Kannada Beatz
Celebrities

ರಿಲೀಸ್ ಆಯ್ತು ‘ಫೋರ್ ವಾಲ್ಸ್’ ಟ್ರೇಲರ್… ಫೆಬ್ರವರಿ 11ಕ್ಕೆ ಸಿನಿಮಾ ತೆರೆಗೆ

ಫೋರ್ ವಾಲ್ಸ್ ಟ್ರೇಲರ್ ರಿಲೀಸ್..ಹೀರೋ ಅಚ್ಯುತ್ ಸ್ಟೈಲ್ ದಿಲ್ ದಾರ್!

ಪೋಷಕ ಪಾತ್ರ, ಖಳ ನಾಯಕನ ಪಾತ್ರ ಹೀಗೆ ತರಹೇವಾರಿ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ಅಚ್ಯುತ್ ಕುಮಾರ್ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿರುವ ಫೋರ್ ವಾಲ್ಸ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಫ್ಯಾಮಿಲಿ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಒಂದು ಕುಟುಂಬದ ಒಳಗೆ ನಡೆಯುವ ಕಥೆ ತಂದೆ ತನ್ನ ಮಕ್ಕಳ ಸುತ್ತ ಬದುಕನ್ನು ಹೇಗೆ ಕಟ್ಟುತ್ತಾನೆ ಅನ್ನೋದನ್ನು ಟ್ರೇಲರ್ ನಲ್ಲಿ ಅಚ್ಚುಕಟ್ಟಾಗಿ ಕಟ್ಟಿ ಕೊಡಲಾಗಿದೆ.

3 ಶೇಡ್ ನಲ್ಲಿ ಅಚ್ಯುತ್ ಮಿಂಚು!

ಫೋರ್ ವಾಲ್ಸ್ ಸಿನಿಮಾ ಟೀಸರ್, ಸಾಂಗ್ಸ್ ನಿಂದ ನಿರೀಕ್ಷೆ ಹುಟ್ಟಿಸಿತ್ತು. ಇದೀಗ ಬಿಡುಗಡೆಯಾಗಿರುವ ಆ ಟ್ರೇಲರ್ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಎಸ್ ಎಸ್ ಸಜ್ಜನ್ ಕಥೆ ಬರೆದು ನಿರ್ದೇಶನ ಮಾಡಿರುವ ಫೋರ್ ವಾಲ್ಸ್ ಸಿನಿಮಾದಲ್ಲಿ ಅಚ್ಯುತ್ ನಟ ನಟನಾಗಿ ಮೂರು ಶೇಡ್ ನಲ್ಲಿ ಮಿಂಚಿದ್ದು, ಅಚ್ಯುತ್ ಹೊಸ ಸ್ಟೈಲ್ ಚಿತ್ರಪ್ರೇಮಿಗಳಿಗೆ ಇಷ್ಟವಾಗಲಿದೆ.

ಫೆಬ್ರವರಿ 11ಕ್ಕೆ ಫೋರ್ ವಾಲ್ಸ್ ತೆರೆಗೆ!

ಡಾ. ಜಾನ್ಹವಿ ರಾಯಲ, ದತ್ತಣ್ಣ, ಭಾಸ್ಕರ್ ನೀನಾಸಂ, ಶ್ರೇಯಾ ಶೆಟ್ಟಿ, ಆಂಚಲ್ ಸೇರಿದಂತೆ ಹಲವು ಕಲಾವಿದರು ನಟಿಸಿರುವ ಫೋರ್ ವಾಲ್ಸ್ ಸಿನಿಮಾ ಇದೇ ತಿಂಗಳ 11ರಂದು ಬಿಡುಗಡೆಯಾಗಲಿದೆ. . ತೆಲುಗಿನ ರುದ್ರಮದೇವಿ, ಗರುಡವೇಗ ಸಿನಿಮಾಗಳಲ್ಲಿ ದುಡಿದ ಅನುಭವ ಇರುವ ವಿಡಿಆರ್ ಕ್ಯಾಮೆರಾ ವರ್ಕ್, ಆನಂದ ರಾಜಾವಿಕ್ರಮ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಎಸ್.ವಿ ಬ್ಯಾನರ್ ನಲ್ಲಿ ಟಿ.ವಿಶ್ವನಾಥ್ ನಾಯ್ಕ್ ನಿರ್ಮಾಣಗೊಂಡಿರುವ ಫೋರ್ ವಾಲ್ಸ್ ಕಂಟೆಂಟ್ ಓರಿಯಂಟೆಂಡ್ ಸಿನಿಮಾವಾಗಿದ್ದು, ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಸಂದೇಹವೇ ಇಲ್ಲ.

Related posts

ಫೋಟೋಗ್ರಾಫರ್ ನನ್ನ ಎದೆ ಭಾಗ & ಸೊಂಟದ ಫೋಟೋ ತೆಗೆದ ಎಂದ ಗಾಯಕಿ..!

administrator

ಆರ್.ಜಿ.ವಿ – ಉಪೇಂದ್ರ ಸಮಾಗಮದಲ್ಲಿ ಬರಲಿದೆ “I AM R” ಪ್ಯಾನ್ ಇಂಡಿಯಾ ಸಿನಿಮಾ.

Kannada Beatz

ಮಹಾಶಿವರಾತ್ರಿಯ ಸುಸಂದರ್ಭದಲ್ಲಿ ಗಾನಪ್ರಿಯ ಶಂಕರನಿಗೆ ಗಾನನಮನ ಸಲ್ಲಿಸಿದ ರಾಕ್ ಲೈನ್ ಮೊಮ್ಮಗಳು

Kannada Beatz

Leave a Comment

Share via
Copy link
Powered by Social Snap