Kannada Beatz
News

ಡೆವಿಲ್ ಜೊತೆಗೆ ಕುಡುಕನ ಎಂಟ್ರಿ.. ಪಿಯೊಟ್ ರಿಲೀಸ್

ಡೆವಿಲ್ ನೋಡಿ ಸೆಕೆಂಡ್ ಪಿಯೊಟ್ ನೋಡಿ : ಚಿತ್ರತಂಡ ಮನವಿ

ಪಿವಟ್ ಅಂತ ಯಾರನ್ನ ಕರೆಯುತ್ತಾರೆ ಅನ್ನೋದು ನಿಮಗೆಲ್ಲಾ ಗೊತ್ತಿರುವ ವಿಚಾರವೇ. ಕುಡಿಯುವುದಕ್ಕೆ‌ ಸಮಯವೇ ಬೇಕಿಲ್ಲ. ಸದಾ ಕುಡಿಯುವುದರ ಕಡೆಗೆ ಗಮನ ಹರಿಸುವವರನ್ನ ಪಿಯೊಟ್ ಅಂತಾರೆ. ಈ ರೀತಿ ಕುಡಿಯುವುದರಿಂದ ಏನೆಲ್ಲಾ ಸಮಸ್ಯೆ ಆಗುತ್ತೆ, ಕುಡಿತ ಬಿಡುವುದಕ್ಕೆ ಮನಸ್ಸು ಮಾಡುದಾಗ ಎಷ್ಟೆಲ್ಲಾ ಕಷ್ಟವಾಗುತ್ತೆ ಎಂಬ ಸಂದೇಶವನ್ನಿತ್ತು ಪಿಯೊಟ್ ಸಿನಿಮಾ ಬರ್ತಾ ಇದೆ. ಇದೆ ಡಿಸೆಂಬರ್ 12ಕ್ಕೆ ರಿಲೀಸ್ ಆಗ್ತಾ ಇದೆ. ಇಡೀ ಚಿತ್ರತಂಡ ಮಾಧ್ಯಮದವರ ಮುಂದೆ ತಮ್ಮ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಡೆವಿಲ್ ನೋಡಿದ ಮೇಲೆ ನಮ್ಮನ್ನು ಸ್ವಲ್ಪ ಬೆಳೆಸಿ ಎಂದು ಮನವಿ ಮಾಡಿದ್ದಾರೆ.

ಆಡಿಯೋ ರೈಟ್ಸ್ ಅನ್ನು ಲಹರಿ ಕಂಪನಿ ತೆಗೆದುಕೊಂಡಿದ್ದು ಸಿನಿಮಾ ಬಗ್ಗೆ ಲಹರಿ ವೇಲು ಹೇಳಿದ್ದು ಹೀಗೆ, ರಿಯಾಬು ಸೆಂಟರ್ ಗೆ ಕುಡಿತಕ್ಕರ ಅಡಿಕ್ಟ್ ಆದವರನ್ನ ಕರೆದುಕೊಂಡು ಹೋಗಿ, ಅವರಿಗೆ ಮರುಜೀವನ ಕೊಡಿಸುವ ಪ್ರಯತ್ನ ಮಾಡ್ತಾರೆ. ಅಲ್ಲಿ ಹೋದವರಿಗೆ ಅಲ್ಲಿನ ಕಷ್ಟ ಗೊತ್ತಾಗುತ್ತೆ. ಒಳ್ಳರ ಸಿನಿಮಾ ಮಾಡಿದ್ದೀರಾ. ನಾನು ಹಾಡುಗಳನ್ನ ಕೇಳಿದ್ದೆ ಮೆಸೇಜ್ ಇಷ್ಟು ಚೆನ್ನಾಗಿದೆ ಅಂತ ಗೊತ್ತಿರಲಿಲ್ಲ. ಈ ರೀತಿಯ ಸಿನಿಮಾ ಬೇಕಿತ್ತು ಎಲ್ಲರಿಗೂ ಆಲ್ ದಿ ಬೆಸ್ಟ್ ಅಂದ್ರು.

