Kannada Beatz
News

ಸೆನ್ಸಾರ್ ಪಾಸಾದ ‘ಚೌಕಿದಾರ್’ಗೆ ಸಿಕ್ತು ಯು/ಎ ಸರ್ಟಿಫಿಕೇಟ್

ಸೆನ್ಸಾರ್ ಮಂಡಳಿಯಿಂದ ಚೌಕಿದಾರ್ ಗೆ ಮೆಚ್ಚುಗೆ.. ಪೃಥ್ವಿ-ಧನ್ಯ ಸಿನಿಮಾಗೆ ಯು/ಎ ಸರ್ಟಿಫಿಕೇಟ್

ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮ್​​ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಚೌಕಿದಾರ್’ ಸಿನಿಮಾ ಸೆನ್ಸಾರ್ ಪಾಸಾಗಿದೆ. ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಸೆನ್ಸಾರ್ ಮಂಡಳಿ ಸದಸ್ಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅದರಲ್ಲಿಯೂ ಹಿರಿಯ ನಟ ಸಾಯಿ ಕುಮಾರ್ ಅವರ ಅಭಿನಯವನ್ನು ಕೊಂಡಾಡಿದ್ದಾರೆ. ಮನಸ್ಸಿಗೆ ಹತ್ತಿರ ಎನಿಸುವ ಪಾತ್ರದಲ್ಲಿ ಸಾಯಿ ಕುಮಾರ್ ಅಮೋಘವಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದಲ್ಲಿ ಚೌಕಿದಾರ್ ಚಿತ್ರ ಮೂಡಿ ಬಂದಿದೆ. ಅವರ ಕಥೆಗೆ ಕಲ್ಲಹಳ್ಳಿ ಚಂದ್ರಶೇಖರ್ ಹಣ ಹಾಕಿದ್ದು, ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಹಾಡು, ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ.

ಪೃಥ್ವಿ ನಾಯಕನಾಗಿ ಹಾಗೂ ಧನ್ಯ ನಾಯಕಿಯಾಗಿ ನಟಿಸಿರುವ ಚೌಕಿದಾರ್ ಸಿನಿಮಾದಲ್ಲಿ ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಹಿರಿಯ ನಟ ಸಾಯಿ ಕುಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ, ಸುಧಾರಾಣಿ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಸಚಿನ್ ಬಸ್ರೂರು ಸಂಗೀತ, ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿದೆ. ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದು, ಮುರುಳಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಜ್ಞಾನೇಶ್ ಮಾತಾಡ್ ಸಂಕಲನ, ಜೈ ಸುಬ್ರಹ್ಮಣ್ಯ ಸಾಹಸ ದೃಶ್ಯಗಳು ಚಿತ್ರಕ್ಕಿದೆ. `ಚೌಕಿದಾರ್’ ಬಹು ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಶೀಘ್ರದಲ್ಲೇ ಚಿತ್ರತಂಡ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ.

Related posts

“ಪರಿಮಳ ಡಿಸೋಜಾ” ಚಿತ್ರಕ್ಕಾಗಿ ಅಮ್ಮನ ಹಾಡು ಹಾಡಿದ ಜೋಗಿ ಪ್ರೇಮ್ .

Kannada Beatz

ಸಮಂತಾ ನಟನೆಯ “ಯಶೋದ” ಚಿತ್ರದ ಚಿತ್ರೀಕರಣ ಮುಕ್ತಾಯ…

Kannada Beatz

‘ಪ್ರೇಕ್ಷಕರ ಮೆಚ್ಚುಗೆ ಪಡೆದ ನೋಡಿದವರು ಏನಂತಾರೆ’ ಸಿನಿಮಾ..ಚಿತ್ರಪ್ರೇಮಿಗಳ ಪ್ರೀತಿಗೆ ನವೀನ್ ಶಂಕರ್ ಧನ್ಯವಾದ

Kannada Beatz

Leave a Comment

Share via
Copy link
Powered by Social Snap