದ್ದಾರೆ. ನಾನೂ ಇದ್ದೀನಿ. ಇದಕ್ಕಿಂತ ಒಳ್ಳೆಯ ಪ್ಯಾಕೇಜ್ ಬೇಕಾ ನಿಮಗೆ? ಎಂದರು.

ಕನ್ನಡಕ್ಕೆ ಜೆನಿಲಿಯಾ ಕಂಬ್ಯಾಕ್!

ಶಿವರಾಜ್ ಕುಮಾರ್ ನಟನೆಯ ‘ಸತ್ಯ್ ಇನ್ ಲವ್’ ಸಿನಿಮಾದಲ್ಲಿ ನಟಿಸಿದ್ದ ಜೆನೀಲಿಯಾ ಮತ್ತೆ ಸ್ಯಾಂಡಲ್‌ವುಡ್‌ ಕ್ಕೆ ಮರಳಿದ್ದಾರೆ. ವಿವಾಹದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ಜೆನೀಲಿಯಾ 10 ವರ್ಷಗಳ ಬಳಿಕ ನಟನೆಗೆ ಹಿಂದಿರುಗಿದ್ದಾರೆ. 10 ವರ್ಷಗಳ ಬಳಿಕ ಮತ್ತೆ ನಟನೆಗೆ ಮರಳುತ್ತಿದ್ದೇನೆ. ಇದು ತುಂಬಾನೇ ಸ್ಪೆಷಲ್ ಪ್ರಾಜೆಕ್ಟ್. ನಿಮ್ಮ ಮೊದಲ ಸಿನಿಮಾ. ಈ ಸಿನಿಮಾದುದ್ದಕ್ಕೂ ನಾವು ಇರುತ್ತೇವೆ ಎಂದು ತಿಳಿಸಿದ್ದಾರೆ.

ಕಿರೀಟಿ ಇಂಟ್ರೂಡಕ್ಷನ್ ಟೀಸರ್ ಸೂಪರ್!

ಕಿರೀಟಿ ಸಿನಿಮಾದ ಮುಹೂರ್ತದ ವೇಳೆ ಹೀರೋ ಇಂಟ್ರೂಡಕ್ಷನ್ ಟೀಸರ್ ರಿಲೀಸ್ ಮಾಡಲಾಯಿತು. ಆಕ್ಷನ್, ಸ್ಟಂಟ್, ಡ್ಯಾನ್ಸ್, ಬೊಂಬಾಟ್ ಆಕ್ಟಿಂಗ್ ಎಲ್ಲರ ಮಿಶ್ರಣದ ಟೀಸರ್ ಝಲಕ್ ನೋಡಿ ಎಲ್ಲರೂ ಹುಬ್ಬೇರಿಸ್ತಿದ್ದಾರೆ. ಕಿರೀಟಿ ರೈಸಿಂಗ್ ಸ್ಟಾರ್ ಅಂತಾ ಕೊಂಡಾಡ್ತಿದ್ದಾರೆ.

ಕಿರೀಟಿ ಸಿನಿಮಾ ತೆಲುಗಿನ ಖ್ಯಾತ ಪ್ರೊಡಕ್ಷನ್ ಹೌಸ್ ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಡಿ ಅದ್ಧೂರಿ ಬಜೆಟ್ ನಲ್ಲಿ ತಯಾರಾಗ್ತಿರುವ 15ನೇ ಸಿನಿಮಾ. ಮಯಾಬಜಾರ್ ಸಿನಿಮಾ ಖ್ಯಾತಿಯ ರಾಧಾಕೃಷ್ಣರೆಡ್ಡಿ ನಿರ್ದೇಶನ, ಬಾಹುಬಲಿ ಛಾಯಾಗ್ರಾಹ ಕೆಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ಕೈ ಚಳಕದ, ಖ್ಯಾತ ಮ್ಯೂಸಿಕ್ ಡೈರೆಕ್ಟರ್ ದೇವಿಶ್ರೀಪ್ರಸಾದ್ ಮ್ಯೂಸಿಕ್ ಇಂಪು ಇರುವ, ಭಾರತದ ಬಹುಬೇಡಿಕೆಯ ಸ್ಟಂಟ್‌ ಮಾಸ್ಟರ್ ಪೀಟರ್ ಹೇನ್ ಆಕ್ಷನ್ ಸೀನ್ಸ್, ಕಲಾ ನಿರ್ದೇಶನ ಮಾಡಿರುವ ರವೀಂದರ್ ಈ ಸಿನಿಮಾದ ಕಲಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

Related posts

ಸರಳವಾಗಿ ನೆರವೇರಿದ ‘ವಾಮನ’ ಸಿನಿಮಾದ ಮುಹೂರ್ತ…ಇಂದಿನಿಂದ ಶೂಟಿಂಗ್ ಅಖಾಡಕ್ಕೆ ಧುಮುಕಿದ ಶೋಕ್ದಾರ್ ಧನ್ವೀರ್

Kannada Beatz

ರಾಯಲ್ ಚಾಲೆಂಜರ್ಸ್ ಅಭಿಮಾನಿಗಳಿಗಾಗಿ “RCB anthem 2022” ಈ ಹಾಡು

Kannada Beatz

ಪುನೀತ್, ದರ್ಶನ್ ಮತ್ತು ಸುದೀಪ್ ಸೇರಿ ಹೊಸ ಬಿಸಿನೆಸ್..! ಈ ಸ್ಪೆಷಲ್ ಸುದ್ದಿ ಓದಿ

administrator

Leave a Comment

Share via
Copy link
Powered by Social Snap