ವಿತರಕ ಪ್ರಶಾಂತ್ ಮಾತನಾಡು, ಸಿನಿಮಾ ನೋಡಿದ ಮೇಲೆ ತುಂಬಾ ಇಷ್ಟವಾಗಿ ಡಿಸ್ಟ್ರಿಬ್ಯೂಷನ್ ಗೆ ಒಪ್ಪಿಕೊಂಡೆವು‌. ನಿರ್ದೇಶಕ ಕಾರ್ತಿಕ್ ರಾಜ್ ಅವರು ಭೇಟಿ ಮಾಡಿದ ಮೇಲೆ ದರ್ಶನ್ ಅವರ ಡೆವಿಲ್ ರಿಲೀಸ್ ಟೈಮ್ ನಲ್ಲಿಯೇ ನಮ್ಮ‌ ಸಿನಿಮಾ ರಿಲೀಸ್ ಮಾಡ್ತಾಬಿದ್ದೀವಿ ಅಂದ್ರು. ಇವರ ಧೈರ್ಯ ಏನು ಅಂತ ಎಲ್ಲರಿಗೂ ಪ್ರಶ್ನೆ ಮೂಡುತ್ತೆ. ದರ್ಶನ್ ಸರ್ ಗೆ ಕಂಪೇರ್ ಮಾಡಿಕೊಳ್ಳುವುದಕ್ಕೆ ಆಗಲ್ಲ. ನಮ್ಮ ಕಂಟೆಂಟ್ ಬೇರೆ ಇದೆ. ಡೆವಿಲ್ ನಿಂದ ಆಚೆಗೂ ನಮ್ಮ ಸಿನಿಮಾಗೂ ಒಂದಷ್ಟು ಥಿಯೇಟರ್ ಗಳು ಸಿಕ್ಕಿವೆ. 20-25 ಸಿಂಗಕ್ ಸ್ಕ್ರೀನ್, 15 ಮಲ್ಟಿಪ್ಲೆಕ್ಸ್ ಸಿಗುತ್ತೆ ಎಂದಿದ್ದಾರೆ.

ನಿರ್ದೇಶಕ ಕಾರ್ತಿಕ್ ರಾಜ್ ಮಾತನಾಡಿ, ಪಿಯೊಟ್ ಅನ್ನೋದನ್ನ ಬೈತೀನಿ. ಇದೊಂದು ಲೇಬಲ್. ಕುಡುಕರನ್ನ ಪಿಯೊಟ್ ಎಂದು ಲೇಬಲ್ ಮಾಡ್ತಾರೆ‌. ಚಿಕ್ಕ ವಯಸ್ಸಿನಿಂದ ಆಲ್ಕೋಹಾಲ್ ಅಡಿಕ್ಷನ್ ಜನರನ್ನ ನೋಡಿದ್ದೀನಿ. ಅವರನ್ನ ಅರ್ಥ ಮಾಡಿಕೊಳ್ಳುವುದಕ್ಕೂ ಪ್ರಯತ್ನ ಪಟ್ಟಿದ್ದೀನಿ. ಯಾಕೆ ಕುಡೀತಾರೆ, ಅವರಲ್ಲಿ ಏನು ನೋವಿದೆ. ಅದನ್ನೆಲ್ಲಾ ತೋರಿಸಬೇಕು ಎಂಬುದಕ್ಕೆ ಈ ವಿಷಯವನ್ನ ತೆಗೆದುಕೊಂಡೆವು ಎಂದಿದ್ದಾರೆ.

