HomeNews"ಗಿರ್ಕಿ" ಚಿತ್ರತಂಡದಿಂದ ಕನ್ನಡ ಜನತೆಗೆ ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿ ಹಬ್ಬದ ಶುಭಾಶಯಗಳು.

“ಗಿರ್ಕಿ” ಚಿತ್ರತಂಡದಿಂದ ಕನ್ನಡ ಜನತೆಗೆ ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಮಜಾ ಟಾಕೀಸ್ ಶೋ ಮೂಲಕ ಕಾಮಿಡಿ ಪಂಚ್ ಡೈಲಾಗ್ ಗಳಿಂದ ಕನ್ನಡ ಸಿನಿರಸಿಕರನ್ನು ರಂಜಿಸುತ್ತಾ ಬಂದಿರುವ ‘ತರಂಗ ವಿಶ್ವ’ ಅವರ ವಿಭಿನ್ನ ಪ್ರಯತ್ನ “ಗಿರ್ಕಿ”. ಸದಾ ಹೊಸತನಕ್ಕೆ ತುಡಿಯೋ ಅವರ ವ್ಯಕ್ತಿತ್ವದ ಅನಾವರಣ “ಗಿರ್ಕಿ”, ಒಂದು ನವಿರಾದ ಪ್ರೇಮಕಥೆ , ಮನಸಿಗೆ ಮುದ ನೀಡುವ ಹಾಡುಗಳು, ಕಾಮಿಡಿ, ಕೌತುಕ ಹುಟ್ಟಿಸುವ ಸನ್ನಿವೇಶಗಳ ಒಂದು ಗುಣಮಟ್ಟದ ಚಿತ್ರ.

ತರಂಗ ವಿಶ್ವ’ ರವರ ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಭುವನ್ ರವರ ವಾಸುಕಿ ಮೂವಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಾಣಗೊಂಡಿರೋ ಚೊಚ್ಚಲ ಚಿತ್ರಕ್ಕೆ ವಿಲೋಕ್ ರಾಜ್’ ಮತ್ತು ತರಂಗ ವಿಶ್ವ ನಾಯಕನಟರಾಗಿ ಅಭಿನಯಿಸಿದ್ದು. ನಾಯಕಿಯರಾಗಿ ಬಿಗ್ ಬಾಸ್ ಖ್ಯಾತಿಯ ‘ ದಿವ್ಯಾ ಉರುಡುಗ’ ಮತ್ತು ರಾಶಿ ಮಹದೇವ್ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಜೊತೆಗೆ ಕೆಲಸ ಮಾಡಿದ್ದ ವೀರೇಶ್ ಪಿ ಎಂ. ರವರ ನಿರ್ದೇಶನವಿದ್ದು, ವೀರ್ ಸಮರ್ಥ್ ಸಂಗೀತ, ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ರವರ ಸಾಹಿತ್ಯ , ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್, ರಘು ದೀಕ್ಷಿತ್ ಮತ್ತು ಚಿನ್ಮಯಿ ಶ್ರೀಪಾದ ಅವರ ಹಿನ್ನೆಲೆ ಗಾಯನ, ವಿನೋದ್ ರವರ ಸಾಹಸ ನಿರ್ದೇಶನ, ಈ ಚಿತ್ರಕ್ಕಿದೆ. ಚಿತ್ರದ ಎಲ್ಲಾ ಕೆಲಸಗಳನ್ನು ಮುಗಿಸಿ, ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು,ಅತೀ ಶೀಘ್ರದಲ್ಲೇ ಚಿತ್ರ ಬೆಳ್ಳಿತೆರೆಗೆ ಬರಲು ಸಿದ್ಧತೆಯಲ್ಲಿದೆ.

Must Read

spot_img
Share via
Copy link
Powered by Social Snap