Kannada Beatz
News

ನೈಜ ಘಟನೆಯ “ಸೀತಮ್ಮನ ಮಗ”

ಪತ್ರಕರ್ತ, ನಿರ್ಮಾಪಕ ಮತ್ತು ನಿರ್ದೇಶಕ ಯತಿರಾಜ್ ಹರಿಶ್ಚಂದ್ರ ಘಾಟ್‌ ನಲ್ಲಿ ನೋಡಿದಂತ ಘಟನೆಯನ್ನು ಎರಡು ಪಾತ್ರದಲ್ಲಿ ತೆಗೆದುಕೊಂಡು ಒಂದು ಕಥೆಯನ್ನು ಬರೆದು, ಕಥಾ ಸ್ಪರ್ಧೆಯಲ್ಲಿ ಮೂರನೆ ಬಹುಮಾನ ಸಿಕ್ಕಿತ್ತು.

ಈಗ ಅದೇ ಕಥೆಯು ಈಗ ’ಸೀತಮ್ಮನ ಮಗ’ ಹೆಸರಿನೊಂದಿಗೆ ಒಂದು ಪಾತ್ರವಾಗಿ ಸೃಷ್ಟಿಸಿ, ಅದನ್ನು ಚಿತ್ರವಾಗಿ ರೂಪಾಂತರಿಸುತ್ತಿದ್ದಾರೆ. ಸದರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜತೆಗೆ ಒಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಪಂಡರಹಳ್ಳಿಯ ನಿವೃತ್ತ ಶಿಕ್ಷಕ ಕೆ.ಮಂಜುನಾಥ್ ನಾಯಕ್ ನಿರ್ಮಾಣ ಮತ್ತು ಶಿಕ್ಷಕ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಪುತ್ರ ಸಮೀತ್‌ ನಾಯಕ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಮಗು ಸಾಕಬೇಕಾದರೆ ದಂಪತಿಗಳಿಗೆ ಕನಸು ಇರುತ್ತದೆ. ಅಂತಹ ಹಿನ್ನಲೆಯಲ್ಲಿ ಕನಸು ಒಡೆದು ಹೋಗುವ ಸಂದರ್ಭ ಬಂದಾಗ ಪುಟ್ಟ ಹುಡುಗ ಅದನ್ನು ಹೇಗೆ ಎದುರಿಸುತ್ತಾನೆ. ಇದಕ್ಕೆ ತಾಯಿ ಯಾವ ರೀತಿ ಪ್ರೋತ್ಸಾಹ ನೀಡುತ್ತಾಳೆ. ವಿರಾಮದ ತರುವಾಯ ಹೊಸ ವಿಷಯವೊಂದು ಬಿಚ್ಚಿಕೊಳ್ಳುತ್ತದೆ.
ಇದನ್ನು ಬದುಕಿನ ವಿಡಂಬನೆ, ಸಾವು ಬದುಕಿನ ಚಿತ್ರಣ ಅಂತಲೂ ತಿಳಿದುಕೊಳ್ಳಬಹುದು. ಹುಡುಗನ ದೃಷ್ಟಿಯಲ್ಲಿ ಕಷ್ಟ ಸುಖಗಳು ಹೇಗೆ ಕಾಣುತ್ತದೆ. ಮನುಷ್ಯರು ಹೇಗೆ ಕಾಣಿಸ್ತಾರೆ. ಪರಿಸ್ಥಿತಿಯಲ್ಲಿ ಆತನ ಮುಗ್ದತೆ ಏನು ಹೇಳುತ್ತದೆ. ಇದೆಲ್ಲಾವನ್ನು ಮೆಟ್ಟಿ ನಿಲ್ತಾನಾ? ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಇದರೊಂದಿಗೆ ಸ್ವಚ್ಚತೆ, ಪರಿಸರ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವ ಸನ್ನಿವೇಶಗಳು ಬರಲಿದೆ. ಮಕ್ಕಳ ಚಿತ್ರವಾಗಿ ಮೂಡಿಸಲು ವಯಸ್ಕರು ಮಾಡುವಂತ ಅಭ್ಯಾಸಗಳನ್ನು ತೋರಿಸುವುದಿಲ್ಲ. ಹಾಗೆಯೇ ಮಕ್ಕಳ ಮನಸ್ಸಿನಲ್ಲಿ ನಕರಾತ್ಮಕ ಅಂಶಗಳು ಬರುವಂತ ದೃಶ್ಯಗಳನ್ನು ತೆಗೆಯುವುದಿಲ್ಲ ಎನ್ನುತ್ತಾರೆ ಯತಿರಾಜ್.

ತಾಯಿ ಪಾತ್ರದಲ್ಲಿ ರಂಗಭೂಮಿ ನಟಿ ಚೈತ್ರ ಶ್ರೀನಿವಾಸ್, ಮಗನಾಗಿ ಮಾಸ್ಟರ್ ಚರಣ್‌ ಕಸಾಲ, ಸುಡುಗಾಡು ಸಿದ್ದನಾಗಿ ಬುಲೆಟ್‌ ರಾಜು, ಶಿಕ್ಷಕಿಯಾಗಿ ಭಾರತಿ, ಸೋನುಸಾಗರ ಮುಂತಾದವರು ನಟಿಸುತ್ತಿದ್ದಾರೆ. ನಿರ್ದೇಶಕರೆ ಸಾಹಿತ್ಯ ರಚಿಸಿರುವ ಎರಡು ಹಾಡುಗಳಿಗೆ ವಿನು ಮನಸು ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಜೀವನ್‌ರಾಜ್ ಅವರದಾಗಿದೆ. ಪಂಡರಹಳ್ಳಿಯಲ್ಲಿ ಒಂದೇ ಹಂತದಲ್ಲಿ 25 ದಿನಗಳ ಕಾಲ ಚಿತ್ರೀಕರಣವನ್ನು ಇದೇ ಹದಿನೈದರಿಂದ ಶುರು ಮಾಡಲು ತಂಡವು ಯೋಜನೆ ಹಾಕಿಕೊಂಡಿದೆ.

Related posts

‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರಕ್ಕೆ ಎಂಟ್ರಿ ಕೊಟ್ಟ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್

Kannada Beatz

The Script Room ಯೂಟ್ಯೂಬ್ ನಲ್ಲಿ ‘ಇರುವೆ’ ಕಿರುಚಿತ್ರ ಬಿಡುಗಡೆ..ಇದು ರಾಜೇಶ್ ರಾಮಸ್ವಾಮಿ ಹೊಸ ಪ್ರಯತ್ನ

Kannada Beatz

ಮತ್ತೆ ಶೂಟಿಂಗ್ ಅಖಾಡಕ್ಕೆ ಕರುನಾಡ ಚಕ್ರವರ್ತಿ…ನಾಳೆಯಿಂದ ಶಿವಣ್ಣನ 131 ಸಿನಿಮಾದ ಚಿತ್ರೀಕರಣ ಶುರು

Kannada Beatz

Leave a Comment

Share via
Copy link
Powered by Social Snap