ನಟ‌ ಲಿಖಿತ್ ಮಾತನಾಡುತ್ತಾ, ಈ ಸಿನಿಮಾಗೆ ಯಾವುದೇ ಬ್ಲಾಕ್ ಮಾರ್ಕ್ ಆಗಬಾರದು ಅನ್ನೋ ಕಾರಣಕ್ಕೆ ತುಂಬಾನೇ ಎಫರ್ಟ್ ಹಾಕಿ ಮಾಡಿದ್ದೀನಿ. ರಿಯಾಬಲ್ ಶೂಟ್ ಮಾಡಿದ್ದು ಹೇಗಿತ್ತು ಅಂದ್ರೆ ಈಗ ನೆನಪಿಸಿಕೊಂಡರು ಸೈಕ್ ಆಗಿ ಬಿಡುತ್ತೆ. ಇಲ್ಲಿವರೆಗೂ ನನಗೆ ಕುಡಿಯೋದಕ್ಕೆ ಮನಸ್ಸೆ ಬಂದಿಲ್ಲ. ಆಲ್ಕೋಹಾಲ್ ಮುಟ್ಟಿಲ್ಲ ಎಂದಿದ್ದಾರೆ.

ನಟಿ ಅಶ್ವಿನಿ ಚಾವರೆ, ಮರಾಠಿ, ಮಲಯಾಳಂ, ಹಿಂದಿ ಸಿನಿಮಾರಂಗದಲ್ಲಿ ಈಗಾಗಲೇ ಮಿಂಚ್ತಾ ಇದ್ದು, ಕನ್ನಡದಲ್ಲಿಯೂ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಪಿಯೊಟ್ ಅಶ್ವಿ ಅವರ ಡಬ್ಯೂ ಸಿನಿಮಾ ಆಗಿದೆ. ಇನ್ನು ಈ ಸಿನಿಮಾದಲ್ಲಿ ಒಂದು ಪದವನ್ನು ಬಳಸಿದ್ದರು. ಸೂ* ಎಂಬ ಪದವನ್ನ ಸದ್ಯ ಸೆನ್ಸಾರ್ ಸೂಚನೆ ಮೇರೆಗೆ ತೆಗೆಯಲಾಗಿದೆ. ಈ ಸಿನಿಮಾದಲ್ಲಿ ನಾಯಕನಾಗಿ ಲಿಕಿತ್ ಕಾಣಿಸಿಕೊಂಡಿದ್ದು, ಜೋಡಿಯಾಗಿ ಅಶ್ವಿನಿ ಚಾವರೆ ಮಿಂಚಿದ್ದಾರೆ. ಗ್ರೇಸ್ ಫಿಕ್ಮ ಕಂಪನಿ ನಿರ್ಮಾಣ ಮಾಡಿದ್ದು, ಡಿಸೆಂಬರ್ 12 ರಂದು ಸಿನಿಮಾ ತೆರೆಗೆ ಬರ್ತಿದೆ.

Related posts

ಅದ್ದೂರಿ ಸೆಟ್ ನಲ್ಲಿ ರೆಟ್ರೊ ಶೈಲಿಯ ಹಾಡಿನೊಂದಿಗೆ ಪೂರ್ಣವಾಯಿತು “ಪರಿಮಳ ಡಿಸೋಜಾ” ಚಿತ್ರದ ಚಿತ್ರೀಕರಣ

Kannada Beatz

ಬೆಂಗಳೂರಿನಲ್ಲಿ ನ್ಯಾಚುರಲ್ ಸ್ಟಾರ್…‘ಹಾಯ್ ನಾನ್ನ’ ಪ್ರಮೋಷನ್ ನಲ್ಲಿ ನಾನಿ ಬ್ಯುಸಿ

Kannada Beatz

ಸಂಚಾರಿ ವಿಜಯ್‌ ನಟನೆಯ ‘ತಲೆದಂಡ’ ಸಿನಿಮಾ ಏಪ್ರಿಲ್ 1 ರಂದು ಮಲ್ಟಿಫ್ಲೆಕ್ಸ್ ನಲ್ಲಿ ಬಿಡುಗಡೆ

Kannada Beatz

Leave a Comment

Share via
Copy link
Powered by Social Snap